

ಇದೇ 18ನೇ ತಾರೀಕು ಸೂರ್ಯನು ಕನ್ಯಾ ರಾಶಿಯನ್ನು ಪ್ರವೇಶಿಸುತ್ತಾನೆ. ಸಂಕ್ರಮಣದ ಪುಣ್ಯ ಕಾಲವು ಸೋಮವಾರವಿದ್ದು ನಮ್ಮೆಲ್ಲರ ಕಷ್ಟಗಳನ್ನು ಕಳೆಯುವ ಲೋಕಕ್ಕೆ ಪ್ರಥಮ ಗುರುವಾದ ಗಣೇಶನನ್ನು ಪ್ರಾರ್ಥಿಸಿ, ಅವನು ನಿಮಗೆ ಶುಭವನ್ನು ತರಲಿದ್ದು ಒಳ್ಳೆಯ ಫಲಗಳನ್ನು ವಿನಾಯಕನೇ ತಂದುಕೊಡುತ್ತಾನೆ. ಆತುರದ ನಿರ್ಧಾರ ಬೇಡ. ಗುರು ವೃಷಭ ರಾಶಿಗೆ ಸಂಚರಿಸುವ ತನಕ ಮೌನವಾಗಿರಿ. ಆಯುಷ್ಯಪರ್ಯಂತ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಲು ಮರೆಯದಿರಿ. ಸೋಮವಾರ ಸ್ವರ್ಣ ಗೌರಿ ಹಾಗೂ ವರಸಿದ್ದಿ ವಿನಾಯಕನನ್ನು ಪೂಜಿಸಿ ವರವನ್ನು ಬೇಡಿದರೆ ಕಾರ್ಯಸಿದ್ಧಿಯಾಗುತ್ತದೆ.
ವೃಷಭ ರಾಶಿಗೆ ಸೂರ್ಯನು ಪಂಚಮಕ್ಕೆ ಬರಲಿದ್ದು ಸೂರ್ಯ ನಮಸ್ಕಾರವನ್ನು ಮಾಡಿ. ಆದಿತ್ಯ ಹೃದಯ ಪಾರಾಯಣವನ್ನು ಮಾಡಿ, 16 ಸಾಷ್ಟಾಂಗ ನಮಸ್ಕಾರ ಮಾಡಿದರೆ ನಿಮಗೆ ತೊಂದರೆ ಕೊಡುವವರನ್ನು ದೇವರೇ ದೂರವಿಟ್ಟು ನಿಮ್ಮ ಕಾರ್ಯಗಳನ್ನು ನಡೆಸಿಕೊಡುತ್ತಾನೆ. 6ರ ಕೇತುವಿಗೆ ವೃಷಭ ರಾಶಿಯಲ್ಲಿ ಜನಿಸಿದ ನೀವು ವಿಶೇಷವಾಗಿ ವರಸಿದ್ಧಿ ವಿನಾಯಕ ವ್ರತವನ್ನು ಮಾಡಿದರೆ ವಿಘ್ನಗಳು ಬಾರದಂತೆ ತಡೆದು ನಿಮ್ಮ ಮನೋ ಇಚ್ಛೆಯನ್ನು ಪರಿಪೂರ್ಣಗೊಳಿಸುತ್ತಾನೆ.
ಮಿಥುನಾಧಿಪತಿ ಬುಧನು ನಾಳೆಯಿಂದ ಸೂರ್ಯನಿಂದ ದ್ವಾದಶದಲ್ಲಿ ಇದ್ದು ನಿಮ್ಮನ್ನು ಪರೀಕ್ಷಿಸುವ ಕಾಲ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬೇಕೆಂಬ ಆಸೆ ಇರುತ್ತದೆ. ಮೌನವಾಗಿದ್ದೇ ಸಾಧನೆಯನ್ನು ಮಾಡುವವನು ನಿಜವಾದ ಮನುಷ್ಯನು. ಅತಿಯಾಗಿ ಮಾತನಾಡಿ ಮನಸ್ಸು ಹಾಳು ಮಾಡಿಕೊಳ್ಳದೆ, ನಿಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಮುಂದೆ ಸಾಗಿದರೆ ಒಳ್ಳೆಯದಾಗುತ್ತದೆ. ಸೂರ್ಯ ಸ್ತೋತ್ರ ಪಟಿಸಿ. ಆರೋಗ್ಯವೃದ್ಧಿಯಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಜಯ ಉಂಟಾಗುತ್ತದೆ.
