ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

brothers suicide
Published on

ಕಲಬುರಗಿ: ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಅಣ್ಣ-ತಮ್ಮ ಇಬ್ಬರೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ದುರ್ಘಟನೆ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ಸಂಭವಿಸಿದ್ದು, ಸಹೋದರರಾದ ಸುನೀಲ್ (17) ಮತ್ತು ಶೇಖರ್(12) ಮೃತಪಟ್ಟಿದ್ದಾರೆ. ಇದನ್ನೂ ಓದಿರಿ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ: ನವದಂಪತಿ ಸ್ಥಳದಲ್ಲೇ ಸಾವು

ಮನೆಯಲ್ಲಿ ತಂದೆ-ತಾಯಿಯೊಂದಿಗೆ ಜಗಳ ಮಾಡಿಕೊಂಡಿದ್ದ ಸಹೋದರರು ಬಳಿಕ ಕೃಷಿ ಜಮೀನಿನ ಬಳಿ ಬಳಿ ಬಂದು ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿದ್ದಾರೆ. ಇವರಿಬ್ಬರಿಗೂ ಈಜು ಬರುತಿತ್ತು. ಹಾಗಾಗಿ ಕಲ್ಲು ಕಟ್ಟಿಕೊಂಡು ಸಾವಿನ ಮನೆಯ ಕದ ತಟ್ಟಿದ್ದಾರೆ.

ಸಹೋದರರಿಬ್ಬ ಆತ್ಮಹತ್ಯೆ ಸುದ್ದಿ ಸುಳಿಯುತ್ತಿದ್ದ ಊರಿಗೆ ಊರೆ ಬಾವಿ ಬಳಿ ಬೀಡುಬಿಟ್ಟಿತ್ತು. ಹೆತ್ತವರು-ಕುಟುಂಬಸ್ಥರ ಗೋಳಾಟ ಮನಕಲಕುವಂತಿತ್ತು. ರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net