More

    ಪಾಕಿಸ್ತಾನ ದ್ವೇಷಿಸುವುದು ನನ್ನ ರಕ್ತದಲ್ಲೇ ಇದೆ; ಸಾವಿರ ಬಾರಿ ಜೈ ಶ್ರೀರಾಮ್​ ಹೇಳೋಕ್ಕೂ ಸಿದ್ಧ ಎಂದ ಶಮಿ

    ನವದೆಹಲಿ: 2023ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾವನ್ನು ಫಿನಾಲೆಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ ಇದಾದ ಬಳಿಕ ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್​ನಿಂದ ದೂರ ಉಳಿದಿದ್ದರು ಮತ್ತು ಯಾವುದೇ ಮಾಧ್ಯಮ ಸಂದರ್ಶನಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

    ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ಸಂಸ್ಥೆ ಒಂದರ ಸಂದರ್ಶನದಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾ ವೇಗಿ ಶಮಿ ಅಯೋಧ್ಯೆ ರಾಮ ಮಂದಿರದ ಕುರಿತು ಆಶ್ಚರ್ಯ ಮತ್ತು ಕುತೂಹಲಕಾರಿ ವಿಚಾರಗಳನ್ನು ಮಾತನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

    ಶ್ರೀಲಂಕಾ ವಿರುದ್ಧದ ಏಕದಿನ ವಿಶ್ವಕಪ್​ ಪಂದ್ಯದ ವೇಳೆ ಬೌಂಡರಿ ಗೆರೆಯತ್ತ ನಿಂತಿದ್ದ ನನ್ನನ್ನು ನೋಡಿ ಅಭಿಮಾನಿಗಳು ಜೈ ಶ್ರೀರಾಮ್​ ಎಂದು ಘೋಷಣೆ ಕೂಗಲು ಶುರು ಮಾಡಿದರು. ಆದರೆ, ಅಭಿಮಾನಿಗಳು ಆ ರೀತಿ ಕೂಗಿದ್ದರಲ್ಲಿ ಏನು ತಪ್ಪಿಲ್ಲ ಎಂದು ಹೇಳುವ ಮೂಲಕ ತಮ್ಮ ಧಾರ್ಮಿಕ ಸಾಮರಸ್ಯವನ್ನು ಕಾಯ್ದುಕೊಂಡಿದ್ದಾರೆ.

    ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಆಘಾತ; ಬಿಜೆಪಿ ಜೊತೆ ಕೈ ಜೋಡಿಸಿದ ಆರ್​ಎಲ್​ಡಿ

    ಪ್ರತಿಯೊಂದು ಧರ್ಮದಲ್ಲಿಯೂ ಇತರ ಧರ್ಮವನ್ನು ಇಷ್ಟಪಡದ ಐದಾರು ಜನರು ಇರುತ್ತಾರೆ. ಅದಕ್ಕೆ ನನ್ನ ಯಾವುದೇ ಅಭ್ಯಂತರವಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಿರುವಾಗ ಜೈ ಶ್ರೀರಾಮ್ ಹೇಳುವುದರಲ್ಲಿ ಏನು ತೊಂದರೆ ಸಾವಿರ ಸಲ ಹೇಳಲಿ ಬಿಡಿ. ಒಂದು ವೇಳೆ ನಾನು ಅಲ್ಲಾಹು ಅಕ್ಬರ್​ ಎಂದು ಹೇಳಲು ಬಯಸಿದರೆ, ನಾನು ಆ ಸಮಯದಲ್ಲಿ ಸಾವಿರ ಸಲ ಅದನ್ನು ಹೇಳುವೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

    ಒಬ್ಬ ಮುಸ್ಲಿಂ ಅದರಲ್ಲೂ ಒಬ್ಬ ಭಾರತೀಯನಾಗಿರುವುದಕ್ಕೆ ನಾನು ತುಂಬಾ ಹೆಮ್ಮೆಪಡುತ್ತೇನೆ. ಕೆಲವರು ನನ್ನ ದೇಶದ ಬಗ್ಗೆ, ಇನ್ನು ಕೆಲವರು ನನ್ನ ಧರ್ಮದ ಬಗ್ಗೆ ಮಾತನಾಡಿದರು. ಆದರೆ ಅಲ್ಲಿ ನನ್ನ ಬೌಲಿಂಗ್ ಅನ್ನು ಹೊಗಳುವ ಬದಲು ಈ ವಿವಾದವನ್ನೇ ಹೈಲೈಟ್ ಮಾಡಿದ್ದಾರೆ. ನಾನು ಕೂಡ ಭಾರತೀಯ. ನನ್ನ ದೇಶವೇ ನನ್ನ ಮೊದಲ ಆದ್ಯತೆ ಪಾಕಿಸ್ತಾನವನ್ನು ದ್ವೇಷಿಸುವುದು ನನ್ನ ರಕ್ತದಲ್ಲೇ ಇದೆ ಎಂದು ಮೊಹಮ್ಮದ್ ಶಮಿ ಸಂದರ್ಶನದಲ್ಲಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts