ಎಲ್ಲ ಸತ್ವ ತತ್ವಗಳಲ್ಲಿ ಭಗವಂತನ ಚೇತನ : ಶ್ರೀ ಮೋಹನದಾಸ ಪರಹಂಸ ಸ್ವಾಮೀಜಿ ಆಶೀರ್ವಚನ

New Project (9)
Published on

ನೆಲ್ಯಾಡಿ: ವಿಕೃತ ಮನೋಭಾವವಿಲ್ಲದ ಪರಿಶುದ್ಧ ಮನಸ್ಸು, ಭಾವದಿಂದ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳಲ್ಲಿ ಸಮರ್ಪಣಾಭಾವದಿಂದ ತೊಡಗಿಸಿಕೊಂಡರೆ ನಿಜವಾದ ಭಗವಂತನನ್ನು ಕಾಣಲು ಸಾಧ್ಯ. ಸರ್ವವ್ಯಾಪಿ ಭಗವಂತ ಕೇವಲ ಗರ್ಭ ಗುಡಿಯಲ್ಲಿ ಮಾತ್ರವಲ್ಲ ನಮ್ಮೊಳಗಿನ ಎಲ್ಲ ಸತ್ವ, ತತ್ವಗಳಲ್ಲಿ ಅಡಕವಾಗಿದ್ದಾನೆ ಎನ್ನುವ ಸತ್ಯವನ್ನು ನಾವಿನ್ನೂ ಅರ್ಥ ಮಾಡಿಕೊಂಡಿಲ್ಲ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಮಂಗಳವಾರ ಕಡಬಕೌಕ್ರಾಡಿ ಗ್ರಾಮದ ದೋಂತಿಲ ಶ್ರೀಮಹಾವಿಷ್ಣು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ದಾರದ ಪ್ರಯುಕ್ತ ಷಡಾಧಾರ ಪ್ರತಿಷ್ಠಾಪನೆ ಹಾಗೂ ಗರ್ಭನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇವಳದ ತಂತ್ರಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿ, ಎಸ್‌ಕೆಡಿಆರ್‌ಡಿಪಿ ಕ್ಷೇತ್ರ ಮೇಲ್ವಿಚಾರಕ ಆನಂದ ಡಿ.ಬಿ, ಶಿಲ್ಪಿ ಗುಣವಂತೇಶ್ವರ ಭಟ್, ದೇವಳದ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ಬಾಳ್ತಿಲ್ಲಾಯ ಉಪಸ್ಥಿತರಿದ್ದರು.

ಕಾರ್ಯದರ್ಶಿ ರವಿ ಭಟ್ ಸ್ವಾಗತಿಸಿದರು. ಮಹಾಬಲ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಉದಯ ಕುಮಾರ್ ಗೌಡ ವಂದಿಸಿದರು. ಚಿನ್ಮಯಿ ನಿರೂಪಿಸಿದರು.

ಕೆಮ್ಮಿಂಜೆ ಕಾರ್ತಿಕ್ ತಂತ್ರಿ ಮತ್ತು ಸಹಪುರೋಹಿತರು ಷಡಾಧಾರ ಕಾರ್ಯಕ್ರಮದ ವೈದಿಕ ವಿಧಿವಿಧಾನ ನಡೆಸಿಕೊಟ್ಟರು. ಆಡಳಿತ ಸಮಿತಿ ಸದಸ್ಯರು, ಭಕ್ತರು ಬಂಗಾರದ ನಾಣ್ಯ ಅರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net