ಗೌಪ್ಯವಾಗಿ ತೆಲಂಗಾಣಕ್ಕೆ ನೀರು ಬಿಡುವ ಅವಶ್ಯಕತೆ ಏನಿತ್ತು?; ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಯತ್ನಾಳ್​ | Government

dk - 2025-02-27T182842.811
Published on

Government: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಗೌಪ್ಯವಾಗಿ ತೆಲಂಗಾಣ ರಾಜ್ಯಕ್ಕೆ ನೀರು ಬಿಡುವ ಅವಶ್ಯಕತೆ ಏನಿತ್ತು ? ಯಾರ ಒತ್ತಡಕ್ಕೆ ನೀರನ್ನು ಬಿಟ್ಟಿದ್ದು ಎಂದು ಸರ್ಕಾರ ತಿಳಿಸಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಒತ್ತಾಯಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಈ ಕುರಿತು ಹಂಚಿಕೊಂಡಿರುವ ಯತ್ನಾಳ್, ''ಮನೆಗೆ ಮಾರಿ, ಊರಿಗೆ ಉಪಕಾರಿ ಧೋರಣೆಯನ್ನು ಅನುಸರಿಸಿ ನಮ್ಮ ರೈತರ ಹಿತವನ್ನು ಕಾಪಾಡಬೇಕಾಗಿರುವ ಸರ್ಕಾರ ಬೇರೆ ರಾಜ್ಯಕ್ಕೆ ನೀರು ಹರಿಸಿದ್ದು ತಪ್ಪು. ಇದೆ ರೀತಿ ನಮಗೆ ನೀರಿನ ಅವಶ್ಯವಿದ್ದಾಗ ತೆಲಂಗಾಣವಾಗಲಿ, ತಮಿಳುನಾಡಾಗಲಿ ಬಿಟ್ಟಿರುವ ನಿದರ್ಶನ ಅತ್ಯಂತ ವಿರಳ'' ಎಂದಿದ್ದಾರೆ.

ನ್ಯಾ.ಬೃಜೇಶ್ ಕುಮಾರ್ ನೇತೃತ್ವದ ನ್ಯಾಯಾಧೀಕರಣ ತೀರ್ಪು ನೀಡಿದಾಗ ಜಲಾಶಯದ ಮಟ್ಟ ಹೆಚ್ಚಳ ಮಾಡದಂತೆ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋದ ತೆಲಂಗಾಣಕ್ಕೆ ಮಾನವೀಯತೆ ತೋರಿಸುವ ಅವಶ್ಯ ಇದೆಯೇ? ಆಲಮಟ್ಟಿಯ ನೀರಿನ ಅವಶ್ಯ ತೆಲಂಗಾಣಕ್ಕೆ ಇದ್ದಲ್ಲಿ ಕೂಡಲೇ ರಿಟ್ ಅರ್ಜಿಯನ್ನು ವಾಪಾಸ್ ಪಡೆದು ಮನವಿ ಸಲ್ಲಿಸಲಿ. ಅಲ್ಲಿಯವರೆಗೆ, ನೀರು ಬಿಡಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net