ಪ್ರಧಾನಿಯನ್ನು ಅವಹೇಳನ ಮಾಡಿದ ಯುವಕರಿಗೆ ಏನಾಯಿತು?

Modi 5 March 20
Published on

ಆಳಂದ: ಪ್ರಧಾನಿಯವರನ್ನು ಅವಹೇಳನ ಮಾಡಿ ವಾಟ್ಸ್ ಆಪ್ ಹಾಗೂ ಟಿಕ್​ಟಾಕ್​ನಲ್ಲಿ ವಿಡಿಯೋ ಹರಿಬಿಟ್ಟ ಇಬ್ಬರು ಯುವಕರನ್ನು ನಿಂಬರ್ಗಾ ಪೊಲೀಸರು ಬಂಧಿಸಿದ್ದಾರೆ.

ಇಸಾಕ್ ಅತ್ತರ್, ಮೌಲಾ ಹೆಬಳಿ ಬಂಧಿತರು. ಅತ್ತರ್ ಎಂಬಾತ ಯಳಸಂಗಿ ಗ್ರಾಮದಲ್ಲಿ 2 ವರ್ಷಗಳಿಂದ ಚಹಾ ಮಾರಿ ಜೀವನ ನಡೆಸುತ್ತಿದ್ದರೆ, ಮೌಲಾ ಎಂಬಾತ ಹೆಬಳಿ ಗ್ರಾಮದಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದಾನೆ. ಇವರಿಬ್ಬರೂ ಟಿಕ್​ಟಾಕ್​ನಲ್ಲಿ ಪ್ರಧಾನಿ ಹಾಗೂ ಹಿಂದು ಧರ್ಮವನ್ನು ಅವಹೇಳನ ಮಾಡಿದ್ದಲ್ಲದೆ ಹಿಂದು ಮಹಿಳೆಯರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಮಾಹಿತಿ ನೀಡುತ್ತಲೇ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net