ವಾರಭವಿಷ್ಯ: ಈ ರಾಶಿಯವರಿಗೆ ವಿವೇಕದಿಂದ ಕೆಲಸ ಮಾಡಿದರೆ ನೀವು ಗುರಿಯನ್ನು ಮುಟ್ಟುವುದರಲ್ಲಿ ಯಾವುದೇ ಸಂದೇಹ ಇಲ್ಲ.

we
Published on

ಮೇಷ: ಮಂಗಳವಾರ ನೂತನ ಸಂವತ್ಸರ ಆರಂಭ. ಸೋಮವಾರದಂದು ಈಶ್ವರನನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ. ಏಕಾದಶದಲ್ಲಿ ಮೇಷ ರಾಶಿಗೆ ಶನಿ ಕುಜ ಇದ್ದು, ಘರ್ಷಣೆ ಇರುತ್ತದೆ. ಮೇಷದಲ್ಲಿ ಗುರು ಇರುವುದರಿಂದ ಕೆಲಸಗಳು ಮುಂದೆ ಸಾಗುವ ಸಮಯ ಇದ್ದು, ಅನುಕೂಲಕರವಾದ ವಾತಾವರಣ ಇರುತ್ತದೆ. ಯುಗಾದಿಯಂದು ಬೇವುಬೆಲ್ಲ ತಿಂದು ನವಗ್ರಹ ಪ್ರಾರ್ಥನೆ ಮಾಡಿ. ಗ್ರಹಗಳು ನಿಮ್ಮನ್ನು ಹರಸುತ್ತವೆ. ಸುಬ್ರಹ್ಮಣ್ಯ ಪ್ರಾರ್ಥನೆ ಸದಾ ಇರಲಿ. ನೂತನ ಸಂವತ್ಸರ ಶುಭತರಲೆಂದು ಆಶಿಸೋಣ.

ವೃಷಭ: ಗುರು ಮೇ 1ರಿಂದ ಲಗ್ನಕ್ಕೆ ಬಂದು ದ್ವಾದಶ ಗುರುವಿನ ಸಂಕಟವನ್ನು ತಪ್ಪಿಸುತ್ತಾನೆ. ಹರಿಹರರು ಮುನಿದರೂ ಗುರು ಕಾಯುತ್ತಾನೆ. ಆದರೆ ಗುರು ಮುನಿದರೆ ರಕ್ಷಣೆ ಮಾಡುವವರಿಲ್ಲದಂತೆ ಆಗುತ್ತದೆ. 11ರಲ್ಲಿ ರಾಹು ಇರುವುದರಿಂದ ಕಣ್ಣಿಗೆ ಕಾಣದ ಕೆಲಸಗಳನ್ನು ಮಾಡಿಕೊಟ್ಟು ಯಶಸ್ಸು ತರುತ್ತಾನೆ. ರುದ್ರ ಪಾರಾಯಣ ಮಾಡಿಸಿ.

ಮಿಥುನ: ರಾಶ್ಯಾಧಿಪತಿ ಬುಧನು ಗುರುವಿನ ಸಂಪರ್ಕಕ್ಕೆ ಬಂದು ಗುರುವಿನ ಸಂಪರ್ಕದಲ್ಲಿ ನಿರೀಕ್ಷೆಗೂ ಮೀರಿದ ಒಳ್ಳೆಯ ಕೆಲಸ ಕೈಗೂಡಿ ಯಶಸ್ಸು ಮತ್ತು ಕೀರ್ತಿ ತರುತ್ತಾನೆ. 11ರ ಗುರುವು ನಿಮ್ಮ ಅಪೇಕ್ಷೆ ಈಡೆರಿಸುತ್ತಾನೆ. ಸಂಪುಟಿಕರಣದಲ್ಲಿ ಚಂಡಿಕಾ ಪಾರಾಯಣ ಮಾಡಿಸಿ. ಶುಭವಾಗುವುದು.

