ಈ ರಾಶಿಯವರ ಗ್ರಹಗಳ ಶುಭಾಶುಭ ಫಲಗಳಿದ್ದು, ನಿಮ್ಮ ಜೀವನವು ಸುಖದ ಹಾದಿಯಲ್ಲಿ ನಡೆಯುತ್ತದೆ: ವಾರಭವಿಷ್ಯ

Vaara-Bhavishya
Published on
Weekly Horoscope

ಮೇಷ: ಶರದ್ ಋತುವಿನ ಭಾನುವಾರ ಕೃಷ್ಣ ಪಕ್ಷ ಆರಂಭವಾಗಲಿದ್ದು ಮನುಷ್ಯನು ಧರ್ಮನೀತಿಯಿಂದ ಸಾಗಬೇಕೆಂದು ಅರಿತುಕೊಂಡು ಸತ್ಕರ್ವದಿಗಳನ್ನು ಮಾಡಿ ಜೀವನವನ್ನು ಪರಿಶುದ್ಧವಾಗಿಟ್ಟುಕೊಳ್ಳಬೇಕು. ಮೇಷ ರಾಶಿಯಲ್ಲಿ 28ರಂದು (ಶನಿವಾರ ರಾತ್ರಿ) ಗ್ರಹಣ ನಡೆದಿದ್ದು ಇದೇ 30ರಂದು ಮೇಷ ರಾಶಿಯಿಂದ ಮೀನ ರಾಶಿಗೆ ರಾಹು ಚಲಿಸಲಿದ್ದು ಶುಭ ಪರಿಣಾಮವನ್ನು ಉಂಟು ಮಾಡುತ್ತಾನೆ. ಅಶ್ವಿನಿ ನಕ್ಷತ್ರದಲ್ಲಿ ಗ್ರಹಣ ಸಂಭವಿಸುವುದರಿಂದ ಆ ನಕ್ಷತ್ರಕ್ಕೆ ಶಾಂತಿ ದೈವ ಪ್ರಾರ್ಥನೆ ಅಗತ್ಯ.

ವೃಷಭ: ರಾಹು ಇದೇ ಅ. 30ರಂದು ದ್ವಾದಶದಲ್ಲಿರುವ ಗುರುವನ್ನು ಬಿಟ್ಟು ಮೀನ ರಾಶಿಗೆ ಚಲಿಸಲಿದ್ದಾನೆ ಗುರು ಏಕಾಂಗಿಯಾಗಿ ಶುಭ ಫಲಗಳನ್ನು ಉಂಟುಮಾಡುತ್ತಾನೆ. ಹರಿಹರರು ಒಲಿಯದಿದ್ದರೂ ಗುರು ಒಬ್ಬನೇ ರಕ್ಷಣೆ ನೀಡಲು ಸಾಧ್ಯ ಮಾತನ್ನು ಕಡಿಮೆ ಮಾಡಿ. ಜಾಗರೂಕರಾಗಿ ವ್ಯವಹಾರ ಮಾಡುವುದು ಒಳಿತು. ಗುರು ದತ್ತಾತ್ರೇಯನನ್ನು ಪೂಜಿಸಿ ಪ್ರಾರ್ಥಿಸಿ.

ಮಿಥುನ: ವಿನಾಕಾರಣ ಯಾವ ಮನುಷ್ಯನೂ ತನ್ನ ನಾಲಿಗೆಯನ್ನು ಮತ್ತೊಬ್ಬರಿಗೆ ತೊಂದರೆ ಕೊಡಲು ಬಳಸಬಾರದು. ನಾಲಿಗೆ ಚೂಪಾದ ಚಾಕುವನ್ನು ಮೀರಿಸುವಷ್ಟು ಹರಿತವಿರುತ್ತದೆ. ಮಾತನಾಡುವ ಮುಂಚೆ ನೀವು ಏನು ಮಾತನಾಡುತ್ತಿದ್ದೀರಿ? ಎಂದು ಅರ್ಥೈಸಿಕೊಂಡರೆ ನಿಮಗೆ ಕ್ಷೇಮ. ಇಲ್ಲದಿದ್ದರೆ ನಿಮ್ಮ ಮೇಲೆ ನೀವೇ ತೊಂದರೆ ಎಳೆದುಕೊಂಡಾಗುತ್ತದೆ. ಸತ್ಯ ಧರ್ಮದ ಹಾದಿಯಲ್ಲಿ ನಡೆದರೆ ಗುರು ಎಲ್ಲವನ್ನು ಕೊಡುತ್ತಾನೆ.

