

ದಶಮದಲ್ಲಿ ಗುರು, ಶನಿ, ಸೂರ್ಯರು ಇದ್ದು, ನಿಮ್ಮಲಾಭ ನಷ್ಟಗಳನ್ನು ಸ್ವಲ್ಪಮಟ್ಟಿಗೆ ಸುಧಾರಿಸುತ್ತಾರೆ. ಬುಧನು ಜ. 25 ರಂದು ಕುಂಭದಲ್ಲಿ, 27 ರಿಂದ ಮಕರದಲ್ಲಿ ಶುಕ್ರನು ಸೇರಿ ವ್ಯವಹಾರಗಳಲ್ಲಿ ಯಶಸ್ಸನ್ನು ಕೊಡುತ್ತಾನೆ. ಶುಕ್ರ, ಶನಿ, ರವಿ, ಗುರು ನಿಮ್ಮಲ್ಲಿ ಅಧೈರ್ಯ ಸೃಷ್ಟಿಸಬಹುದು. ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿದಲ್ಲಿ ಗೆದ್ದು ಬರಬಹುದು.
ವೃಷಭ ರಾಹು, 9ರ ರವಿ, ಬುಧ, ಶನಿ ತಕ್ಕಮಟ್ಟಿಗೆ ಧೈರ್ಯ, ಕೀರ್ತಿ, ಯಶಸ್ಸು ಕೊಡುತ್ತಾರೆ. ಆದರೆ ಹಣಕಾಸು ವಿಚಾರದಲ್ಲಿ ಕೊರತೆ ಉಂಟುಮಾಡುತ್ತಾರೆ. ಅನಗತ್ಯ ವೆಚ್ಚ ಮಾಡದೆ ಮನಸ್ಸನ್ನು ಶಾಂತಿಯಲ್ಲಿ ಇಟ್ಟುಕೊಳ್ಳಿ. ದಶಮ ಬುಧನು ಅಲ್ಪ ಪ್ರಗತಿ ಕೊಟ್ಟು ಕಾಪಾಡುತ್ತಾನೆ. ಆರೋಗ್ಯದ ಬಗ್ಗೆ ಎಚ್ಚರ. ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ.
ಅಷ್ಟಮ ಗುರು, ಶನಿ ಸಾಕಷ್ಟು ಅಡ್ಡಿ ಆತಂಕಗಳನ್ನು ಸೃಷ್ಟಿಸುತ್ತಾರೆೆ. ಜ. 27ರಂದು ಶುಕ್ರನು ಬಂದು ಹಣದ ಕೊರತೆ ತಂದೊಡ್ಡುತ್ತಾನೆ. ಬುಧನು ಬೇಕು-ಬೇಡಗಳನ್ನು ತೂಗಿ ಧನವನ್ನು ಕೊಡುತ್ತಾನೆ. ವಿಷ್ಣು ಅಷ್ಟೋತ್ತರ ಪಠಿಸಿ. ಶಿವಾಲಯದಲ್ಲಿ ಅಶ್ವತ್ಥ ವೃಕ್ಷಕ್ಕೆ 11 ಭಾನುವಾರ ಪೂಜಿಸಿ. ನಾಗರಾಜ ಅಷ್ಟೋತ್ತರ ಪಾರಾಯಣ ಮಾಡಿ.
ಏಳನೇ ಮನೆಯ ಗುರು ಅನುಕೂಲ ಮಾಡಿಕೊಡುತ್ತಾನೆ. ಈ ವಾರದಲ್ಲಿ ಯಾವ ಕೊರತೆ ಇರುವುದಿಲ್ಲ. ನಿಮ್ಮ ಮನಸ್ಸನ್ನು ದೃಢ ಸಂಕಲ್ಪದೊಂದಿಗೆ ದೇವರು ಕೊಟ್ಟದ್ದನ್ನು ಸ್ವೀಕರಿಸಿ ವೃಥಾ ಆಯಾಸ ಒಳ್ಳೆಯದಲ್ಲ. ಕೈ-ಕಾಲುಗಳಿಗೆ ಪೆಟ್ಟು ಮಾಡಿಕೊಳ್ಳಬೇಡಿ. ತಪ್ಪದೆ ಶ್ರೀರಂಗನಾಥನ ಪ್ರಾಥನೆ, ಪೂಜೆಯನ್ನು ಮಾಡಿರಿ.