ಕಟಕ: ಗುರುಗಳ ಮಾರ್ಗವನ್ನು ಅನುಸರಿಸಿ ನಡೆದಾಗ ನಿಮಗೆ ಹಿತ ಮತ್ತು ಸಂತೋಷ ಉಂಟಾಗುತ್ತದೆ. ಮೇ 1ರಂದು ಗುರು ಏಕಾದಶಕ್ಕೆ ಬರುತ್ತಾನೆ. ಅಲ್ಲಿಂದ ಗುರುಬಲ ಬಂದು ಕೆಲಸದಲ್ಲಿ ಅದ್ಭುತ ಯಶಸ್ಸು, ಕೀರ್ತಿ ಗಳಿಸುತ್ತೀರಿ. ಸ್ಥಳದಿಂದ ಸ್ಥಳಕ್ಕೆ ತಿರುಗಾಡಿದರೆ ಆಯಾಸವಾಗುವುದು. ಅಷ್ಟಮ ಶನಿಯಲ್ಲಿ ಪ್ರಯಾಣವನ್ನು ಮಾಡಬೇಡಿ. ಅನನ್ಯವಾಗಿ ಈಶ್ವರನ ಸಹಸ್ರನಾಮ ಪಾರಾಯಣ ಮಾಡಿ. ಸುಖ ಕಂಡುಬರುತ್ತದೆ.

ಸಿಂಹ: ರಾಶ್ಯಾಧಿಪತಿ ಸೂರ್ಯನು, ಸಪ್ತಮದಲ್ಲಿ ಇದ್ದು, ಸುಖವನ್ನು ಕೊಡುವ ಸೂಚನೆಗಳಿವೆ. ನಿಮ್ಮ ಜೀವನವು ಉಪಕಾರದಿಂದ ಕೂಡಿರಲಿ. ಇನ್ನೊಬ್ಬರಿಗೆ ಮಾಡಿದ ಸಹಾಯವೂ ನಮ್ಮನ್ನು ಖಂಡಿತವಾಗಿಯು ಕಾಯುತ್ತದೆ. ಸೂರ್ಯನಾರಾಯಣನಿಗೆ ಆದಿತ್ಯ ಹೃದಯ ಪಾರಾಯಣ ಮಾಡಿ. ದುರ್ಗೆಯನ್ನು ಪೂಜಿಸಿ.

ಕನ್ಯಾ: ಮೇ 1 ರಿಂದ 9ನೇ ಮನೆಗೆ ಗುರು ಬಂದು ಸಕಲ ಸೌಭಾಗ್ಯವನ್ನು ಕೊಡುತ್ತಾನೆ. ಈ ಸಂದರ್ಭದಲ್ಲಿ ಯಾರನ್ನೂ ಭೇಟಿ ಮಾಡದೆ ನಿಮ್ಮ ಸಮಯಕ್ಕೆ ಕಾದರೆ ಅವರೇ ಬಂದು ಕೆಲಸ ಮಾಡಿಕೊಟ್ಟು ನಿಮಗೆ ಧನಾದಿ ಸಕಲ ಭಾಗ್ಯವನ್ನು ಕೊಟ್ಟು ಅನುಗ್ರಹಿಸುತ್ತಾರೆ.

ತುಲಾ: ಚತುರ್ಥ ಶನಿ ಇದ್ದು ತಾತ್ಕಾಲಿಕವಾಗಿ ಗುರುಬಲ ಇರುತ್ತದೆ. ನಮ್ಮ ನಮ್ಮ ಪ್ರಾರಬ್ಧ ಯಾವ ರೀತಿಯಲ್ಲಿ ಇರುತ್ತದೆ ಅದರಂತೆ ಲಾಭನಷ್ಟ ಆಗುವುದು. ಶನಿಯ ಪ್ರಾರ್ಥನೆಇರಲಿ. ಅಷ್ಟಮಕ್ಕೇ ಗುರು ಬಂದು ಕೆಲಸ ನಿಧಾನ ಆಗಿರುವುದರಿಂದ ದತ್ತ ಗುರುಚರಿತ್ರೆ ಪಾರಾಯಣ ಮಾಡಿ. ಸಕಲ ಭಾಗ್ಯವನ್ನು ಕೊಡುತ್ತಾನೆ.

ವೃಶ್ಚಿಕ: ಸ್ಥಗಿತಗೊಂಡ ಕೆಲಸಗಳು ಮೇ 1ರಿಂದ ನಿಮಗೆ ಬೇಕಾಗುವ ರೀತಿಯಲ್ಲಿ ಆಗಿ ಸೌಲಭ್ಯ, ಸಂತೋಷವನ್ನು ಕೊಟ್ಟು ಗುರು ಕೈ ಹಿಡಿದು ನಡೆಸುತ್ತಾನೆ. ಇಚ್ಛಾಜ್ಞಾನ, ಕ್ರಿಯಾಶಕ್ತಿ ಕೊಡುವ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ಸುಬ್ರಹ್ಮಣ್ಯನ ಪೂಜೆ ಮನುಷ್ಯನಿಗೆ ರಾಜಯೋಗವನ್ನು, ವಿಶೇಷವಾದ ಯಶಸ್ಸನ್ನು ತಂದುಕೊಡುತ್ತದೆ.

ಧನಸ್ಸು: ಮಾಯಾವಿ ಪ್ರಪಂಚದಲ್ಲಿ ನಾವು ಯಾರು ಏನೂ ಮಾಡಲಾಗುವುದಿಲ್ಲ. ಈ ಸಮಯದಲ್ಲಿ ವಿವೇಚನೆ, ವಿವೇಕದಿಂದ ಕೆಲಸ ಮಾಡಿದರೆ ನೀವು ಗುರಿಯನ್ನು ಮುಟ್ಟುವುದರಲ್ಲಿ ಯಾವುದೇ ಸಂದೇಹ ಇಲ್ಲ. ಭಗವಂತನ ಪ್ರಾರ್ಥನೆ ಇರಲಿ. ಗುರು ಪರಂಪರೆ ಸ್ತೋತ್ರ ಪಠಿಸಿ. ನರಸಿಂಹನನ್ನು ಧ್ಯಾನ ಮಾಡಿ.

ಮಕರ: ದ್ವಿತೀಯದಲ್ಲಿ ಶನಿ ಇದ್ದು, ಕೆಲಸ ತಡವಾಗುತ್ತದೆ. ಅಂದ ಮಾತ್ರಕ್ಕೆ ನಿಮ್ಮ ಸಮಯ ಚೆನ್ನಾಗಿಲ್ಲ ಎಂದು ಹೇಳಲಾಗದು. ಪ್ರಯತ್ನಪೂರ್ವಕವಾಗಿ ಕುಲದೇವರನ್ನು, ಇಷ್ಟದೇವರನ್ನು ಆರಾಧಿಸಿದರೆ ಎಲ್ಲವನ್ನೂ ಪಡೆದು ಸುಖವಾಗಿರಬಹುದು. ಮುಂಬರುವ ದಿನಗಳಲ್ಲಿ ತಾಳ್ಮೆಯೇ ನಿಮ್ಮನ್ನು ಕಾಯಬಲ್ಲದು.

ಕುಂಭ: 

ಕುಂಭ: ಲಗ್ನದಲ್ಲಿ ಶನಿ, ದ್ವಿತಿಯದಲ್ಲಿ ರಾಹು. ಮೇಷದಲ್ಲಿ ಗುರು ಇದ್ದು, ನಿಮ್ಮ ಕೆಲಸದಲ್ಲಿ ಅಸ್ಥಿರತೆ ಉಂಟಾಗಿ ಗೊಂದಲಕ್ಕೆ ಕಾರಣವಾಗುತ್ತದೆ. ಅಹಂಕಾರ ಮರೆತು ಎಲ್ಲರೊಂದಿಗೆ ಒಂದಾಗಿ ಸಾಗಿ. ಅನನ್ಯವಾಗಿ ಗುರುಚರಿತ್ರೆಯ 14ನೇ ಅಧ್ಯಾಯವನ್ನು ಓದಿ. ದೇವಿ ಪಾರಾಯಣ ಮಾಡಿದರೆ ಶುಭಫಲ ಪಡೆಯಬಹುದು.

ಮೀನ:  ಮೀನ ರಾಶಿಯವರಿಗೆ ಇನ್ನೂ 20 ದಿನಗಳು ಗುರುಬಲ ಇದ್ದು, ಗುರುಸಂಚಾರ ಮುಗಿಯುವುದರೊಳಗೆ ದೈವಬಲದಿಂದ ಏನನ್ನು ಬೇಕಾದರೂ ಪಡೆಯಬಹುದು. ದ್ವಾದಶ ಶನಿಗೆ ಬೆಣ್ಣೆ ಕಾಯಿಸಿದ ತುಪ್ಪದಲ್ಲಿ ಎಳ್ಳು ಮಿಶ್ರ ಮಾಡಿ ದೀಪ ಹಚ್ಚಿ. ದೇವರೇ ದಾರಿದೀಪವಾಗಿ ಸಂಕಟಗಳನ್ನು ಪರಿಹರಿಸುತ್ತಾನೆ. ಶ್ರೀರಂಗನಾಥನ ದರ್ಶನ ಮಾಡಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ಚಿಂತೆ ದೂರವಾಗಿ ಲಾಭವನ್ನು ತರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net