ಬಹುಪಾಲು ಸಮಯವನ್ನು ವಿಮಾನದ ಮೇಲೆಯೇ ಕಳೆಯುವ ಪೈಲಟ್ಗಳು ಏನೆಲ್ಲ ಮಾಡುತ್ತಾರೆ? ಕಾಕ್ಪಿಟ್ನಲ್ಲಿ ಕುಳಿತುಕೊಂಡು ಹೇಗೆ ಕಾಲಕಳೆಯುತ್ತಾರೆ ಎಂಬುದನ್ನು ಜಗತ್ತಿನಾದ್ಯಂತ ಇರುವ ಹಲವು ಪೈಲಟ್ಗಳು ಹೇಳಿಕೊಂಡಿದ್ದಾರೆ.
ಚೆಸ್ ಆಡುವುದು...ವಿಮಾನವನ್ನು ಅಪಾಯಕಾರಿಯಾಗಿ ಲ್ಯಾಂಡ್ ಮಾಡಲು ಒಬ್ಬರಿಗೊಬ್ಬರು ಚಾಲೆಂಜ್ ಮಾಡಿಕೊಳ್ಳುವುದು ಸಾಮಾನ್ಯವಂತೆ.
ಅಮೆರಿಕ ಮೂಲಕ ಪ್ರಶ್ನೋತ್ತರ ತಾಣವಾದ Quora ದಲ್ಲಿ ಅನೇಕ ಪೈಲಟ್ಗಳು ಇದನ್ನೆಲ್ಲ ಮುಚ್ಚುಮರೆ ಇಲ್ಲದೆ ಹಂಚಿಕೊಂಡಿದ್ದಾರೆ. ಆದರೆ ವಿಮಾನದ ಕಾಕ್ಪಿಟ್ನಲ್ಲಿ ತಾವು ಮಾಡುವುದನ್ನೆಲ್ಲ ಪೈಲಟ್ಗಳು ಹೇಳಿಕೊಂಡಿದ್ದನ್ನು ಕೇಳಿದರೆ ಪ್ರಯಾಣಿಕರಿಗೆ ತುಸು ಆತಂಕವಾಗದೆ ಇರದು.
ಸಾಮಾನ್ಯವಾಗಿ ಸುದೀರ್ಘ ಪ್ರಯಾಣ ಮಾಡಬೇಕಾದಾಗ ಕ್ಯಾಪ್ಟನ್ಗಳು ಹೇಗೆ ಸಮಯ ಕಳೆಯುತ್ತಾರೆ? ಬೇಸರ ಹೇಗೆ ಕಳೆಯುತ್ತಾರೆ ಎಂಬುದು ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಅನೇಕ ಪೈಲಟ್ಗಳು ಓಪನ್ ಆಗಿ ಉತ್ತರಿಸಿದ್ದಾರೆ.

ಕೆಲವೊಮ್ಮೆ ನಮಗೆ ತುಂಬ ಬೇಸರವಾಗುತ್ತದೆ. ಆಗ ನಮ್ಮನಮ್ಮಲ್ಲೇ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತೇವೆ. ನಾವು ನಿಜಕ್ಕೂ ಮಾಡಬಾರದು, ಅಂಥ ಕೆಲಸಗಳ ಬಗ್ಗೆ ಚಾಲೆಂಜ್ ಮಾಡಿಕೊಳ್ಳುತ್ತೇವೆ. ಅಂದರೆ ಥ್ರೋಟಲ್ನ್ನು ಮುಟ್ಟದೆ ಪೈಲಟ್ ಎಷ್ಟು ದೂರದವರೆಗೆ ವಿಮಾನವನ್ನು ಕೊಂಡೊಯ್ಯಬಹುದು ಅಥವಾ ಹೇಗೆ ಲ್ಯಾಂಡ್ ಮಾಡಬಹುದು ಎಂಬ ವಿಚಾರದಲ್ಲಿ ಬೆಟ್ ಕಟ್ಟಲಾಗುತ್ತದೆ. ನಾವೂ ಇದನ್ನು ಮಾಡಿದ್ದೇವೆ ಎಂದು ಅಮೆರಿಕದ ಓರ್ವ ಪೈಲಟ್ ಝುಮ್ವಾಲ್ಟ್ ಹೇಳಿದ್ದಾರೆ. ಆದರೆ ಇದು ನಿಜಕ್ಕೂ ಅಪಾಯಕಾರಿ. ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಅದರ ವೇಗ ನಿಯಂತ್ರಣ ಮಾಡಲು ಥ್ರೋಟಲ್ ಅತ್ಯಗತ್ಯ. ಅದನ್ನು ಪೈಲಟ್ಗಳು ಮುಟ್ಟದೆ ವಿಮಾನ ಲ್ಯಾಂಡ್ ಮಾಡುವುದು ತೀವ್ರ ಅಪಾಯಕಾರಿ ಎಂದೂ ಅವರು ಹೇಳಿದ್ದಾರೆ.
