

ಮೇಷ: ರವಿ, ಶನಿಯು ಒಟ್ಟಾಗಿದ್ದರೆ ಮಾನಸಿಕ ಪರಿಸ್ಥಿತಿ ಮೇಲೆ ಪರಿಣಾಮವಾಗಿ ಕೆಲವೊಂದು ಕೆಲಸಗಳು ದ್ವಂದ್ವದಲ್ಲಿ ಸಾಗುತ್ತವೆ. ಶುಕ್ರನು ಕುಜನ ಮನೆಯಲ್ಲಿ ಇದ್ದು ಅಲ್ಪಮಟ್ಟಿಗೆ ಧನದ ವಿಚಾರಗಳು ಮಂದಗತಿಯಲ್ಲಿ ಸಾಗುವುದು. ಇದಕ್ಕೆಲ್ಲ ಪರಿಹಾರವಾಗಿ, ಗುರುವಿನಲ್ಲಿ ದೃಢವಾದ ನಂಬಿಕೆ, ವಿಶ್ವಾಸ ಇಟ್ಟು ಗುರುಭಕ್ತಿಯಿಂದ ನಡೆದರೆ ತೊಂದರೆಗಳು ದೂರವಾತ್ತವೆ.
ವೃಷಭ: ಈ ವಾರದಲ್ಲಿ ರವಿ, ಶನಿಯು ಸಂಯೋಜನೆಯಲ್ಲಿದ್ದು, ಗುರು ದ್ವಾದಶದಲ್ಲಿ ಇದ್ದರೂ ಗುರುವಿನ ಮೇಲೆ ವಿಶ್ವಾಸವಿಟ್ಟರೆ, ನಂಬಿಕೆಯಿಂದ ಗುರು ಚರಿತ್ರೆಯ ಪಾರಾಯಣ ಮಾಡಿದರೆ ನಿಮ್ಮ ಕೆಲಸಗಳು ನಿಮ್ಮಂತೆ ಆಗುತ್ತವೆ. 12ರಲ್ಲಿ ಗುರುವಿರುವುದರಿಂದ ಗುರು ದತ್ತಾತ್ರೇಯನನ್ನು ಪೂಜಿಸಿ. ನಿಮ್ಮ ಜೀವನವು ಸುಲಭವಾಗಿ ಮುಂದೆ ಸಾಗುತ್ತದೆ.
ಮಿಥುನ: ಏಕಾದಶದಲ್ಲಿ ಗುರು ಇದ್ದು, ಏನು ಬೇಕಾದರೂ ಕೊಡುತ್ತಾನೆ. ಶನಿಯು 6ರಲ್ಲಿ ಇದ್ದು, ನಿಮ್ಮ ವೃತ್ತಿಯಲ್ಲಿ ಚಾಣಾಕ್ಷತನ ತೋರಿಸಿ ಸಾಧನೆ ಮಾಡಬಹುದು. ರವಿ, ಶನಿಯು ಒಂದೇ ಮನೆಯಲ್ಲಿ ಬರುವುದರಿಂದ ಯಾರೊಂದಿಗೂ ದ್ವೇಷ ಬೇಡ. ವಾದ-ವಿವಾದ ಮಾಡದೆ ಮುಂದೆ ಸಾಗಿದರೆ ನಿಮ್ಮ ಕೆಲಸವು ನಿಮ್ಮಂತೆ ಆಗಿ ಫಲ ಕೊಡುವುದರಲ್ಲಿ ಸಂದೇಹವಿಲ್ಲ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
ಕಟಕ: ‘ಚಂದ್ರಮ ಮನಸೋ ಜಾತಹ’ ಎಂಬ ಮಂತ್ರಾರ್ಥದಂತೆ ಮನುಷ್ಯನ ಮನಸ್ಸನ್ನು ಸದೃಢವಾಗಿ ಇಡುವವನು, ಮನಸ್ಸಿನ ಮೇಲೆ ಅಧಿಕಾರವನ್ನು ಕೊಟ್ಟಿರುವುದು ಚಂದ್ರಗ್ರಹಕ್ಕೆ. ಮನುಷ್ಯನು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಈ ಸಮಯದಲ್ಲಿ ಅಷ್ಟಮದಲ್ಲಿ ಶನಿ ಇದ್ದು, ದಶಮದಲ್ಲಿ ಗುರುವಿರುವುದರಿಂದ ಉಮಾಮಹೇಶ್ವರ ಸಹಿತ ಚಂದ್ರಚೂಡನನ್ನು ಪ್ರಾರ್ಥಿಸಿ, ಪೂಜಿಸಿ. ಚಂದ್ರ ಅಷ್ಟೋತ್ತರವನ್ನು ಪಠಿಸಿ.
