

ಮೇಷ: ಸಕಾರಾತ್ಮಕ ಚಿಂತನೆ ಇರಬೇಕು.12ರ ರಾಹುವಿನಿಂದ ಕಾಣದ ಶತ್ರುಗಳು ನಿಮ್ಮನ್ನು ಅಡ್ಡಗಟ್ಟಿ ನಿಲ್ಲಿಸುತ್ತಾರೆ. ಏಕಾದಶ ಶನಿ ಸರ್ವ ಶತ್ರುಗಳ ಕಾಟ ತಪ್ಪಿಸಿ 2025ರವರೆಗೆ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಕಾಲ, ಸುಬ್ರಹ್ಮಣ್ಯನ ಅರ್ಚನೆ ಇರಲಿ. ವಿಶೇಷವಾಗಿ ದತ್ತಾತ್ರೇಯನನ್ನು ಪೂಜೆ ಮಾಡಿ.
ವೃಷಭ: ವೃಷಭ ರಾಶಿಯವರು ದೈವ ಶಕ್ತಿ ಸಂಪಾದಿಸಬೇಕು. ಅದಕ್ಕೆ ಗುರುವಿನ ಆಶ್ರಯ ಬೇಕಾಗುತ್ತದೆ. ಜೀವನವು ಅಲ್ಲೋಲ ಕಲ್ಲೋಲ ಆಗಿಯೇ ಉಳಿದಿದೆ. ದಾನಗಳಲ್ಲಿ ಶ್ರೇಷ್ಠವಾದದ್ದು ಅನ್ನದಾನ. ಮನುಷ್ಯನ ಶಾಂತಿಗೆ ನಿಧಾನವೇ ಮಹಾಮಂತ್ರ. ಚಂಡಿಕಾ ದುರ್ಗಾಪರಮೇಶ್ವರಿಯನ್ನು ಪೂಜಿಸಿ.
ಮಿಥುನ: 11ನೇ ಮನೆಯನ್ನು ಗುರು ದಾಟಿದ್ದು ಕಷ್ಟವನ್ನು ಸೂಚಿಸುತ್ತಿದೆ. ಒಳ್ಳೆಯ ಕಾಲ ನಡೆದಾಗ ಆನೆಯಂತೆ ಗಾಂಭೀರ್ಯ, ಸಿಂಹದಂತೆ ಶುಭ ಕಾರ್ಯಕ್ಕೆ ಗರ್ಜನೆ ಮಾಡಿದರೆ ದೇವರೇ ನಿಮ್ಮನ್ನು ದಡ ಮುಟ್ಟಿಸುತ್ತಾನೆ. ವಿಷ್ಣುವಿನ ಆಧಿಪತ್ಯ ಹೊಂದಿರುವ ಮಿಥುನ ರಾಶಿಯವರು ಶ್ರೀರಾಮನನ್ನು ಪೂಜಿಸಿ. ಸುಂದರಕಾಂಡ ಪಾರಾಯಣ ಮಾಡಿ.
ಕಟಕ: ಆಪೋ ನಾರಾಯಣನು ಈ ಜಗದ ಸೃಷ್ಟಿಕರ್ತನು. ಒಳ್ಳೆಯ ಕೆಲಸ ಮಾಡಿದವರಿಗೆ ಅವನೇ ವರ ನೀಡುತ್ತಾನೆ. ಆದರೆ ಕೋಪ ಬಂದರೆ ಅದೇ ನೀರು ಜಲಪ್ರಳಯವಾಗುತ್ತದೆ. ಸದಾ ಕಾಲವೂ ನಾರಾಯಣ ಪ್ರಾರ್ಥನೆ ಮಾಡಿ. ನಿಮಗೆ ಆರೋಗ್ಯ ಭಾಗ್ಯವನ್ನು ಕೊಟ್ಟು ನಿಮ್ಮನ್ನು ಸುಖವಾಗಿಡುತ್ತಾನೆ.
ಸಿಂಹ: 9ರ ಗುರುವು ಭಾಗ್ಯವನ್ನು ಕೊಟ್ಟರೂ ನಂಬಲು ಅನರ್ಹರಾದ ವ್ಯಕ್ತಿಗಳು ನಿಮ್ಮ ಸಮಯವನ್ನು ಹಾಳು ಮಾಡಿ ಚಿಂತೆಗೆ ಈಡು ಮಾಡುತ್ತಾರೆ. ಆದರೂ ಗುರುವು ನಿಮ್ಮನ್ನು ಸಂರಕ್ಷಿಸಿ ಕೀರ್ತಿ ಧನ ಲಾಭವನ್ನು ತಂದು ಕೊಡುತ್ತಾನೆ. ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ವಿಶೇಷವಾಗಿ ಕೇತುವಿಗೆ ಗಣಪತಿಯನ್ನು ಪೂಜಿಸಿ. ಸೂರ್ಯನಾರಾಯಣನನ್ನು ಪೂಜಿಸಿ.
ಕನ್ಯಾ: ಮೇ ಒಂದರಿಂದ ಕನ್ಯಾ ರಾಶಿಗೆ ಗುರುವು ಭಾಗ್ಯದ ಮನೆಯಲ್ಲಿ ಬಂದು ನಿಮ್ಮ ಚಿಂತೆಗಳನ್ನು ದೂರ ಮಾಡಿ ಮುನ್ನಡೆಸುತ್ತಾನೆ. ಶನಿ ಕಾರ್ಯಗಳು ಕರ್ತವ್ಯಗಳು ನ್ಯಾಯ ಸಮ್ಮತವಾಗಿದ್ದರೆ ನಿಮಗೆ ಬೇಕಾದ ಸಂಪತ್ತನ್ನು, ಕೈತುಂಬ ಕೆಲಸವನ್ನು ಮಾಡಲು ಶಕ್ತಿಯನ್ನು ನೀಡುತ್ತಾನೆ. ಅಂದರೆ ನೀವು ಒಳ್ಳೆಯ ಜೀವನವನ್ನು ಸಾಗಿಸಲು ಸಜ್ಜಾಗಿರಿ. ಅನುಗ್ರಹ ಬೇಕಾದರೆ ವೆಂಕಟೇಶ್ವರನನ್ನು ಪ್ರಾರ್ಥಿಸಬೇಕು.
ತುಲಾ: ಗುರು ಸಪ್ತಮದಲ್ಲಿ ಇದ್ದು ಸುಖವನ್ನು, ಭರವಸೆಯನ್ನು, ಅದ್ಭುತವಾದ ಜಯವನ್ನು, ಸಾಕಾಗುವಷ್ಟು ಹಣವನ್ನು ಕೊಟ್ಟರೂ ನಿಮ್ಮ ಜತೆಗಿರುವವರೇ ಸಮಸ್ಯೆಗಳನ್ನು ಉಂಟು ಮಾಡಿ ಕುಟುಂಬವನ್ನು ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಾರೆ. ಹೆದರದಿರಿ. ತುಲಾ ರಾಶಿಯಲ್ಲಿ ಹುಟ್ಟಿದವರಿಗೆ ಅಧಿದೇವತೆ ದುರ್ಗೆಯೇ. ಪಂಚಮದಲ್ಲಿ ಶನಿ ಇದ್ದರೂ ನಿಧಾನವಾದರೂ ಖಂಡಿತವಾಗಿ ಗುರಿ ಮುಟ್ಟುತ್ತೀರಿ.
ವೃಶ್ಚಿಕ: ಬಾಗಿಲನು ತೆರೆದು ಸೇವೆಯನು ಕೊಡು ಎಂದು ಹರಿಯನ್ನು ಪ್ರಾರ್ಥಿಸಿದರೆ ದೇವರ ಬಾಗಿಲು ತನ್ನಂತೆ ತಾನೇ ತೆರೆದುಕೊಂಡು ದರ್ಶನವನ್ನು, ಆರೋಗ್ಯವನ್ನು, ಭೋಗಭಾಗ್ಯಗಳನ್ನು ಕೊಡುತ್ತಾನೆ. ಮನುಷ್ಯನಿಗೆ ಬೇಕಾದ ನಿಷ್ಠೆಯೊಂದು ಇರಬೇಕು. ಮಹಾಲಕ್ಷ್ಮಿಯನ್ನು ದರ್ಶಿಸಿ ಪ್ರಾರ್ಥಿಸಿ ಬನ್ನಿ.
