

ಬೆಂಗಳೂರು: ಕರೊನಾ ಸೋಂಕು ಹರಡುತ್ತಿರುವುದು ಗೊತ್ತಾದ ಬೆನ್ನಲ್ಲೆ ಲಾಕ್ಡೌನ್ ಘೋಷಣೆಯಾಗಿತ್ತು. ಎಲ್ಲರೂ ಮನೆಯಲ್ಲೇ ಇದ್ದು ಸುರಕ್ಷಿತವಾಗಿದ್ದರು. ಮನೆ ಮನೆಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದ ಡನ್ಜೋ ಸಂಸ್ಥೆ ಕುತೂಹಲಕಾರಿ ಅಂಶವನ್ನು ಬಹಿರಂಗಪಡಿಸಿದೆ. ಅದೇನು ಗೊತ್ತೆ? ಬೆಂಗಳೂರು, ಪುಣೆ, ಚೆನ್ನೈ, ಜೈಪುರ, ಮುಂಬೈ, ಹೈದರಾಬಾದ್ಗಳಲ್ಲಿ ಅತಿ ಹೆಚ್ಚು ಪೂರೈಕೆಯಾ ವಸ್ತುಗಳ ವಿವರವನ್ನು ಟ್ವಿಟರ್ ಮೂಲಕ ಬಹಿರಂಗಪಡಿಸಿದೆ. ಇದು ಅಚ್ಚರಿಯನ್ನು ಹುಟ್ಟುಹಾಕಿದೆ!
ಚೆನ್ನೈ ಮತ್ತು ಜೈಪುರದಲ್ಲಿರುವವರು ಹೆಚ್ಚಾಗಿ ಕೈಗಳ ಶುಚಿತ್ವದ ಬಗ್ಗೆ ಗಮನಹರಿಸಿದ್ದು ಕಂಡುಬಂದಿದ್ದು ಅತಿಹೆಚ್ಚು ಹ್ಯಾಂಡ್ ವಾಷ್ ಖರೀದಿಸಿದ್ದಾರೆ. ಅದೇ ರೀತಿ ಮುಂಬೈನಲ್ಲಿ ಲಾಕ್ಡೌನ್, ಸೋಷಿಯಲ್ ಡಿಸ್ಟೆನ್ಸಿಂಗ್ನ ಬೇಸರ ನೀಗಿಸಲು ಜನ ಸುರಕ್ಷಿತ ಲೈಂಗಿಕ ಚಟುವಟಿಕೆಗಳಲ್ಲಿ ವ್ಯಸ್ತರಾದುದು ಬಹಿರಂಗವಾಗಿದೆ. ಆ ನಗರದಲ್ಲಿ ಅತಿಹೆಚ್ಚು ಕಾಂಡೋಮ್ ಸರಬರಾಜು ಆಗಿರುವುದನ್ನು ಡನ್ಜೋ ಬಹಿರಂಗಪಡಿಸಿದೆ. ಇನ್ನು ಹೈದರಾಬಾದ್ನಲ್ಲಿ ಐ ಪಿಲ್ ಗುಳಿಗೆಗಳು ಹೆಚ್ಚು ಮಾರಾಟವಾಗಿವೆ.
ಇದೇ ರೀತಿ ಪುಣೆ ಮತ್ತು ಬೆಂಗಳೂರುಗಳಲ್ಲಿ ಕೂಡ ಜನ ಬೇಸರ ಕಳೆಯಲು ಲೈಂಗಿಕ ಚಟುವಟಿಕೆಗೆ ಮೊರೆ ಹೋಗಿದ್ದು ಕಂಡುಬಂದಿದೆ. ಇಲ್ಲಿ ಕಾಂಡೋಮ್ಗಿಂತ ಹೆಚ್ಚು ಪ್ರೆಗ್ನೆನ್ಸಿ ಕಿಟ್ಗಳು ಪೂರೈಕೆಯಾಗಿವೆ. ಈ ಕುರಿತ ವಿವರವನ್ನೂ ಡನ್ಜೋ ಸಂಸ್ಥೆ ಬಹಿರಂಗಪಡಿಸಿದೆ. ಕಾಂಡೋಮ್ ಬಳಕೆ ಹೆಚ್ಚಾಗಿರುವ ವಿಷಯ ಲಾಕ್ಡೌನ್ ಘೋಷಣೆಯಾದ ಬೆನ್ನಿಗೇ ವರದಿಯಾಗಿತ್ತು. (ಏಜೆನ್ಸೀಸ್)