ವೃಷಭ ರಾಶಿಯ ಅಧಿಪತಿ ಶುಕ್ರ ಕಟಕ ರಾಶಿಯಲ್ಲಿ ಇರುವುದರಿಂದ ಅದು ಚಂದ್ರನ ಮನೆಯಾಗಿದ್ದು, ಮಕ್ಕಳು ತಾಯಿಯನ್ನಲ್ಲದೆ ಇನ್ನು ಯಾರನ್ನು ಕೇಳಬೇಕು? ಮಗು ಅಮ್ಮ ಎಂದು ತಾಯಿಯನ್ನು ಹುಡುಕಿ ಬಂದು ತನ್ನ ಹಸಿವನ್ನು ಹಿಂಗಿಸಿಕೊಳ್ಳುತ್ತದೆ. ದುರ್ಗಾ ಪೂಜೆಯಂ ದಿಗ್ವಿಜಯಂ ಎಂಬಂತೆ ಅಷ್ಟೈಶ್ವರ್ಯವನ್ನು, ಬುದ್ಧಿಯನ್ನು ಕೊಡುವ ಮಹಾತಾಯಿ ದುರ್ಗೆಯನ್ನು ಪೂಜಿಸಿ ನಿಮ್ಮ ಮನೋ ಕಾಮನೆಗಳನ್ನು ಪೂರೈಸಿಕೊಳ್ಳಿ. ದೇಹಕ್ಕೆ ಅತಿಯಾದ ಆಯಾಸವು ಒಳ್ಳೆಯದಲ್ಲ. ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆ ವಹಿಸಿ.
18ನೆ ತಾರೀಖು ಸೋಮವಾರದಿಂದ ಸೂರ್ಯನು ಬುಧನ ಮನೆಗೆ ಬರುವುದರಿಂದ ಕಾರ್ಯ ವೈಖರಿಯಲ್ಲಿ ವಿಭಿನ್ನತೆ ಕಂಡು ಹಲವಾರು ಸಂಕಟಗಳು ದೂರವಾಗುವ ಕಾಲವಿದು. ಬೆಳಕಿಲ್ಲದೆ ಮನುಷ್ಯನು ಬದುಕಲಾಗುವುದಿಲ್ಲ. ರಾತ್ರಿಯಲ್ಲಿ ನಡೆಯಲು ದೀಪದ ಆಶ್ರಯ ಬೇಕೇ ಬೇಕು. ಭಗವಂತನ ಆಶ್ರಯದಲ್ಲಿ ಸೂರ್ಯನಾರಾಯಣನನ್ನು, ದ್ವಿತೀಯದಲ್ಲಿರುವ ಅಂಗಾರಕನಿಗೆ ಸುಬ್ರಹ್ಮಣ್ಯ ದೇವರನ್ನು ಅನಂತವಾಗಿ ಪ್ರಾರ್ಥಿಸಿ.
ರಾಶಿ ಸೂರ್ಯನು ಮಿತ್ರ ಕ್ಷೇತ್ರಕ್ಕೆ ಬಂದು ಕೆಲವು ವಿಚಾರಗಳು ಅಂದುಕೊಂಡಂತೆ ನಡೆದು ಮನಸ್ಸಿಗೆ ಆನಂದವನ್ನು ತರುತ್ತಾನೆ. ನಾವು ಆಡುವ ಮಾತಿಗೆ ಬೆಲೆ ಇರಬೇಕು. ಮಾತನಾಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬಂತೆ ಎಲ್ಲರನ್ನು ನಾವು ಪ್ರೀತಿಯಿಂದ ಗೌರವದಿಂದ ಕಂಡದ್ದೇ ಆದರೆ ನಾಲಿಗೆಯಲ್ಲಿ ಅಸತ್ಯವನ್ನು ನುಡಿಯದೇ, ಶುದ್ಧವಾಗಿದ್ದರೆ ಎಂಟರ ಗುರು ತಕ್ಕಮಟ್ಟಿಗೆ ರಕ್ಷಣೆಯನ್ನು ನೀಡುತ್ತಾನೆ. ಆರರಲ್ಲಿ ಶನಿ ಇದ್ದೂ, ನಿಮ್ಮ ನಯ ವಿನಯದಿಂದ ಕೆಲವು ಕಾರ್ಯಸಾಧನೆಯಿಂದ ಧನವನ್ನು ಪಡೆಯಬಹುದು.
ರಾಶಿ ಲಗ್ನದಲ್ಲಿ ಕೇತುವಿದ್ದು, ಶುಕ್ರ ಮನೆಯಲ್ಲಿ ಇದ್ದು, ಸಪ್ತಮದಲ್ಲಿ ಗುರುವಿರುವುದು ಶುಭವನ್ನು ತರುವುದರಲ್ಲಿ ಸಂದೇಹವೇ ಬೇಡ. ಗುರುದೇವ ಪರಬ್ರಹ್ಮ ಎಂಬ ವಚನವಿದೆ. ಗುರುವೇ ಮನುಷ್ಯನನ್ನು ಅನುಗ್ರಹಿಸಿದಾಗ ಯಾವ ಗ್ರಹವೂ ತನ್ನ ನೀಚಾಂಶ ತೋರಿಸುವುದಿಲ್ಲ. ಕಾರ್ಯಸಿದ್ಧಿ ಲಭಿಸುತ್ತದೆ. ನಿಮ್ಮ ಗುರುಗಳ ಮೇಲೆ ನಂಬಿಕೆ ಇರಲಿ. ಗುರುಭಕ್ತಿ ಇದ್ದರೆ ಕೈಲಾಸ ಪರ್ವತದಲ್ಲಿ ಕುಳಿತಿರುವ ಮಹಾಶಿವವೇ ನಿಮ್ಮನ್ನು ಹರಸಿ ನಿಮ್ಮ ಮನೆಗೆ ಭಾಗ್ಯದ ಗಂಟನ್ನು ಕೀರ್ತಿ ಲಾಭವನ್ನು ಜೀವನದಲ್ಲಿ ತಂದುಕೊಡುತ್ತಾನೆ. ವೃಷಭ, ತುಲಾ ರಾಶಿಯವರು ಗುರುವಿನ ಆಜ್ಞೆಯಂತೆ ನಡೆದರೆ ಜೀವನದಲ್ಲಿ ಸಕಾರಾತ್ಮಕತೆಯನ್ನು ಕಾಣಬಹುದು. ದತ್ತ ದೇವರನ್ನು ಪ್ರಾರ್ಥಿಸಿ . ದಕ್ಷಿಣಾಮೂರ್ತಿ ಅಷ್ಟೋತ್ತರ ಪಾರಾಯಣ ಮಾಡಿ.
ಚತುರ್ಥ ಶನಿ ವಕ್ರಗತಿ ಹೊಂದಿ ತೃತೀಯಕ್ಕೆ ಬಂದಿದ್ದು ಈಗ ಅಲ್ಪಸ್ವಲ್ಪ ಸುಖವನ್ನು, ಧನವನ್ನು, ಭೂಮಿಯಿಂದ ಲಾಭವಾಗುವ ಕಾಲವಿರುತ್ತದೆ. ಅಕ್ಟೋಬರ್ 13ರ ನಂತರ ಯಥೇಚ್ಛವಾಗಿ ಧನ ಕನಕ ವಸ್ತು ವಾಹನ ಲಾಭವು ಬಂದು ಸೇರುತ್ತದೆ. ಮನುಷ್ಯನಿಗೆ ದೈವಬಲವೇ ಅತಿ ಮುಖ್ಯ. ದಂಡಧಾರಿಯಾದ ಪಳನಿ ಸುಬ್ರಹ್ಮಣ್ಯನನ್ನು ಪೂಜಿಸಿ. ಜೀವನದ ಸುಖವನ್ನು ವೃದ್ಧಿಸಿಕೊಳ್ಳಿ
ಶನಿಯು ತೃತೀಯದಲ್ಲಿದ್ದು ಗುರುವು ಪಂಚಮದಲ್ಲಿರುವುದರಿಂದ ಯಾವುದೇ ವಿಚಾರ ವಿಷಯಗಳಿಗೆ ನಿರಾಸೆ ಬೇಡ. ಕಾರ್ಯದಲ್ಲಿ ವಿಳಂಬ ಇರುತ್ತದೆಯೇ ಹೊರತು, ಅದು ಸಿದ್ಧಿಯಾಗುವುದಿಲ್ಲವೆಂದು ಅರ್ಥವಲ್ಲ. ನಕಾರಾತ್ಮಕ ಚಿಂತನೆಗೆ ಅವಕಾಶ ಬೇಡ. ಗುರುರಾಶಿಯಲ್ಲಿ ಜನಿಸಿದ ನೀವು ಗುರುವನ್ನು ಭಕ್ತಿಯಿಂದ ಪೂಜಿಸಿದರೆ ಸಕಲವನ್ನು ಸಾಧಿಸಬಹುದು. ಲಕ್ಷ್ಮೀ ನರಸಿಂಹನನ್ನು ಪೂಜಿಸಿ ಪ್ರಾರ್ಥಿಸಿದರೆ ಶತ್ರುಗಳ ಪಲಾಯನವಾಗುವುದರಲ್ಲಿ ಸಂದೇಹವಿಲ್ಲ ಜನ್ಮ ಕೊಟ್ಟ ಮಾತಾಪಿತರಿಗೆ ನಮಸ್ಕರಿಸಿ ಸುಖವನ್ನು ಕಂಡುಕೊಳ್ಳಿ.