ಸೂರ್ಯನನ್ನು ಪೂಜಿಸಿದವನಿಗೆ ರೋಗ, ಋಣದ ಬಾಧೆಯೂ ಇರುವುದಿಲ್ಲ. ನವಗ್ರಹ ಆರಾಧನೆಯಲ್ಲಿ ಸೂರ್ಯನು ನವಗ್ರಹಗಳ ರಾಜನೆಂದೇ ಹೆಸರು. ಸೂರ್ಯನನ್ನು ಮನಸಾ ಭಜಿಸಿ. ಎಲ್ಲಾ ತರಹದ ಲಾಭ, ಕಾರ್ಯವು ನಿರ್ವಿಘ್ನವಾಗಿರುತ್ತದೆ. ಶನಿಯು ಎಲ್ಲ ಸುಖ-ಶಾಂತಿ ಕೊಡುತ್ತಾನೆ. ದೇವತಾ ಪ್ರಾರ್ಥನೆ ಇರಲಿ.
ಸೂರ್ಯ-ಬುಧರು ಮಿತ್ರ ಗ್ರಹಗಳು ಸುಪ್ರಭಾತೇ ದಿವಾಕರ ಮಧ್ಯಾಹ್ನೇತು ಮಹೇಶ್ವರ ಸಾಯಂಕಾಲೇ ಸ್ವಯಂ ವಿಷ್ಣು ಎಂಬಂತೆ ರವಿ, ಈಶ್ವರ ಹಾಗೂ ವಿಷ್ಣು ನಿಮ್ಮನ್ನು ಕಾಪಾಡುತ್ತಾರೆ. ಸೂರ್ಯಾಷ್ಟಕ ಪಠಿಸಿ. ಶಿವಾಯ ಗುರುವೇ ನಮಃ ಎಂಬಂತೆ ನೀವು ಕೀರ್ತಿ, ಲಾಭವನ್ನು ಪಡೆದು ದುಃಖ ದುಮ್ಮಾನ ದೂರಮಾಡುತ್ತಾನೆ.
ರಾಶ್ಯಾಧಿಪತಿ ಶುಕ್ರನು ಜ. 27 ರಂದು ಮಕರ ಪ್ರವೇಶ ಮಾಡುತ್ತಾನೆ. ರವಿ, ಶನಿ, ಬುಧ ಎಲ್ಲರೂ ಅಲ್ಲಿಯೇ ಬಂದು ಸೇರುತ್ತಾರೆ. ತುಲಾ ರಾಶಿಯವರಿಗೆ ಶನಿಯ ಭಯವೂ ಇಲ್ಲ. ಧನಕ್ಕೆ ಕೊರತೆ ಇಲ್ಲ. ಶುಭಾಶುಭಗಳಿಗೆ ಪುಷ್ಟಿಯನ್ನು ಕೊಡಲು ಗ್ರಹಗಳ ಬಲವಿದೆ. ದುರ್ಗೆಯ ಪ್ರಾರ್ಥನೆ ಇರಲಿ. ಗುರು ದತ್ತನ ಧ್ಯಾನ ಮಾಡಿರಿ.
ನಿಮ್ಮ ಕೂಡಿಟ್ಟ ಪುಣ್ಯ ಕೈಸೇರಿ ನಿಮ್ಮನ್ನು ನೋಯಿಸಿದವರಿಗೆ ದೇವರೇ ಪಾಠ ಕಲಿಸುತ್ತಾನೆ. ನಿಮ್ಮ ಧನ ಭಂಡಾರ ತುಂಬಲಿದೆ. ಋಣ ಪರಿಹಾರವಾಗಿ ಸಂತೋಷ, ಶಾಂತಿಯನ್ನು ಕೊಡುತ್ತಾನೆ. ರಾಶಿಯಲ್ಲಿ ಕೇತು ಇರುವುದರಿಂದ ಯಾರೊಂದಿಗೂ ಜಗಳ-ಕೋಪ ಬೇಡ. ಸಂಯಮ ಕಾಪಾಡಿಕೊಳ್ಳಿ. ದೇವರು ನಿಮ್ಮೊಂದಿಗೆ ಇದ್ದಾನೆ.
ಧನಸ್ಸು-ಮೀನ ರಾಶ್ಯಾಧಿಪತಿ ಗುರುವು ನಿಮ್ಮ ರಾಶಿಗೆ ದ್ವಿತೀಯದಲ್ಲಿ ಕೂತಿದ್ದಾನೆ. ಆ ದೇವರೇ ಕೊಡಲು ಬಂದಾಗ ಕಣ್ಣುಮುಚ್ಚಿ ಕುಳಿತುಕೊಳ್ಳುವುದು ಮೂರ್ಖತನ. ಶನಿಯ ಸಂಚಾರದಿಂದ ಸಣ್ಣ-ಪುಟ್ಟ ನಷ್ಟ, ಆತಂಕಗಳು ಬರಬಹುದು. ಸಿಗುವುದು ಸ್ವಲ್ಪವೇ. ಕುಲದೇವರನ್ನು ಪೂಜಿಸಿ ನಿಮ್ಮ ಮನದಿಚ್ಛೆಯನ್ನು ಪೂರ್ಣಮಾಡಿಕೊಳ್ಳಿ.
ಮಕರ ರಾಶಿಯಲ್ಲಿ ಜನಿಸಿದವರಿಗೆ 12ರ ಹಾಗೂ ಜನ್ಮ ಶನಿಯಿಂದ ಮುಖವು ಬಾಡಿರಬಹುದು. ಆದರೂ ಗುರುವು ಮಕರದಲ್ಲೇ ಇರುವುದರಿಂದ ಕೈಹಿಡಿದು ನಡೆಸುವನು. ಶನಿ ಸ್ವಕ್ಷೇತ್ರದಲ್ಲಿ ಹೆಚ್ಚಿನ ತೊಂದರೆ ಮಾಡುವುದಿಲ್ಲ. ಮನೋವ್ಯಥೆ ಬಿಡಿ. ಆರೋಗ್ಯ ಕಾಪಾಡಿಕೊಳ್ಳಿ. ನವಗ್ರಹ ಸ್ತೋತ್ರ, ಪ್ರತಿ ಸೋಮವಾರ ಶಿವ- ಸಹಸ್ರನಾಮ ಪಠಿಸಿ.
ದ್ವಾದಶ ಶನಿ, ಗುರುವು ಅಲ್ಪಸುಖವನ್ನು ಕೊಟ್ಟಿರುತ್ತಾರೆೆ. ಎಲ್ಲಾ ಅಪಾಯಗಳನ್ನು ಉಪಾಯದಿಂದಲೇ ದಾಟಬೇಕು. ಆರೋಗ್ಯದೆಡೆಗೆ ಎಚ್ಚರವಿರಲಿ. ಶ್ರೀನಿವಾಸ ಕಲ್ಯಾಣದ ಕಥೆಯ ಪಾರಾಯಣ ಮಾಡಿರಿ. 16 ಸೋಮವಾರಗಳಂದು ಸೋಮವಾರ ವ್ರತ(ಈಶ್ವರನ ಆರಾಧನೆ) ಮಾಡಿ ಕಷ್ಟವನ್ನು ಕಳೆದುಕೊಳ್ಳಿ. ಮುಂದೆ ಸುಖದ ಜೀವನವಿದೆ.
ರಾಶ್ಯಾಧಿಪತಿ ಗುರುವು 11ರಲ್ಲಿ ಶನಿ ಸಹಿತವಾಗಿ ಇರುವುದರಿಂದ ಯಶಸ್ಸು, ಕೀರ್ತಿ, ಉತ್ಸಾಹ ಎಲ್ಲವನ್ನೂ ಕೊಡುತ್ತಾನೆ. ನೀವೂ ಸುಖವಾಗಿದ್ದು, ಬೇರೆಯವರಿಗೂ ಸಂತೋಷ ನೀಡಿ. ಅಲ್ಪ ಆದಾಯವನ್ನು ಧರ್ಮಕ್ಕಾಗಿ, ಅನ್ನದಾನಕ್ಕೆ ವಿನಿಯೋಗಿಸಿದರೆ ಶ್ರೇಯಸ್ಕರ. ನರಸೋಬವಾಡಿಯ ದತ್ತಾತ್ರೇಯನನ್ನು ಪೂಜಿಸಿ.