ಬರೀ ಇದಷ್ಟೇ ಅಲ್ಲ. ಇಂಥ ಹಲವು ಅನೇಕ ಅಪಾಯಕಾರಿ ಸವಾಲುಗಳನ್ನು ಪರಸ್ಪರ ನಮ್ಮಲ್ಲೇ ಹಾಕಿಕೊಳ್ಳಲಾಗುತ್ತದೆ. ಇದರಲ್ಲಿ ಒಂದು ಥ್ರಿಲ್ ಸಿಗುತ್ತದೆ ಎಂದವರು ತಿಳಿಸಿದ್ದಾರೆ.
ಹಾಗೇ ಫಿಲ್ ಸೀಲಿ ಎಂಬ ಪೈಲಟ್ ಮತ್ತೊಂದು ವಿಷಯ ಹೇಳಿದ್ದಾರೆ. ಕೆಲವೊಮ್ಮೆ ಮೋಡಗಳನ್ನು ನೋಡಿನೋಡಿ ಬೇಸರ ಹುಟ್ಟುತ್ತದೆ. ಆಗೆಲ್ಲ, ವಿಮಾನದೊಳಗೆ ಇರುವ ಪ್ರಯಾಣಿಕರನ್ನು ನೋಡುತ್ತ ಕಾಲ ಕಳೆಯುತ್ತೇವೆ. ಅವರನ್ನೆಲ್ಲ ಗಮನಿಸುತ್ತ ಕುಳಿತರೆ ಸಮಯ ಸರಿದದ್ದು ಗೊತ್ತಾಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮೃತ ಉದ್ಯೋಗದಾತನ ಎಟಿಎಂ ಕಾರ್ಡ್ ಬಳಸಿ ಆಕೆ ಕದ್ದದ್ದು ಬರೊಬ್ಬರಿ 35 ಲಕ್ಷ ರೂ.
ಹಾಗೇ ಇನ್ನೋರ್ವ ಪೈಲಟ್ ತನ್ನ ಸ್ನೇಹಿತನೋರ್ವ ಬೇಸರ ಕಳೆಯಲು ಮಧ್ಯದಲ್ಲೇ ಸಣ್ಣ ನಿದ್ರೆಗೆ ಜಾರುತ್ತಿದ್ದ ಎಂಬ ಭಯ ಹುಟ್ಟಿಸುವ ವಿಚಾರವನ್ನೂ ತಿಳಿಸಿದ್ದಾರೆ. ಆತ ಆಟೋ ಪೈಲಟ್ ಮೋಡ್ಗೆ ಸ್ವಿಚ್ ಆನ್ ಮಾಡಿ ತಾನು ಸ್ವಲ್ಪ ಸಮಯ ನಿದ್ದೆಗೆ ಜಾರುತ್ತಿದ್ದ. ಯಾವಾಗ ವಿಮಾನ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿದ್ದಂತೆ ಎಚ್ಚರಗೊಳ್ಳುತ್ತಿದ್ದ. ಆದರೆ ಇದೂ ಕೂಡ ಒಳ್ಳೆಯದಲ್ಲ ಎಂದವರು ತಿಳಿಸಿದ್ದಾರೆ.
ಪೈಲಟ್ ಡೇನಿಯಲ್ ಹಿಕ್ಮ್ಯಾನ್ ಎಂಬುವರು ಇನ್ನೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ಒಂದಷ್ಟು ಪೈಲಟ್ಗಳು ಎರೋಪ್ಲೇನ್ ಮೇಲೆಯೇ ಸೆಕ್ಸ್ ಮಾಡುತ್ತಿದ್ದರು. ಈಗಲೂ ಕೆಲವರು ಹಾಗೆ ಮಾಡುತ್ತಾರೆ ಎಂಬ ಮುಜುಗರದ ವಿಷಯವನ್ನೂ ತಿಳಿಸಿದ್ದಾರೆ. ಕೆಲವರು ಮದ್ಯ ಸೇವಿಸುತ್ತಿದ್ದರು ಎಂಬುದನ್ನು ಹೇಳಿದ್ದಾರೆ. ಇದನ್ನೂ ಓದಿ: ಪ್ರಣಬ್ ಮುಖರ್ಜಿ ಆರೋಗ್ಯ ಮತ್ತಷ್ಟು ಕ್ಷೀಣ; ಶ್ವಾಸಕೋಶದ ಸೋಂಕು ಉಲ್ಬಣ
ಈಗ ಇಷ್ಟೆಲ್ಲ ಕೇಳಿದ ಮೇಲೆ ಪ್ರಯಾಣಿಕರಲ್ಲೂ ಆತಂಕ ಶುರುವಾಗಿದೆ. (ಏಜೆನ್ಸೀಸ್)