

ಚಿನ್ಮುದ್ರೆ ಮಾಡುವ ವಿಧಾನ: ಎರಡೂ ಕೈಗಳನ್ನು ಮೇಲ್ಮುಖವಾಗಿ ಇಟ್ಟು ಆಯಾ ಕೈಗಳ ತೋರು ಬೆರಳಿಗೆ ಹೆಬ್ಬೆರಳಿನ ತುದಿಯನ್ನು ತಾಗಿಸಿ.ಉಳಿದ ಮೂರು ಬೆರಳುಗಳು ನೇರವಾಗಿರಲಿ. ಒತ್ತಡ ನೀಡಬೇಕಾದ ಅವಶ್ಯಕತೆಯಿಲ್ಲ. ಚಿನ್ಮುದ್ರೆಯಲ್ಲಿ ಲಘು ಮಂತ್ರ ಇಷ್ಟ ದೇವರು ಅಥವಾ ‘ಐಂ ಹ್ರೀಂ ಐಂ ಹ್ರೀಂ ಓಂ ಸರಸ್ವತೈ ನಮಃ’ ಎಂದು 108 ಬಾರಿ ಪಠಿಸಿ. ಮೃದುವಾಗಿ ಸ್ಪರ್ಶಿಸಬೇಕು, ಹೆಚ್ಚು ಒತ್ತಬಾರದು. ಇಲ್ಲಿ ಮುದ್ರೆ ಪಿಸಿಯೋಥೆರಪಿಯಾಗುತ್ತದೆ. ಮಂತ್ರ ಸೌಂಡ್ ಥೆರಪಿ ಆಗುತ್ತದೆ. ಇದನ್ನು 10ರಿಂದ 45ನಿಮಿಷಗಳವರೆಗೆ ಮಾಡಿ.
ಹೆಬ್ಬೆರಳಿನಲ್ಲಿ ಅಗ್ನಿ ತತ್ವವಿದೆ. ತೋರು ಬೆರಳಲ್ಲಿ ವಾಯು ತತ್ತ್ವವಿದೆ. ಇವೆರಡು ಜೊತೆಯಾದಾಗ ಮನಸ್ಸು ಶಾಂತಗೊಳ್ಳುತ್ತದೆ. ಹೆಬ್ಬೆರಳು ಮನಸ್ಸಿಗೆ ಸಂಬಂಧಪಟ್ಟಿದ್ದರೆ, ತೋರು ಬೆರಳಿನ ವಾಯು ತತ್ತ್ವ ಮನಸ್ಸಿನ ಚಂಚಲತೆಗೆ ಸಂಬಂಧಪಟ್ಟದ್ದಾಗಿದೆ. ಅಗ್ನಿ ಮತ್ತು ವಾಯು (ಹೆಬ್ಬೆರಳು+ತೋರು ಬೆರಳು) ಜೊತೆಯಾದಾಗ ಮನಸ್ಸು ಸ್ಥಿರಗೊಂಡು ಶಾಂತತೆ, ಏಕಾಗ್ರತೆ ಹೆಚ್ಚುತ್ತದೆ.
ಪ್ರಯೋಜನಗಳು: ಇದು ನಕಾರಾತ್ಮಕತೆಯಿಂದ ಮನಸ್ಸನ್ನು ಗುಣಪಡಿಸುತ್ತದೆ ಮತ್ತು ಅದರ ಪರಿಣಾಮಗಳನ್ನು ದೇಹದ ಆರೋಗ್ಯದಲ್ಲಿ ಕಾಣಬಹುದು. ಇದು ನಿದ್ರಾಹೀನತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ಶಕ್ತಿ, ತ್ರಾಣವನ್ನು ಹೆಚ್ಚಿಸುತ್ತದೆ. ಚಿನ್ವುುದ್ರೆ ಏಕಾಗ್ರತೆ ಮತ್ತು ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ. ಒಬ್ಬ ವ್ಯಕ್ತಿಯು ಇದನ್ನು ನಿಯಮಿತವಾಗಿ ಅಭ್ಯಾಸ ಮಾಡಿದಾಗ, ಕೋಪ ಖಿನ್ನತೆ, ಒತ್ತಡ ಮತ್ತು ಆತಂಕದಂತಹ ಎಲ್ಲಾ ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ನಿಮ್ಮ ಅಂತರಂಗವನ್ನು ಪ್ರತಿಬಿಂಬಿಸಲು ಮತ್ತು ಕಂಪಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಇದಲ್ಲದೆ, ಇದು ನಿಮ್ಮ ಮನಸ್ಸನ್ನು ಶಾಂತ ಸ್ಥಿತಿಗೆ ತರುತ್ತದೆ ಹಾಗೂ ಸುಧಾರಿತ ಮನಸ್ಥಿತಿ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾದ ಮುದ್ರೆ ಇದು. ಇದರ ಅಭ್ಯಾಸದಿಂದ ಮನಸ್ಸಿನ ಚಂಚಲತೆ ನಿವಾರಣೆಯಾಗುತ್ತದೆ. ಬುದ್ಧಿ ಚುರುಕಾಗುತ್ತದೆ. (ಈ ಮುದ್ರೆಯ ಪ್ರಯೋಜನ ಸಮರ್ಪಕವಾಗಿ ದೊರಕಬೇಕಾದರೆ ಹೆಬ್ಬೆರಳಿನ ಅಗ್ರ ಭಾಗ ಮತ್ತು ತೋರು
ಬೆರಳಿನ ಅಗ್ರ ಭಾಗ (ತುದಿ)ಗಳು ಒಂದನ್ನೊಂದು ಮೃದುವಾಗಿ ರ್ಸ³ಸಬೇಕು ಹೆಚ್ಚು ಒತ್ತಬಾರದು) ಈ ಮುದ್ರೆಯನ್ನು ಯಾವ ಸಮಯದಲ್ಲಿಯಾದರೂ, ಯಾವ ಸ್ಥಳದಲ್ಲಿಯಾದರೂ ಮಾಡಬಹುದು. ಪ್ರಯಾಣದ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ಂದ ಉಂಟಾಗುವ ಒತ್ತಡ ಕೆಲವೊಮ್ಮೆ ಸಭೆ ಸಮಾರಂಭದಲ್ಲಿ ಉಂಟಾಗುವ ಒತ್ತಡ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುವ ಒತ್ತಡಗಳಿಗೆ 10 ನಿಮಿಷಗಳ ಜ್ಞಾನಮುದ್ರೆ ಅಭ್ಯಾಸದಿಂದ ನಿಶ್ಚಿತ ಉಪಶಮನ ದೊರೆಯುತ್ತದೆ. ಬುದ್ಧಿಮಾಂಧ್ಯ ಮಕ್ಕಳಿಗೆ ಈ ಮುದ್ರೆಯನ್ನು ಅಭ್ಯಾಸ ಮಾಡಿಸಿದರೆ ಮಾನಸಿಕ ಶಕ್ತಿ ಬಲಗೊಳ್ಳುತ್ತದೆ.