ಏನ್ ಮಾಡ್ತಿದ್ದೀಯಾ ಎನುವಷ್ಟರಲ್ಲಿ ಹೋಯ್ತು ಪ್ರಾಣ.. ಗಲಾಟೆ ಬಿಡಿಸಲು ಮುಂದಾಗಿದ್ದೇ ತಪ್ಪಾ? | Crime

dk - 2025-05-27T170346.879
Published on

Crime: ಬಾರ್​ನಲ್ಲಿ ಇಬ್ಬರು ನಡುವೆ ಗಲಾಟೆ ನಡೆಯುತ್ತಿದ್ದ ವೇಳೆ ಜಗಳ ಬಿಡಿಸಲು ಹೋದ ಮೂರನೇ ವ್ಯಕ್ತಿಗೆ ಬಿಯರ್​ ಬಾಟಲಿಯಿಂದ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಘಟನೆ ಹೈದರಾಬಾದ್​ನ ಉಪ್ಪಳ ಪ್ರದೇಶದ ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ನಾಗರ್ ಕರ್ನೂಲ್ ಜಿಲ್ಲೆಯ ತಿಮ್ಮಾಜಿ ಪೇಟಾ ಗ್ರಾಮದವರಾದ ಭಾಸ್ಕರ್ ಪುತ್ರ ಪವನ್​(26)ಮೃತ ಯುವಕ. ಮೃತನ ತಂದೆ ಭಾಸ್ಕರ್​ ನಗರ ಅಂಬರ್‌ಪೇಟೆಯಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬಾರ್​​ ಮ್ಯಾನೇಜರ್ ವಿರುದ್ಧ ಹಾಗೂ ತನ್ನ ಮಗನನ್ನು ಕೊಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಂದೆ ಭಾಸ್ಕರ್​ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಏನು..?

ಭಾನುವಾರ ರಾತ್ರಿ, ಪವನ್ ಕುಮಾರ್ ತಮ್ಮ ಸ್ನೇಹಿತ ಋಷಿಕೇಶ ಜತೆ ರಾಮಂತಪುರದ ಗುಡ್ ಡೇ ಬಾರ್‌ಗೆ ಹೋಗಿದ್ದರು. ಅಂಬರ್‌ಪೇಟೆಯ ನಿವಾಸಿ ಶ್ರವಣ್ ಕುಮಾರ್ ಗೌಡ ಮದ್ಯ ಸೇವನೆ ಮಾಡುತ್ತಿದ್ದಾಗ, ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಹರಿಕೃಷ್ಣ ಎಂಬವರು ವ್ಯಕ್ತಿಯೊಂದಿಗೆ ವಾಗ್ವಾದ ನಡೆಸಿ, ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದು, ಗಲಾಟೆ ಆರಂಭಿಸಿದ್ದಾರೆ. ಹತ್ತಿರದಲ್ಲಿದ್ದ ಪವನ್ ಕುಮಾರ್ ಅವರನ್ನು ತಡೆಯಲು ಪ್ರಯತ್ನಿಸಿದಾಗ, ಶ್ರವಣ್ ಕುಮಾರ್ ಬಿಯರ್ ಬಾಟಲಿಯಿಂದ ಪವನ್ ತಲೆಗೆ ಬಲವಾಗಿ ಹೊಡೆದರು. ಗಂಭೀರವಾಗಿ ಗಾಯಗೊಂಡ ಪವನ್ ಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net