More

    ಗಜಪಡೆಯ ಕೀಳು ಮಟ್ಟದ ಪೋಸ್ಟ್‌ ವಿಚಾರಕ್ಕೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಆ್ಯಂಕರ್ ಅನುಶ್ರೀ! ಏನಿದೆ ಪೋಸ್ಟ್​ನಲ್ಲಿ ?

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಕಿಡಿಗೇಡಿಗಳು ಹಾಕಿದ್ದ ಅಕ್ಷೇಪರ್ಹಾ ಪೋಸ್ಟ್ ಕುರಿತು ಭಾರೀ ಚರ್ಚೆ ಆಗ್ತಿದೆ. ಗಜಪಡೆ ಹೆಸರಿನ ಖಾತೆಯಲ್ಲಿ ಅಶ್ವಿನಿ ಅವರ ಬಗ್ಗೆ ಕೆಟ್ಟದ್ದಾಗಿ ನಿಂದಿಸಲಾಗಿದೆ.

    ಇದನ್ನೂ ಓದಿ: ಲಿವ್ ಇನ್ ಸಂಬಂಧ ಬ್ರೇಕಪ್ ಆದರು ಜೀವನಾಂಶ ಕೊಡಬೇಕು! ಹೈಕೋರ್ಟ್ ಮಹತ್ವದ ತೀರ್ಪು

    ದೊಡ್ಮನೆ ಸೊಸೆ ಬಗ್ಗೆ ಕೀಳು ಮಟ್ಟದ ಪೋಸ್ಟ್​​ಗೆ ಹಲವರು ಕಿಡಿ ಕಾರಿದ್ದಾರೆ. ಈಗ ಅಪ್ಪಟ ಪುನೀತ್ ಅಭಿಮಾನಿ ಆಂಕರ್ ಅನುಶ್ರೀ ಅಶ್ವಿನಿಯವರ ಬೆಂಬಲಕ್ಕೆ ನಿಂತಿದ್ದಾರೆ. ಕಾಮೆಂಟ್ ಮಾಡಿದವನಿಗೆ ‘ಈ ಜಾಗದಲ್ಲಿ ನಿಮ್ಮ ತಾಯಿ ಅಥವಾ ಸಹೋದರಿ ಇದ್ದಿದ್ದರೆ’ ಇದೇ ರೀತಿ ಕಾಮೆಂಟ್ ಮಾಡುತ್ತಿದ್ದಿರಾ ಎಂದು ಪ್ರಶ್ನೆ ಮಾಡಿದ್ದಾರೆ.

    ಇದೀಗ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಅಪ್ಪಟ ಅಭಿಮಾನಿ, ನಿರೂಪಕಿ ಅನುಶ್ರೀ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿರುವ ಪೋಸ್ಟ್​ ಭಾರೀ ವೈರಲ್ ಆಗುತ್ತಿದೆ. ಇದಕ್ಕೆ ಡಾ.ರಾಜ್​ಕುಮಾರ್ ಅಭಿಮಾನಿಗಳು ಶ್ಲಾಘಿಸಿದ್ದಾರೆ.

    ಪೋಸ್ಟ್​ನಲ್ಲಿ ಏನಿದೆ?

    ಹೆಣ್ಣಾಗಿ ಹುಟ್ಟೋದು ಒಂದು ವರ…. ಇನ್ನೊಬ್ಬರ ಮನೆ ಬೆಳಗೋ ಲಕ್ಷ್ಮೀ ಸಮಾಜಕ್ಕೆ ಒಂದು ವರ… ಇದೆಲ್ಲ ಗಾಳಿ ಮಾತುಗಳ ಹೆಮ್ಮರ !!! ಈ ಜಾಗದಲ್ಲಿ ನಿಮ್ಮ ತಾಯಿ ಮಡದಿ ಅಥವಾ ಸಹೋದರಿ ಇದ್ದಿದ್ದರೆ ??? ಹೆಣ್ಣಿಗೆ ಗೌರವ ಸಿಗೋದು… ಒಂದು ಕನಸು ಅಷ್ಟೇ… ಈ ಕೆಟ್ಟೆ ಬೆಳವಣಿಗೆಗೆ ಕೊನೆಯಿಲ್ಲವೇ ?? ಸ್ತ್ರೀ ಅಂದರೆ ಅಷ್ಟೇ ಸಾಕೆ !! ಹೆಣ್ಣೆಂದರೆ ಅಂಬಿಕೆ… ನಿಜ ಮಾಡಿ ಈ ಮೂಢನಂಬಿಕೆ ನಮಸ್ಕಾರ ಎಂದು ಬರೆದುಕೊಂಡಿದ್ದಾರೆ.

    ಏನಾಗಿತ್ತು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್-2024 ಕ್ರಿಕೆಟ್‌ ಟೂರ್ನಿಯಲ್ಲಿಯೂ ಕಳಪೆ ಪ್ರದರ್ಶನ ಮಾಡುತ್ತಿದೆ. ಇದಕ್ಕೆ ಆರ್‌ಸಿಬಿ ಅನ್‌ಬಾಕ್ಸಿಂಗ್ ಈವೆಂಟ್‌ಗೆ ಹೋಗಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಕಾರಣವೆಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದನು.

    ಆಸ್ತಿ ಘೋಷಣೆ ಮಾಡಿದ ಡಾ.ಮಂಜುನಾಥ್‌: ಸ್ಥಿರಾಸ್ತಿ-ಚರಾಸ್ತಿ ಮೌಲ್ಯವೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts