More

    ಲಿವ್ ಇನ್ ಸಂಬಂಧ ಬ್ರೇಕಪ್ ಆದರು ಜೀವನಾಂಶ ಕೊಡಬೇಕು! ಹೈಕೋರ್ಟ್ ಮಹತ್ವದ ತೀರ್ಪು

    ಮಧ್ಯಪ್ರದೇಶ: ಆಧುನಿಕತೆ ಬೆಳೆದಂತೆ ನಾವೆಲ್ಲರೂ ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಳ್ಳಲು ಬಯಸುತ್ತಿರುವುದು ಕಾಣಿಸುತ್ತಿದೆ. ಇಂದಿನ ದಿನಗಳಲ್ಲಿ `ಲಿವ್ ಇನ್ ರಿಲೇಷನ್’ ಎನ್ನುವುದು ಸಾಮಾನ್ಯವಾಗುತ್ತದೆ. ಇಂತಹ ಸಂಬಂಧದಿಂದಾಗಿ ಈಗಾಗಲೇ ಹಲವಾರು ಮಂದಿ ಸಮಸ್ಯೆಗೆ ಸಿಲುಕಿರುವುದು. ಅದರಲ್ಲೂ ಮಹಿಳೆಯರೇ ತಮಗೆ ಮೋಸವಾಗಿದೆ ಎಂದು ದೂರು ಕೂಡ ನೀಡಿರುವ ಬಗ್ಗೆ ನಾವು ಸುದ್ದಿಗಳನ್ನು ಓದಿರುತ್ತೇವೆ.

    ಇದನ್ನೂ ಓದಿ: ಯೋಧರ ಬಸ್​​, ಕಾರು ನಡುವೆ ಭೀಕರ ಅಪಘಾತ; ಮೂವರು ಸಾವು, 25 ಪ್ರಯಾಣಿಕರಿಗೆ ಗಾಯ

    ಈಗ ಮಧ್ಯಪ್ರದೇಶದ ಹೈಕೋರ್ಟ್​ ಮಹತ್ವದ ತೀರ್ಪನ್ನು ನೀಡಿದೆ. ಮದುವೆಯಾಗದೆ ಜೊತೆಯಲ್ಲಿದ್ದ ಮಹಿಳೆಗೂ ಜೀವನಾಂಶ ಕೊಡಬೇಕು. ವಿಚ್ಛೇದನದಂತೆ ಈ ಸಂಬಂಧದಲ್ಲೂ ಗಂಡು ಹೆಣ್ಣಿಗೆ ಜೀವನಾಂಶ ಕೊಡಬೇಕು ಎಂದು ಎಂಪಿ ಹೈಕೋರ್ಟ್​ ಹೇಳಿದೆ. ಪುರುಷನೊಂದಿಗೆ ಹಲವು ವರ್ಷಗಳಿಂದ ವಾಸಿಸುವ ಮಹಿಳೆ ಕಾನೂನುಬದ್ಧವಾಗಿ ಮದುವೆಯಾಗದಿದ್ದರೂ ಸಹ ಪ್ರತ್ಯೇಕತೆಯ ನಂತರ ಜೀವನಾಂಶಕ್ಕೆ ಅರ್ಹಳು ಎಂದು ತೀರ್ಪು ನೀಡಿದೆ.

    ಲಿವ್ ಇನ್ ಸಂಬಂಧ ಬ್ರೇಕಪ್ ಆದರು ಜೀವನಾಂಶ ಕೊಡಬೇಕು! ಹೈಕೋರ್ಟ್ ಮಹತ್ವದ ತೀರ್ಪು

    ತಾನು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಮಹಿಳೆಗೆ ಮಾಸಿಕವಾಗಿ 1,500 ರೂ. ಭತ್ಯೆ ನೀಡಬೇಕು ಎಂಬ ವಿಚಾರಣಾ ನ್ಯಾಯಾಲಯ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿದ ಅರ್ಜಿದಾರರಿಗೆ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಆದರೆ ಹೈಕೋರ್ಟ್​ ವಿಚಾರಣಾ ನ್ಯಾಯಾಲಯ ಆದೇಶವನ್ನು ಎತ್ತಿ ಹಿಡಿದಿದೆ.

    ಪುರುಷ ಮತ್ತು ಮಹಿಳೆ ಪತಿ-ಪತ್ನಿಯಾಗಿ ಜೀವಿಸುತ್ತಿದ್ದರು ಎಂಬ ವಿಚಾರಣಾ ನ್ಯಾಯಾಲಯದ ತೀರ್ಮಾನವನ್ನು ಹೈಕೋರ್ಟ್ ಉಲ್ಲೇಖಿಸಿದೆ. ದಂಪತಿಗಳ ನಡುವೆ ಸಹಬಾಳ್ವೆಯ ಪುರಾವೆಗಳಿದ್ದರೆ ಜೀವನಾಂಶವನ್ನು ನಿರಾಕರಿಸಲಾಗುವುದಿಲ್ಲ ಎಂದು ನ್ಯಾಯಾಧೀಶರು ಒತ್ತಿ ಹೇಳಿದರು. ಪುರುಷ ಮತ್ತು ಮಹಿಳೆ ಪತಿ-ಪತ್ನಿಯಾಗಿ ಜೀವಿಸುತ್ತಿದ್ದರು ಎಂಬ ವಿಚಾರಣಾ ನ್ಯಾಯಾಲಯದ ತೀರ್ಮಾನವನ್ನು ಹೈಕೋರ್ಟ್ ಉಲ್ಲೇಖಿಸಿದೆ. ಹೆಚ್ಚುವರಿಯಾಗಿ, ಸಂಬಂಧದೊಳಗೆ ಮಗುವಿನ ಜನನವನ್ನು ಪರಿಗಣಿಸಿ, ನ್ಯಾಯಾಲಯವು ಮಹಿಳೆಯ ನಿರ್ವಹಣೆಗೆ ಹಣ ನೀಡಬೇಕು ಎಂದು ಹೇಳಿದೆ.

    ಲಿವ್ ಇನ್ ಸಂಬಂಧ ಬ್ರೇಕಪ್ ಆದರು ಜೀವನಾಂಶ ಕೊಡಬೇಕು! ಹೈಕೋರ್ಟ್ ಮಹತ್ವದ ತೀರ್ಪು

    ಈ ಮಹತ್ವದ ನಿರ್ಧಾರವು ಭಾರತದಲ್ಲಿ ಲಿವ್-ಇನ್ ಸಂಬಂಧಗಳಿಗೆ ಸಂಬಂಧಿಸಿದಂತೆ, ಹಾಗೂ ಲಿವ್-ಇನ್​ ರಿಲೇಷನ್​ ಸಂಬಂಧವನ್ನು ಮುಂದುವರೆಸುವವರಿಗೆ ಸ್ಪಷ್ಟವಾಗಿ ಮಾಹಿತಿ ನೀಡಿದೆ.

    ಉತ್ತರಾಖಂಡದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿ: ಫೆಬ್ರವರಿಯಲ್ಲಿ, ಉತ್ತರಾಖಂಡವು ಎಲ್ಲಾ ನಾಗರಿಕರಿಗೆ ಏಕರೂಪದ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಪಿತ್ರಾರ್ಜಿತ ಕಾನೂನುಗಳಿಗೆ ಕಾನೂನು ಚೌಕಟ್ಟನ್ನು ಒದಗಿಸಲು ಏಕರೂಪದ ನಾಗರಿಕ ಸಂಹಿತೆಯನ್ನು ತಂದಿತು. ಮಸೂದೆಯ ಒಂದು ವಿಭಾಗವು ಲಿವ್-ಇನ್ ಸಂಬಂಧಗಳ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ದಂಪತಿಗಳು 21 ವರ್ಷದೊಳಗಿನ ವಯಸ್ಕರಾಗಿದ್ದರೆ ಅವರ ಪೋಷಕರಿಗೆ ತಿಳಿಸಲಾಗುವುದು ಎಂದು ಅದು ಹೇಳುತ್ತದೆ.
    ಲಿವ್ ಇನ್ ರಿಲೇಷನ್ ಬಗ್ಗೆ ನಮ್ಮ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಈಗ ಮಧ್ಯಪ್ರದೇಶದ ಹೈ ಕೋರ್ಟ್​ ನೀಡಿದ ಈ ಮಹತ್ವದ ತೀರ್ಪುನಿಂದ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ.

    ಆಸ್ತಿ ಘೋಷಣೆ ಮಾಡಿದ ಡಾ.ಮಂಜುನಾಥ್‌: ಸ್ಥಿರಾಸ್ತಿ-ಚರಾಸ್ತಿ ಮೌಲ್ಯವೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts