ಕೊಲೆಯಾದ ಮಹಿಳೆ 18 ತಿಂಗಳ ಬಳಿಕ ಪ್ರತ್ಯಕ್ಷ!: ಕೋರ್ಟ್​ನ ತೀರ್ಪು ಕಾಯುತ್ತಿದ್ದ ಪೊಲೀಸರಿಗೆ ಶಾಕ್! | Murdered

dk - 2025-05-27T131356.405
Published on

Murdered: ಕೊಲೆಯಾದ ಮಹಿಳೆ 18 ತಿಂಗಳ ಬಳಿಕ ಪೊಲೀಸ್​ ಠಾಣೆಗೆ ಬಂತು ನಾನು ಬದುಕಿದ್ದೇನು ಎಂದು ಪ್ರತ್ಯಕ್ಷಳಾದ ಮಹಿಳೆ ಕಂಡು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಈ ಪ್ರಕರಣ ಮಧ್ಯಪ್ರದೇಶದ ಝುಬಾವ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆ ಬಗ್ಗೆ ಗೊಂದಲಕ್ಕಿಡಾದ ಪೊಲೀಸರು ಇದೀಗ ಮರು ತನಿಖೆ ಆರಂಭಿಸಿದ್ದಾರೆ.

ಒಂದುವರೆ ವರ್ಷದ ಹಿಂದೆ ಕೊಲೆಯಾಗಿದ್ದ ಮಹಿಳೆ ಬಗ್ಗೆ ತನಿಖೆ ಆರಂಭಿಸಿದ ಪೋಲಿಸರು ಕೊಲೆ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಅಲ್ಲದೆ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಕೊನೆ ಹಂತದಲ್ಲಿದ್ದಾಗ ಮಹಿಳೆ ಕೋರ್ಟ್​ ಮತ್ತು ಠಾಣೆ ಎದುರಿಗೆ ಪ್ರತ್ಯಕ್ಷಳಾಗಿದ್ದಾಳೆ.

ಘಟನೆ ಏನು..?

18 ತಿಂಗಳ ಹಿಂದೆ ಝುಬಾವ ಜಿಲ್ಲೆಯಲ್ಲಿ ಪೊಲೀಸರಿಗೆ ವಿರೂಪಗೊಂಡ ಮಹಿಳೆ ಶವ ಪತ್ತೆಯಾಗಿದೆ. ಶವ ಪತ್ತೆ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಕಾಣೆಯಾದ ಕುಟುಂಬಗಳಿಗೆ ಮಾಹಿತಿ ನೀಡಿದ್ದಾರೆ. ಇದರಲ್ಲೊಂದು ಕುಟುಂಬ ಶವ ಗುರುತಿಸಿ ಕೊನೆಗೆ ಪೊಲೀಸರ ನೇತೃತ್ವದಲ್ಲಿ ಶವಸಂಸ್ಕಾರ ಮಾಡಿದ್ದಾರೆ. ಇತ್ತ ತನಿಖೆ ಚುರುಕುಗೊಳಿಸಿದ ಪೊಲೀಸರು ಕೊನೆಗೂ ನಾಲ್ವರನ್ನು ಬಂಧಿಸಿ ಸಾಕ್ಷ್ಯಧಾರಗಳ ಮೇಲೆ ಕೋರ್ಟ್​ಗೆ ಒಪ್ಪಿಸಿದ್ದಾರೆ.

ಆದರೆ, 2025ರ ಮಾ.11ರಂದು ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಮಹಿಳೆ ಪೊಲೀಸ್ ಠಾಣೆಗೆ ಬಂದು. ತನ್ನ ಗುರುತಿನ ಪುರಾವೆಯಾಗಿ ಮತ್ತು ಜೀವಂತವಾಗಿರುವುದಕ್ಕೆ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ತೋರಿಸಿದರು. ಆಗಸ್ಟ್ 2023ರಲ್ಲಿ ಯಾರಿಗೂ ತಿಳಿಸದೆ ಮನೆಯಿಂದ ಹೊರಟು ಹೋಗಿದ್ದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಅವರನ್ನು ರಾಜಸ್ಥಾನದ ಕೋಟಾದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಒತ್ತೆಯಾಳಾಗಿ ಇರಿಸಲಾಗಿತ್ತು ಎಂದು ಆಕೆ ಹೇಳಿಕೊಂಡಿದ್ದಾಳೆ.

ಈ ವಿಷಯ ಬೆಳಕಿಗೆ ಬಂದಾಗ, ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠವು ಈ ಪ್ರಕರಣದಲ್ಲಿ ಬಂಧಿತರಾದ ವ್ಯಕ್ತಿಗಳಿಗೆ ಜಾಮೀನು ನೀಡಿದೆ. ಪೊಲೀಸರಿಗೆ ಮರು ತನಿಖೆ ನಡೆಸುವಂತೆ ಸೂಚಿಸಿದೆ.

ಮಹಿಳೆ ಹೇಳಿದ್ದೇನು..?

ನಾನು ಯಾರಿಗೂ ಹೇಳದೆ ಮನೆಯಿಂದ ಹೊರಟೆ. ಭಾಪುರದಲ್ಲಿ ಒಬ್ಬ ವ್ಯಕ್ತಿ ನನ್ನನ್ನು ಪ್ರೀತಿಸುತ್ತೇನೆ ಮತ್ತು ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿದನು. ಆದರೆ, ಎರಡು ದಿನಗಳ ನಂತರ ಅವನು ನನ್ನನ್ನು ಬೇರೆಯವರಿಗೆ 5 ಲಕ್ಷ ರೂ.ಗೆ ಮಾರಿದನು. ಆ ವ್ಯಕ್ತಿ ನನ್ನನ್ನು ಕೋಟಾಗೆ ಕರೆದೊಯ್ದು ಒತ್ತೆಯಾಳಾಗಿ ಇಟ್ಟನು. ನನ್ನ ಕುಟುಂಬದವರೊಂದಿಗೆ ಮಾತನಾಡಲು ನನಗೆ ಅವಕಾಶವಿರಲಿಲ್ಲ. ಹೇಗೋ ತಪ್ಪಿಸಿಕೊಂಡು ಬಂದಿದ್ದೇನೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net