ಶನಿಯು ವಕ್ರಗತಿಯಲ್ಲಿ ಸ್ವಕ್ಷೇತ್ರದಲ್ಲಿ ಇದ್ದರೂ ಅನಿರೀಕ್ಷಿತ ಘಟನೆಗಳು ನಡೆಯುವ ಸಂಭವವಿರುತ್ತದೆ. ದೈವ ಚಿಂತನೆ ಇದ್ದರೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ದಾರಿಯನ್ನು ಪರಮಾತ್ಮ ತೋರಿಸುತ್ತಾನೆ. ಅನಂತವಾಗಿ ಭಗವಂತನನ್ನು ಬೇಡಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುವುದು. ಆರೋಗ್ಯದ ಬಗ್ಗೆ ಕಾಳಜಿ ಇರಲೇಬೇಕು.
ಶನಿಯು ದ್ವಾದಶದಲ್ಲಿದ್ದು, ಮನಸ್ಸಿಗೆ ಅಹಿತಕರ ಚಿಂತನೆಗಳು ಬಾಧಿಸಿ ನಿಮ್ಮನ್ನು ಚಿಂತೆಗೆ ಈಡು ಮಾಡುತ್ತದೆ. ಅದಕ್ಕೆ ಪರಿಹಾರವಾಗಿ ಲಕ್ಷ್ಮೀಸಹಿತ ರಂಗನಾಥನನ್ನು ಪೂಜಿಸಿ ಪ್ರಾರ್ಥಿಸಿ, ಸಂಕಷ್ಟಗಳು ದೂರವಾಗಿ ಜೀವನದಲ್ಲಿ ನೆಮ್ಮದಿಯನ್ನು ಸುಖವನ್ನು ಕಾಣಬಹುದು.
ಮೀನ ರಾಶಿಗೆ ದ್ವಿತೀಯದಲ್ಲಿ ಗುರುವಿದ್ದಾನೆ. ಗುರುವಿನ ಜೊತೆ ರಾಹುವಿನ ಸಂಪರ್ಕವಿದ್ದರೂ ಶುಭಚಿಂತನೆ, ಶುಭ ಕಾರ್ಯಗಳನ್ನು ಮಾಡಬೇಕೇ ಹೊರತು, ದ್ವಾದಶ ಶನಿಯು ಕೊಡುವ ಅಲ್ಪ-ಸ್ವಲ್ಪ ತಾಪವನ್ನು ನೆನೆದು ಬೇಸರ ಹೊಂದಬಾರದು. ಬುದ್ಧಿವಂತಿಕೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳುವುದನ್ನು ಮರೆಯಬಾರದು. ಗುರು ದತ್ತಾತ್ರೇಯನನ್ನು ಪೂಜಿಸಿ ಪ್ರಾರ್ಥಿಸಿ, ಒಳ್ಳೆಯ ಪದವಿಯನ್ನು ಕೊಟ್ಟು ಪಟ್ಟವನ್ನು ಕೊಡುತ್ತಾನೆ. ಶುಭವಾಗಲಿ.