ಕಟಕ: ಕಟಕ ರಾಶಿಗೆ ಹತ್ತರ ಗುರು ಶುದ್ಧವಾಗಿದ್ದರಿಂದ ಸ್ವಲ್ಪ ಮಟ್ಟಿಗೆ ನಿಮ್ಮ ಹಾಗೂ ವ್ಯವಹಾರ ವಹಿವಾಟುಗಳು ನೀವು ಮಾಡುವ ಕೆಲಸಗಳಲ್ಲಿ ಸಫಲತೆ ದೊರಕುತ್ತದೆ. ಆದರೂ ಅಷ್ಟಮದಲ್ಲಿ ಶನಿ ಇರುವುದರಿಂದ ಭಯಭೀತಿ ಇಲ್ಲದ ಜಾಗದಲ್ಲಿ ಇದ್ದರೆ, ಪಾರ್ವತಿ ಸಹಿತ ಸಾಂಬ ಸದಾಶಿವನನ್ನು ಪೂಜಿಸಿದರೆ ಶುಭ. ಫಲಗಳನ್ನು ಕೊಡುತ್ತಾನೆ.

ಸಿಂಹ: ಸಿಂಹ ರಾಶಿಯವರಿಗೆ ಗುರು ನವಮದಲ್ಲಿ ಇದ್ದು, ನಿರೀಕ್ಷೆ ಮೀರಿ ಮನುಷ್ಯನನ್ನು ಕಾಪಾಡುತ್ತಾನೆ. ಗುರು ಒಬ್ಬನು ಕಾಯ್ದರೆ ಅರಣ್ಯವೇ ಸ್ವರ್ಗವಾಗುತ್ತದೆ. ದತ್ತಾತ್ರೇಯ ಗುರು ಚರಿತ್ರೆ ಯನ್ನು ಪಾರಾಯಣ ಮಾಡಿ ನಿಮ್ಮ ಕೆಲಸಗಳಲ್ಲಿ ಜಯವನ್ನು ತಂದು ಕೊಡುತ್ತಾನೆ. ಆದಿತ್ಯ ಹೃದಯ ಪಾರಾಯಣ ಮಾಡಿ.

ಕನ್ಯಾ: ದಶರಥ ಮಹಾರಾಜನು ಯುದ್ಧದ ಸಮಯದಲ್ಲಿ ತನ್ನನ್ನು ಕಾಪಾಡಿದ್ದಕ್ಕಾಗಿ ಬೇಕಾದ ವರ ಪಡೆಯಬಹುದೆಂಬ ವಚನವನ್ನು ಕೈಕೇಯಿಗೆ ಕೊಟ್ಟಿದ್ದನು. ಆದರೆ ಆ ವಚನವು ತಂದೆ ಮಗನನ್ನೇ ದೂರ ಮಾಡಿ ಶ್ರೀರಾಮಚಂದ್ರನನ್ನು ಅರಣ್ಯಕ್ಕೆ ಕಳುಹಿಸಿದ ಸಂಗತಿಯನ್ನು ನೆನಪಿಟ್ಟುಕೊಂಡು ಯಾರಿಗೂ ಯಾವ ವಚನವನ್ನೂ ಕೊಡಬೇಡಿ. ನಿಮ್ಮನ್ನು ನೀವು ರಕ್ಷಿಸಿಕೊಳ್ಳುವ ಸಮಯ. ಲಕ್ಷ್ಮೀನರಸಿಂಹನನ್ನು ಪ್ರಾರ್ಥಿಸಿ, ಅಷ್ಟಮದಲ್ಲಿ ಗುರು ಇರುವುದರಿಂದ ಯಾವ ವಿಚಾರಕ್ಕೂ ಸಿಕ್ಕಿ ಹಾಕಿಕೊಳ್ಳದೆ ಜೋಪಾನವಾಗಿ ಮುಂದೆ ಸಾಗಿ.

ತುಲಾ: ಈ ಸಮಯದಲ್ಲಿ ಆತುರದ ನಿರ್ಧಾರಗಳನ್ನು ಮಾಡಬಾರದು . ತುಲಾ ರಾಶಿಯವರ ಗ್ರಹಗಳ ಭಾಗ್ಯ ಚಕ್ರದಲ್ಲಿ ಯಶಸ್ಸು ಪಡೆದು ಕೀರ್ತಿಗಳಿಸುವ ಸಮಯ. ಬಹಳಷ್ಟು ಯೋಚನಾವಂತರಾಗಿ ನಿಮ್ಮ ಜವಾಬ್ದಾರಿಯುತ ಸ್ಥಾನವನ್ನು ನಿರ್ವಹಿಸಿ. ದುರ್ಗಿ ಯನ್ನು ಪೂಜಿಸಲು ಮರೆಯದಿರಿ. ಪಂಚಮ ಶನಿಗೆ ಸುಂದರಕಾಂಡ ಪಾರಾಯಣ ಮಾಡಿದರೆ ಶುಭ ಫಲ ಪ್ರಾಪ್ತಿಯಾಗುತ್ತದೆ.

ವೃಶ್ಚಿಕ: ಗ್ರಹಣ ಕಾಲದಿಂದ 15 ದಿನಗಳವರೆಗೆ ಗ್ರಹಗಳ ಶುಭಾಶುಭ ಫಲಗಳಿದ್ದು, ಸಮಯವು ನಿಮ್ಮನ್ನು ಅನುಸರಿಸಿ ಬಂದು ನಿಮಗೆ ಹಿತವನ್ನು ಕೊಟ್ಟು ನಿಮ್ಮ ಜೀವನವು ಸುಖದ ಹಾದಿಯಲ್ಲಿ ನಡೆಯುತ್ತದೆ. ಕಷ್ಟ ಕಾರ್ಪಣ್ಯಗಳು ನೀಗುತ್ತದೆ. ಷಣ್ಮುಖನ ಪ್ರಾರ್ಥನೆ ಇರಲಿ. ಪಳನಿಯಲ್ಲಿ ಕುಳಿತಿರುವ ಪಳನಿಯಪ್ಪನನ್ನು ಪೂಜಿಸಿ ಬೇಕಾದ ವರ ಪಡೆಯಬಹುದು. ಸಾಧ್ಯವಾದರೆ ದೇವರಿಗೆ ರಥಸೇವೆ ಮಾಡಿಸಿ ಬನ್ನಿ.

ಧನುಸ್ಸು: ಧನು ಎಂದರೆ ಬಾಣ ಬತ್ತಳಿಕೆ ಎಂದರ್ಥ. ರಾಮನಿಗೆ ಬಿಲ್ಲು ವಿದ್ಯೆಯನ್ನು ಕಲಿಸಿದವರು ವಿಶ್ವಾಮಿತ್ರರು. ವಿದ್ಯಾಬುದ್ಧಿದಾತರು ಗುರು ಎಂಬುದನ್ನು ಮರೆಯದಿರಿ. ಸರ್ವ ಸಂಕಟ ಪರಿಹಾರ ಆಗಿ ಯಶಸ್ಸಿನ ತುದಿ ತಲುಪಲು ಶುದ್ಧವಾದ ಪಂಚಮ ಗುರು ಬದ್ಧನಾಗಿದ್ದಾನೆ. ಶನಿಯು ಒಳ್ಳೆಯ ಫಲವನ್ನೇ ನೀಡುತ್ತಾನೆ. ಗುರು ಚರಿತ್ರೆ ಹದಿನಾಲ್ಕನೇ ಅಧ್ಯಾಯ ಹಾಗೂ ದುರ್ಗಾ ಸಹಸ್ರನಾಮ ಪಾರಾಯಣ ಮಾಡಿ.

ಮಕರ: ಮಕರ ರಾಶಿಯವರಿಗೆ ಗ್ರಹಣ ಫಲವು 45 ದಿನಗಳ ಕಾಲ ನಡೆದು ಅವರಿಗೆ ಸ್ಥಗಿತವಾದ ಕೆಲಸ ಕಾರ್ಯಗಳು ಮುಂದೆ ಸಾಗುತ್ತದೆ. ಪರಮಾತ್ಮ ಆತ್ಮ ಇಬ್ಬರೂ ಒಂದೇ ಆಗಿದ್ದು, ಪರಮಾತ್ಮನಾದ ವಿಷ್ಣುವನ್ನು ನಿಮ್ಮ ಆತ್ಮದಲ್ಲಿ ಸೇರಿಸಿ ದೈವ ಚಿಂತನೆಯಿಂದ ಮುನ್ನಡೆದರೆ ಕಷ್ಟಗಳ ಸಾಗರ ದಾಟಬಹುದು. ಧನವನ್ನು ಉಲ್ಲಾಸವನ್ನು ತೃಪ್ತಿಯನ್ನು ನೀಡುತ್ತಾನೆ. ಹತ್ತು ದಿನಗಳ ಕಾಲ ನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ಕುಂಭ: ಕುಂಭ ರಾಶಿ ಅವರಿಗೆ ತೃತೀಯದಲ್ಲಿ ಗುರು ಇದ್ದರೂ ದ್ವಾದಶ ಶನಿಯು ಸುಲಭವಾಗಿ ನಿಮ್ಮ ಓಟದ ವೇಗ ಕತ್ತರಿಸಿ ನಿಮ್ಮ ಮಾರ್ಗಕ್ಕೆ ಅಡ್ಡಿಯಾಗಿ ಬಂದು ಆಗುವ ಕೆಲಸಗಳು ನಿಧಾನವಾಗುತ್ತದೆ. ದೇವರನ್ನು ಪೂಜಿ ಸಲೇಬೇಕು. ಮನಸ್ಸಿನಲ್ಲಿ ದೈವ ಚಿಂತನೆ ಇರಬೇಕು. ಕೆಲಸಗಳು ಮುಂದೆ ಸಾಗಲೇಬೇಕು. ಪ್ರತಿನಿತ್ಯ ಶನಿ ಅಷ್ಟೋತ್ತರ ಪಠಿಸಿ.

ಮೀನ: ಗುರು ಮೇಷ ರಾಶಿಯಲ್ಲಿ ಏಕಾಂಗಿಯಾಗಿ ಎರಡನೇ ಮನೆಯಲ್ಲಿ ಶುಭ ಫಲಗಳನ್ನು, ಬೇಕಾದ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಜೀವನದಲ್ಲಿ ತುಷ್ಟಿ-ಪುಷ್ಟಿ ಕೊಟ್ಟು ಆರೋಗ್ಯವನ್ನು ಸಂತಸವನ್ನು ನೀಡುತ್ತಾನೆ. ಈ ಸಂದರ್ಭದಲ್ಲಿ ಗುರುವಿಗೆ ಕಡಲೆಕಾಳು ಹಾಗೂ ನಿರ್ಗಮಿಸುವ ರಾಹುವಿಗೆ ಉದ್ದಿನ ಬೇಳೆ ದಾನ ಮಾಡಿ ಸುಖ ಶಾಂತಿಯನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಕೆಲಸಗಳಲ್ಲಿ ಹೆಚ್ಚು ಪರಿಶ್ರಮ ತೋರಿದರೆ ಧನವು ಬಂದು ಸೇರಿ ಸಂತೋಷವೂ ಲಭಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net