ಸಿಂಹ: ದೈವಬಲವನ್ನು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಿದರೆ ಕಾರ್ಯದಲ್ಲಿ ಯಶಸ್ಸನ್ನು ಕಂಡುಕೊಳ್ಳುವುದು ಸುಲಭವಾಗುತ್ತದೆ. ಎಲ್ಲರ ಮನಸ್ಸನ್ನು ಗೆದ್ದು, ಧನ, ಜನ ಸಂಪಾದನೆ ಮಾಡ ಬಹುದು. ಸೂರ್ಯನಾರಾಯಣ ಅಷ್ಟೋತ್ತರ ಪಠಿಸಿ. ಆದಿತ್ಯ ಹೃದಯ ಪಾರಾಯಣ ಮಾಡಿ. ಮಖ ನಕ್ಷತ್ರದಲ್ಲಿ ಜನಿಸಿದವರು ಸುಬ್ರಹ್ಮಣ್ಯನನ್ನು ಪೂಜಿಸಲೇಬೇಕು.
ಕನ್ಯಾ: ‘ದೈವಾಧೀನಂ ಜಗತ್ ಸರ್ವಂ ಮಂತ್ರಧೀನಂ ತು ದೈವತಂ’ ಎಂಬ ವೇದಾಂತ ಸಾರದಂತೆ ಇಷ್ಟದೇವರನ್ನು ಮಹಾಮಂತ್ರದಿಂದ ಪೂಜಿಸಿ, 6ರ ಶನಿ ಕೊಡುವ ಲಾಭ, ಯಶಸ್ಸು, ಕೀರ್ತಿಯನ್ನು ಪಡೆದು ನೀವು ಮಾಡುವ ಕೆಲಸಗಳಲ್ಲಿ ಪ್ರಗತಿಯನ್ನು ಕಾಣಬಹುದು. ಅಷ್ಟಮದಲ್ಲಿ ಗುರು ಇರುವುದರಿಂದ ದೇಹಕ್ಕೆ ಆಲಸ್ಯ ಬೇಡ. ಅನಂತವಾದ ದೈವಕೃಪೆಯೊಂದಿದ್ದರೆ ನಿಮ್ಮನ್ನು ದೇವರೇ ಕಾಪಾಡುತ್ತಾನೆ.
ತುಲಾ: ಪುರಂದರ ದಾಸರಿಗೆ ಹರಿಯು ದರ್ಶನವನ್ನು ಕೊಟ್ಟಂಥ ಭಕ್ತಿಯನ್ನು ನೀವು ಬೆಳೆಸಿಕೊಂಡರೆ, ಗುರುವು ಉಚ್ಚ ಫಲವನ್ನು ಕೊಡುತ್ತಾನೆ. ಯಾವ ಹಾನಿಯನ್ನೂ ಮಾಡದೆ ದೇವರು ರಕ್ಷಣೆ ಕೊಟ್ಟು ಕಾಪಾಡುತ್ತಾನೆ. ಪಂಚಮದಲ್ಲಿ ಶನಿ ಇದ್ದು, ಯಾರೊಂದಿಗೂ ಚರ್ಚೆ ಬೇಡ, ಯಾರೊಂದಿಗೂ ವಿರಸ ಬೇಡ. ದುರ್ಗಾ ಸಹಸ್ರನಾಮ ಪಾರಾಯಣ ಮಾಡಿ, ಸುಖ-ಸಂತೋಷವನ್ನು ಅನುಭವಿಸಿ.
ವೃಶ್ಚಿಕ: ಶನಿಯು ಸ್ವಕ್ಷೇತ್ರದಲ್ಲಿ ಚತುರ್ಥದಲ್ಲಿದ್ದು, ಯಾವ ಕೆಡುಕನ್ನು ಮಾಡದೆ ಜೀವನವನ್ನು ಮುನ್ನಡೆಸಿಕೊಂಡು ಹೋಗುತ್ತಾನೆ. ಆರರಲ್ಲಿ ಗುರುವಿರುವುದರಿಂದ ಕೆಲಸ ನಿಧಾನವಾಗಬಹುದು. ಕಾರ್ಯಗಳಲ್ಲಿ ಯಶಸ್ಸನ್ನು ಕಾಣಲು ಮೇ ಒಂದರವರೆಗೂ ನೀವು ಕಾಯಲೇಬೇಕು. ಷಷ್ಠಿಯಂದು ಸುಬ್ರಹ್ಮಣ್ಯ ಕವಚವನ್ನು ಪಠಿಸಿ. ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಿ.
ಧನುಸ್ಸು: ಧನು ರಾಶಿಯವರಿಗೆ ಅತ್ಯಂತ ಒಳ್ಳೆಯ ಸಮಯವಿದ್ದು, ಶನಿ, ಗುರು ಗ್ರಹಗಳು ನಿಮಗೆ ವಿಶೇಷ ಫಲವನ್ನು ಕೊಡಲು ತೃತೀಯ ಮತ್ತು ಪಂಚಮದಲ್ಲಿ ಇದ್ದಾರೆ. ಇದು ಆನಂದಮಯ ಸಮಯವಾಗಿರುವುದರಿಂದ ಸಂತೋಷಕ್ಕೆ ಕುಂದುಕೊರತೆ ಬಾರದಂತೆ ನೋಡಿಕೊಂಡು ಮಹಾಸಂಕಲ್ಪವನ್ನು ನೆರವೇರಿಸಿ ಕೊಳ್ಳುವ ಕಾಲವಿದು. ಬಯಸಿದ್ದನ್ನು ಪಡೆದು ಜನಾನುರಾಗಿ ಆಗಿ ಒಳ್ಳೆಯ ಬದುಕನ್ನು ನಡೆಸಬಹುದು. ಗುರು ನರಸಿಂಹನನ್ನು ದರ್ಶಿಸಿ ಬನ್ನಿ. ಗುರು ಚರಿತ್ರೆಯ ಒಂದು ಅಧ್ಯಾಯವನ್ನು ಪ್ರತಿನಿತ್ಯ ಪಾರಾಯಣ ಮಾಡಲೇಬೇಕು.
ಮಕರ: ರವಿ, ಶನಿಯು ಸಂಪರ್ಕದಲ್ಲಿ ಇರುವುದರಿಂದ ಯಾರೊಂದಿಗೂ ಚರ್ಚೆ ಮಾಡದೆ ನಿಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡಿ, ದೈವ ಕೃಪೆಯನ್ನು ಗಳಿಸಿಕೊಳ್ಳಿ. ಈ ಸಮಯದಲ್ಲಿ ಶನಿಸ್ತೋತ್ರವನ್ನು ಪಾರಾಯಣ ಮಾಡಿ. ಈಶ್ವರನನ್ನು ಪೂಜಿಸಿ. ಸರ್ವಸಂಕಟ ಪರಿಹಾರವಾಗಿ ದೈವವೇ ನಿಮ್ಮನ್ನು ಒಳ್ಳೆಯ ಮಾರ್ಗದಲ್ಲಿ ನಡೆಸಿ ಬೇಡಿದ ವರವನ್ನು ಕೊಡುತ್ತಾರೆ.
ಕುಂಭ: ದ್ವಿತೀಯದಲ್ಲಿ ರಾಹುವಿದ್ದು, ಮನೆಯಲ್ಲಿ ಮಡದಿ, ಮಕ್ಕಳನ್ನು ಪ್ರೀತಿಯಿಂದ ನಡೆಸಿಕೊಂಡು ಅವರಿಗೆ ಸಂತೋಷವನ್ನೂ ನೀಡಿರಿ. ರವಿ, ಶನಿ ಸಂಯೋಜನೆಯಲ್ಲಿದ್ದು ಕೆಲವೊಂದು ಕಲಹಗಳು ಹಾಗೂ ಬೇಕಾದವರೇ ನಿಮ್ಮ ಮನಸ್ಸಿಗೆ ನೋವು ಉಂಟು ಮಾಡಿ ವಿರಸವನ್ನು ಮೂಡಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಮೌನಕ್ಕೆ ಶರಣಾಗಿ. ಬಂದ ವಿಚಾರಗಳನ್ನು ಬಂದಂತೆ ಬಿಟ್ಟು ನಿಮ್ಮ ಕೆಲಸಕಾರ್ಯಗಳ ಬಗ್ಗೆ ಗಮನ ಹರಿಸಿ. ಕುಲದೇವರನ್ನು ಪೂಜಿಸಿ, ಪ್ರಾರ್ಥಿಸಿ. ರಾಮ ಅಷ್ಟೋತ್ತರ ಪಠಿಸಿ. ಶುಭವಾಗುವುದು.
ಮೀನ: ರಾಶ್ಯಾಧಿಪತಿ ಗುರು ಎರಡನೇ ಮನೆಯಲ್ಲಿದ್ದು, ನಿಮಗೆ ಸಂಸಾರ ಸುಖವನ್ನು ಕೊಟ್ಟಿರುತ್ತಾನೆ. ದ್ವಾದಶ ಶನಿಯಿಂದ ಮನಸ್ಸಿಗೆ ನೋವುಂಟು ಮಾಡುವ ಘಟನೆಗಳು ನಡೆಯುವ ಸೂಚನೆ ಕಂಡುಬರುತ್ತದೆ. ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳದೆ, ದೈವದ ಮೊರೆ ಹೋಗಿ. ಲಕ್ಷ್ಮಿ ಸಹಿತ ಅನಂತಪದ್ಮನಾಭನನ್ನು ಪೂಜಿಸಿ. ಅನಂತವಾದ ಶುಭಫಲಗಳನ್ನು ಪಡೆಯಲು ಅನಂತನ ವ್ರತಕಥೆಯನ್ನು ಓದಿರಿ. ಅನಂತವಾಗಿ ನಿಮ್ಮ ಬಾಳು ಸುಖ ಮತ್ತು ಶಾಂತಿಯಿಂದ ಕೂಡಿರುತ್ತದೆ.