ಧನುಸ್ಸು: ಶ್ರೀರಾಮಚಂದ್ರ ಯಾವ ಶಸ್ತ್ರಾಸ್ತ್ರಗಳಿಲ್ಲದೆ ಕೇವಲ ಧನುಸ್ಸುಧಾರಿಯಾಗಿ ರಾವಣನ ವಧೆಯನ್ನು ಮಾಡಿ ಅಯೋಧ್ಯೆಯಲ್ಲಿ ಬಾಲರಾಮನಾಗಿ ನೆಲೆಸಿದ್ದಾನೆ. ಸಮಯವು ಚೆನ್ನಾಗಿದೆ. ನಿಮ್ಮನ್ನು ಕೈ ಹಿಡಿದು ನಡೆಸಿ ದೇವರನ್ನು ಸಾಕ್ಷಾತ್ಕಾರವಾದಂತೆ ವಿಷ್ಣುವನ್ನು ತೋರಿಸುತ್ತಾನೆ. ಸಂತಸದಿಂದಿರಿ.
ಮಕರ: ಕೆಲವು ಪಾಪ ಕರ್ಮಗಳು ದುಃಖಗಳನ್ನು ಕೊಟ್ಟು ಕಾಡುತ್ತದೆ. ಶನಿಯ ಸಂಚಾರವು ಇನ್ನೂ ಒಂದು ಸಂವತ್ಸರ ಕಾಲ ಇದ್ದು ಬಿಡುವ ಕಾಲದಲ್ಲಿ ನೀವು ಎಚ್ಚರಿಕೆಯಿಂದ ಇದ್ದು ಅವನನ್ನೇ ಪೂಜಿಸಿದರೆ ಯೋಗ್ಯತೆಗೆ ತಕ್ಕನಾದ ಧನ, ಸುಖ ಕೊಡುತ್ತಾನೆ. ಈ ಸಮಯದಲ್ಲಿ ನಿತ್ಯವೂ ಶನೈಶ್ಚರ ಅಷ್ಟೋತ್ತರ ಪಾರಾಯಣ, ಶಿವ ಪೂಜೆ ಮಾಡಿ.
ಕುಂಭ: ಕೆಲವೊಂದು ಬದಲಾವಣೆಗಳನ್ನು ನೋಡಿದ್ದೀರಿ. ಕಷ್ಟಕಾರ್ಪಣ್ಯಗಳನ್ನು ದಾಟಿ ಬಂದಿದ್ದೀರಿ. ಇನ್ನೂ ಒಂದು ವರ್ಷ ಸಮಯ ಬೇಕಾಗುತ್ತದೆ. ದ್ವಿತೀಯದಲ್ಲಿ ರಾಹು ಇರುವುದರಿಂದ ನಿಮ್ಮ ಕುಟುಂಬವನ್ನು ಬಂಧುಗಳನ್ನು ಕಾಪಾಡಿಕೊಳ್ಳಬೇಕಾದ ಆದ್ಯ ಕರ್ತವ್ಯವಿದೆ. ಆದ್ದರಿಂದ ಶನಿ ಮಹಾತ್ಮನನ್ನು ದರ್ಶಿಸಿ ಪೂಜಿಸಿ.
ಮೀನ: ಅಧ್ಯಾತ್ಮದಲ್ಲಿ ಆಸಕ್ತಿ, ಸಜ್ಜನರ ಸಹವಾಸ, ದೇವರಲ್ಲಿ ಅನನ್ಯವಾಗಿ ತೊಡಗಿಸಿಕೊಂಡರೆ ನಿಮ್ಮ ಆರಂಭ ಶನಿಯು 12ನೇ ಮನೆಯಲ್ಲಿ ಕಷ್ಟವನ್ನೂ ಕೊಡದೆ ದಾಟಿಸುತ್ತಾನೆ. ಶನಿಯು ಜನ್ಮಕ್ಕೆ ಬಂದಾಗ ಗುರುವೇ ರಕ್ಷಣೆ ನೀಡುತ್ತಾನೆ. ಗುರು ಚರಿತ್ರೆ ಪಾರಾಯಣ ಮಾಡಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.