ಈ ರಾಶಿಯವರಿಗೆ ಈ ವಾರ ಕಠೋರವಾದ ದಿನಗಳಿಂದ ಆಚೆ ಬರುವ ಸಮಯ: ವಾರಭವಿಷ್ಯ

Vaara-Bhavishya
Published on

ಮೇಷ ರಾಶಿ

ಶನಿಯ ಏಕದಶದ ಸಂಚಾರಕ್ಕೆ ಇನ್ನೂ ಕೇವಲ 10 ದಿನಗಳು ಬಾಕಿ ಇದ್ದು ಮಕರ ರಾಶಿಯಿಂದ ಕುಂಭಕ್ಕೆ ಬರುತ್ತಾನೆ. ಅಲ್ಲಿಯವರೆಗೂ ಎಚ್ಚರಿಕೆಯಿಂದ ಮುಂದೆ ಸಾಗಬೇಕು. ಗುರು ಬಲ ಇಲ್ಲದಿರುವ ಸಮಯ. ಮಾತ ಪಿತೃಗಳ ಆಶೀರ್ವಾದ ಪಡೆದು ಮಹತ್ವದ ನಿರ್ಣಯ ತೆಗೆದುಕೊಳ್ಳುವುದು ಒಳಿತು. ಗುರುವನ್ನು ಆರಾಧಿಸಿದರೆ, ಗುರುಗಳಲ್ಲಿ ವಿಶ್ವಾಸ ಇಟ್ಟರೆ ಯಾವ ಕೆಲಸವನ್ನಾದರೂ ಸಂತೃಪ್ತಿಯಿಂದ ಕಾರ್ಯಗತ ಮಾಡಿಕೊಳ್ಳಬಹುದು. ಸುಬ್ರಮಣ್ಯನನ್ನು ಪ್ರಾರ್ಥಿಸಿ ಪೂಜಿಸಿ. ಸುಬ್ರಮಣ್ಯ ಅಷ್ಟೋತ್ತರ ಪಠಿಸಿ.

ವೃಷಭ ರಾಶಿ

ಏಕಾದಶದಲ್ಲಿ ಗುರುವಿದ್ದು, ಶನಿಯು 9ರಿಂದ ಹತ್ತನೇ ಮನೆಗೆ ಬಂದು ಸೇರುತ್ತಾನೆ. ಮೇಷದಲ್ಲ್ಲೂ ಇರುವ ರಾಹು ಬಹಳಷ್ಟು ವೈಯಕ್ತಿಕ ವಿಚಾರದಲ್ಲಿ ಗೊಂದಲ, ಸಾಮಾಜಿಕ ವಿಚಾರದಲ್ಲೂ ಯುದ್ದ ಮಾಡಿಸುತ್ತಾನೆ. ನಿಮ್ಮ ರಾಶಿಯ ಅಧಿಪತಿ ದುರ್ಗೆ ನಿಮ್ಮನ್ನು ಕಾಪಡುತ್ತಾಳೆ. ದುರ್ಗಾಷ್ಟೋತ್ತರ ಪಠಿಸಿ. ಖಡ್ಗಮಾಲಾ ಸ್ತೋತ್ರ ಪಾರಾಯಣ ಮಾಡಿ.

ಮಿಥುನ ರಾಶಿ

ಶನಿಯು ಅಷ್ಟಮ ಸ್ಥಾನ ಬಿಟ್ಟು 9ನೇ ಮನೆಯಾದ ಕುಂಭ ರಾಶಿಗೆ ಬಂದು ನಿಮ್ಮ ನಿಂತು ಹೋದ ಜೀವನಕ್ಕೆ ಪ್ರೇರಣೆ ಕೊಟ್ಟು ನಿಮ್ಮನ್ನು ಕಾಪಡುತ್ತಾನೆ. ಗುರು ದಶಮದಲ್ಲಿದ್ದು, ಗುರು ಪ್ರಾರ್ಥನೆ ಇರಲಿ. ಗುರು ಚರಿತ್ರೆಯ 5ನೇ ಅಧ್ಯಾಯ ಓದಿ, ನಿಮಗೆ ಶ್ರೇಯಸ್ಸು ಉಂಟಾಗುತ್ತದೆ. ಗುರುದತ್ತನನ್ನು ಪ್ರಾರ್ಥಿಸಿ. ದತ್ತಾತ್ರೇಯ ಅಷ್ಟೋತ್ತರ ಪಠಿಸಿ.

ಕಟಕ ರಾಶಿ

ಸಪ್ತಮ ಶನಿ ಅಷ್ಟಮಕ್ಕೆ ಬಂದರೂ ಜೀವನದಲ್ಲಿ ಯಾವುದೇ ದುಷ್ಪರಿಣಾಮ ಆಗುವುದಿಲ್ಲ. ಗುರು ದಶಮಕ್ಕೆ ಬರುವವರೆಗೂ ನಿಮ್ಮ ಜೀವನದಲ್ಲಿ ಸಂತೃಪ್ತಿ ದೊರಕಿ ನಿಮ್ಮನ್ನು ಕೈ ಹಿಡಿದು ನಡೆಸುತ್ತಾನೆ. ನಿಮಗಾಗಿ ಇರುವವರು ನಿಮ್ಮನ್ನು ನೋಡಿ ಸಂತಸಪಡುತ್ತಾರೆ. ಚಂದ್ರನ ರಾಶಿಯವರಾದ ನೀವು ಶಿವನನ್ನು ಪ್ರಾರ್ಥಿಸಲೇಬೇಕು. ರಾಮನನ್ನು ಪೂಜಿಸಿ. ಜೀವನದಲ್ಲಿ ನೆಮ್ಮದಿ, ಯಶಸ್ಸು ಹೊಂದುತ್ತೀರಿ.

ಸಿಂಹ ರಾಶಿ

ಅಷ್ಟಮ ಗುರು ಏಪ್ರಿಲ್​ನಲ್ಲಿ ಒಂಬತ್ತಕ್ಕೆ ಬರುತ್ತಾನೆ. ಶನಿ ಅಷ್ಟಮಕ್ಕೆ ಬಂದರೂ ಯಾವ ತೊಂದರೆ ಆಗುವುದಿಲ್ಲ. ರಾಶ್ಯಾಧಿಪತಿ ಸೂರ್ಯನು ಬೆಳಕನ್ನೂ ಧೈರ್ಯವನ್ನೂ ಕೊಟ್ಟು ರಕ್ಷಿಸುತ್ತಾನೆ. ಆದಿತ್ಯ ಹೃದಯ ಪಾರಾಯಣ ಮಾಡಿ. ಮಾಘ ಮಾಸದ ಪ್ರಾರಂಭದಲ್ಲಿ ಸೂರ್ಯ ನಮಸ್ಕಾರ ಮಾಡಿದರೆ ಶ್ರೇಯಸ್ಸು ಉಂಟಾಗುತ್ತದೆ. ಮಾಖಾ ನಕ್ಷತ್ರದವರು ಸುಬ್ರಹ್ಮಣ್ಯ ಅಷ್ಟೋತ್ತರ ಪಾರಾಯಣ ಮಾಡಲೇಬೇಕು.

ಕನ್ಯಾ ರಾಶಿ

ಇನ್ನು 10 ದಿನಗಳ ಅಂತರದಲ್ಲಿ ಪಂಚಮ ಶನಿ ಬಿಟ್ಟು 6ಕ್ಕೆ ಬರುತ್ತಾನೆ. ಆದ ನಷ್ಟವನ್ನೂ ತುಂಬಿಸಿ ಕೊಟ್ಟು, ಕಷ್ಟವನ್ನು ದೂರವಿಟ್ಟು ಸಂತೃಪ್ತಿ ಜೀವನ ಕೊಡುತ್ತಾನೆ. ಗುರು ಬಲ ಮಾತ್ರ ಏಪ್ರಿಲ್ 21ರವರೆಗೆ ಇರುತ್ತದೆ. ಶನಿ ಬದಲಾದರೂ ಗುರುವು ನಿಮ್ಮನ್ನು ಶಾಪಗ್ರಸ್ಥರನ್ನಾಗಿ ಮಾಡಿ, ಕೊಟ್ಟ ಮಾತನ್ನು ನೀವು ಉಳಿಸಿಕೊಳ್ಳದಿದ್ದರೆ ಕೆಲಸಗಳಲ್ಲಿ ನಿರೀಕ್ಷಿತ ಫಲ ಉಂಟಾಗುವುದಿಲ್ಲ. ಮಹಾವಿಷ್ಣುವನ್ನೂ ಅರ್ಚಿಸಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಲಕ್ಷ್ಮಿ ಹೃದಯ ಪಾರಾಯಣ ಮಾಡಿಸಿ. ಎಲ್ಲವೂ ಸರಿಹೋಗುತ್ತದೆ.

ತುಲಾ ರಾಶಿ

ಗ್ರಹ ಸ್ಥಿತಿಯೂ ಏರುಪೇರಾಗಿದ್ದರೂ ಪೂರ್ವಪುಣ್ಯದ ಪುಣ್ಯ ಹೊಂದಿರುವ ನೀವು. ನಿಮ್ಮ ನಿರೀಕ್ಷಿತ ಮಟ್ಟ ಮುಟ್ಟುವುದು ಸತ್ಯದ ಮಾತು. ಕೇಳದೆ ಕೊಡುವವನು ದೇವರೊಬ್ಬನೆ. ತುಲಾ ರಾಶಿಗೆ ನಂಬಿದ ದೇವರು ಕೈ ಹಿಡಿಯುತ್ತಾನೆ. ಕೃಷ್ಣ ಅಷ್ಟೋತ್ತರ ಪಾರಾಯಣ ಮಾಡಿ. ಮನಸ್ಸು ಉಲ್ಲಾಸದಿಂದ ತುಂಬಿರುತ್ತದೆ.

ವೃಶ್ಚಿಕ ರಾಶಿ

ಕಮಲದ ಹೂವು ಕೆರೆಯಿಂದ ಕಿತ್ತ ನಂತರ ದೇವರ ಮುಡಿಗೇರಿದರೆ ಸುಂದರವಾಗಿರುತ್ತದೆ. ಸೂರ್ಯಾಸ್ತ ನಂತರ ಮುದುಡುತ್ತದೆ. ಸದ್ಯದಲ್ಲೇ ಅಂತ ಪರಿಸ್ಥಿತಿಯಿಂದ ಆಚೆ ಬಂದು ನೀವು ಹಗಲಲ್ಲಿ ಸೂರ್ಯಕಾಂತಿಯಂತೆ ಸಂಜೆಯಲಿ ತಾವರೆಯಂತೆ ಇರಬೇಕಾಗುತ್ತದೆ. ಗುರುವು ಸಾಲವನ್ನೂ ತೀರಿಸಿ ಮುಂದೆ ಕೊಂಡೊಯ್ಯುತ್ತಾನೆ. ಹಂತಹಂತವಾಗಿ ಸುಮಾರು 10 ತಿಂಗಳಲ್ಲಿ ನಿಮ್ಮ ಆಸೆಗಳು ಪೂರ್ಣಗೊಳ್ಳುತ್ತವೆ. ಲಕ್ಷ್ಮಿ ನರಸಿಂಹನನ್ನು ಪ್ರಾರ್ಥಿಸಿ. ಅಕ್ಕಿ ಮೊಸರು ಬೆಲ್ಲ ಕೊಟ್ಟು , ಪಾನಕ ಕೋಸಂಬರಿ ಹಂಚಿರಿ.

ಧನಸ್ಸು ರಾಶಿ

ಮಾನವ ರೂಪದಲ್ಲಿ ಹುಟ್ಟಿದ ರಾಮಚಂದ್ರನು ಉತ್ತಮರಲ್ಲಿ ಅತ್ಯುತ್ತಮನಾದ ವಿಭೀಷಣನನ್ನು ಲಂಕಾ ನಗರದ ರಾಜನನ್ನಾಗಿ ಮಾಡಿದ. ಅಂದರೆ ವಿಭೀಷಣನಂತೆ ನಿಮಗೆ ರಾಜ ಯೋಗ ಬರುವುದರಲ್ಲಿ ಸಂದೇಹವಿಲ್ಲ.ರಾಮಾಯಣ ಪಾರಾಯಣ ಮಾಡಿ. ಉತ್ತಮ ಪಂಡಿತರ ಹತ್ತಿರ ಹೋಗಿ ಪವಮಾನ ಸೂಕ್ತ ಕಲಿತು ಪಾರಾಯಣ ಮಾಡಿ. ಹನುಮಂತನು ನಿಮಗೆ ಸಾಮ್ರಾಜ್ಯ ದೊರಕಿಸುತ್ತಾನೆ. ಹಮ್ ಹನುಮತೆ ನಮಃ ಎಂಬ ಮಂತ್ರವನ್ನು ಪಠಿಸಿ. ಆಂಜನೇಯ ಅಷ್ಟೋತ್ತರ ಪಾರಾಯಣ ಮಾಡಿ.

ಮಕರ ರಾಶಿ

ಕಠೋರವಾದ ದಿನಗಳಿಂದ ಆಚೆ ಬರುವ ಸಮಯ. ಶನಿಯ ಕಡೆಯ ಭಾಗದಲ್ಲಿ ಕುಂಭ ರಾಶಿಗೆ ಬರುತ್ತಾನೆ. ಹೆದರಿಕೆ ಹತಾಶೆ ಯಾವುದು ಬೇಡ. ದೈವಕ್ಕೆ ತಲೆ ಬಾಗಿದರೆ ನಿಮ್ಮ ಕಷ್ಟಗಳು ದೂರವಾಗಿ ನಿಮ್ಮನ್ನು ಸಾಕ್ಷಾತ್ ಶನಿಯು ಹರಸುತ್ತಾನೆ. ಶನಿ ಅಷ್ಟೋತ್ತರ ಪಠಿಸಿ. ಗುರು ಚರಿತ್ರೆ ಪಾರಾಯಣವನ್ನು ಮುಂದುವರಿಸಿ.

ಕುಂಭ ರಾಶಿ

ಕುಂಭ ರಾಶಿಗೆ ದ್ವಿತೀಯದಲ್ಲಿ ಗುರುವಿದ್ದು, ಗುರುವಿನ ಭದ್ರಕೋಟೆ ನಿಮ್ಮನ್ನು ರಕ್ಷಿಸುತ್ತದೆ. ಶನಿಯು ದ್ವಾದಶಕ್ಕೆ ಬರಲಿದ್ದಾನೆ. ಶನಿಯ ಪ್ರತಾಪ ತಗ್ಗಲು ದೇವರ ದೇವ ಮಹಾದೇವನನ್ನೆ ಪೂಜಿಸಬೇಕು. ಕುಲಗುರುಗಳ ದರ್ಶನ ಪಡೆದು ಅವರ ಆಶೀರ್ವಾದದಿಂದ ಕೆಲಸಗಳಲ್ಲಿ ಮುಂದೆ ಸಾಗಿರಿ.

ಮೀನ ರಾಶಿ

ಮೀನ ರಾಶಿಗೆ ದ್ವಾದಶಕ್ಕೆ ಶನಿ ಬಂದರೂ ಲಗ್ನದಲ್ಲಿ ಗುರುವಿರುವುದರಿಂದ ಯಾವ ಅಂಜಿಕೆ, ಅಳುಕು ಬೇಡ. ಮನಸ್ಸಿಗೆ ಧೈರ್ಯ ಬಂದು ನಿಂತು ಹೋದ ನಿಮ್ಮ ಕೆಲಸದಲ್ಲಿ ಮುಂದೆ ಸಾಗುವುದು ಸತ್ಯವಾದ ಮಾತು. ಆದರೆ, ಗುರುವಿಗೆ ವಿಶೇಷ ಪ್ರಾರ್ಥನೆ ಮಾಡಿ. ಜಗನ್ಮಾತೆ ದುರ್ಗೆಯನ್ನು ಪೂಜಿಸಿ. ಚಂಡಿ ಪಾರಾಯಣ ಮಾಡಿಸಿ. ನಿಮ್ಮ ಜೀವನದಲ್ಲಿ ಶಕ್ತಿಗಳು ಸಕಾರಾತ್ಮಕವಾಗಿ ಬದಲಾಗುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net