ಈ ರಾಶಿಯವರಿಗೆ ಇಷ್ಟಾರ್ಥಗಳು ಸಿದ್ಧಿಸಿ, ಸುಖಪಡುವ ಸಮಯ: ವಾರಭವಿಷ್ಯ

Vaara-Bhavishya
Published on

ಮೇಷ

ಮೇಷ ರಾಶಿಗೆ ಗುರು-ರಾಹು ಸಂಪರ್ಕವಿದ್ದು, ಗಾಣಗಾಪುರಕ್ಕೆ ತೆರಳಿ ಅನಂತವಾಗಿ ದತ್ತನ ಸೇವೆಯನ್ನು ಮಾಡಿ. ಧೃಢವಾದ ಭಕ್ತಿಯಿಂದ ಪೂಜಿಸಿದಲ್ಲಿ ಕಷ್ಟ-ಕಾರ್ಪಣ್ಯಗಳು ದೂರವಾಗಿ ನಿಮ್ಮ ಪೂರ್ವಪುಣ್ಯದಿಂದ ಕೆಲಸಗಳು ತಾನಾಗಿ ಒದಗಿಬಂದು ನಿಮಗೆ ಸಂತೋಷ ನೀಡುತ್ತದೆ. ಮೇಷ ರಾಶ್ಯಾಧಿಪತಿ ಸುಬ್ರಹ್ಮಣ್ಯನನ್ನು ಸದಾಕಾಲ ಪೂಜಿಸಿ, ಪ್ರಾರ್ಥಿಸಿ.

ವೃಷಭ

ಕಟಕ ರಾಶಿಯ ಸೂರ್ಯನು ಸಿಂಹಕ್ಕೆ ಬಂದಾಗ ಸೂರ್ಯನ ತೇಜಸ್ಸು ವ್ಯಾಪಾರಸ್ಥರು, ಬುದ್ಧಿಜೀವಿಗಳು, ವೇದಾಧ್ಯಯನ ಪಂಡಿತರಿಗೆ ಅಧಿಕ ಫಲವನ್ನು ಕೊಟ್ಟು ಶ್ರೇಯಸ್ಸು ಉಂಟು ಮಾಡುತ್ತದೆ. ವೃಷಭ ರಾಶಿಯವರು ಸದಾ ಕಾಲ ರಾಶ್ಯಾಧಿಪತಿ ಶುಕ್ರನಿಗಾಗಿ ದುರ್ಗೆಯನ್ನು ಪೂಜಿಸಿ. ಅನಂತ ಧನ ಲಾಭ, ಸ್ಥಿರವಾದ ಮನಸ್ಸು, ಯಶಸ್ಸು ಕೊಟ್ಟು ಕಾಪಾಡುತ್ತಾನೆ.

ಮಿಥುನ

ಪರಮಾತ್ಮನು ಶರೀರವನ್ನು ಕೊಟ್ಟಾಗ ಕಿವಿಯನ್ನು ಕಿವುಡಾಗಿಸಿ, ಕಣ್ಣು ಮಂಜು ತಂದು, ಬುದ್ಧಿ ಭ್ರಮಣೆ ಉಂಟಾದಾಗ ಮನುಷ್ಯನು ಜೀವಿಸಲಸಾಧ್ಯವಾಗುತ್ತದೆ. 11ರ ಗುರು, 9ರ ಶನಿಯಿದ್ದು, ಸಮಯವು ನಿಮ್ಮದಾಗಿದೆಯೆಂದು ಅನ್ಯರಲ್ಲಿ ತಪು್ಪ ಹುಡುಕುವುದನ್ನು ಬಿಟ್ಟು ನಿಮ್ಮ ಕಾರ್ಯಕ್ಷೇತ್ರದಲ್ಲಿ ಮುಂದೆ ಸಾಗಿ ಸುಖವಾಗಿರಬಹುದು. ದಶಾವತಾರದ ನಾರಾಯಣನು ಸದ್ಬುದ್ಧಿಯನ್ನು ಕೊಡಲಿ. ಮಹಾವಿಷ್ಣುವನ್ನು ಅರ್ಚಿಸಿ. ಜೀವನವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾನೆ.

ಕಟಕ

ನದಿಯ ನೀರಾಗಲಿ, ಕುಡಿಯುವ ನೀರಾಗಲಿ, ಮನುಷ್ಯನು ಕಾಲಿಟ್ಟಾಗ ಕಲುಷಿತವಾಗುತ್ತದೆ. ಜಲರಾಶಿಯವರಾದ ನೀವು ಮನಸ್ಸನ್ನು ಪರಿಶುದ್ಧವಾಗಿಟ್ಟುಕೊಂಡು ಯಾವುದೇ ಕೆಲಸವನ್ನು ಮಾಡಿದಲ್ಲಿ ಯಾರಿಗೂ ಹೆದರುವ ಅಗತ್ಯವಿಲ್ಲ. ಯಾರ ಹಂಗಿಲ್ಲದೆ ಈಶ್ವರನ ಆರಾಧನೆ ಮಾಡಿರಿ. ನಾಗರಾಜನನ್ನು ಪೂಜಿಸಿ ಬೇಕಾದ್ದನ್ನು ಪಡೆಯಿರಿ. ಸುಖವನ್ನು ಕಂಡುಕೊಳ್ಳಿ.

ಸಿಂಹ

ದ್ವಾದಶ ಸೂರ್ಯ, ಸ್ವಕ್ಷೇತ್ರಕ್ಕೆ ಬಂದು ತೇಜಸ್ಸನ್ನು ಉಂಟು ಮಾಡಿ, ಕಾರ್ಯಾರಂಭಿಸಿ ಚಟುವಟಿಕೆ ಕೊಟ್ಟು ಹುರಿದುಂಬಿಸಿ ಕೆಲಸ ಮಾಡಲು ಅನುವು ಮಾಡಿಕೊಡುತ್ತಾನೆ. ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯನನ್ನು ಮರೆಯದೆ ಪೂಜಿಸಿ. ನಿಮಗೆ ಆರೋಗ್ಯ, ಶರೀರ ಸಮೃದ್ಧಿಯೂ ದೊರಕಿ, ದೇಹಕ್ಕೆ ತೇಜಸ್ಸು ಉಂಟಾಗಿ ಸುಖವಾಗಿರುತ್ತೀರ.

ಕನ್ಯಾ

ಸೂರ್ಯನು ದ್ವಾದಶಕ್ಕೆ ಬರುವ ಸಮಯ, ಎಚ್ಚರವೂ ಇರಲಿ ಆರೋಗ್ಯದ ಬಗ್ಗೆ ಕಾಳಜಿಯೂ ಇರಲಿ. ಅಷ್ಟಮ ಗುರು ಅಲ್ಪ-ಸ್ವಲ್ಪ ಅನಾರೋಗ್ಯವನ್ನು ಉಂಟು ಮಾಡಿ ನಿಮ್ಮನ್ನು ಪೇಚಿಗೆ ಸಿಲುಕಿಸುತ್ತಾನೆ. ಷಷ್ಠ ಶನಿಯಿದ್ದು, ನಿಮ್ಮ ಕಾರ್ಯಕ್ಷೇತ್ರದಲ್ಲಿ ಲಾಭವನ್ನು ಪಡೆದು ಸುಖವೂ ಬರುತ್ತದೆ. ದುಃಖಕ್ಕೆ ಕಾರಣ ಅತಿಯಾದ ಆಸ್ತಿ. ಅತಿಯಾದ ಧನವು ದುಃಖವನ್ನು ತರುವುದು. ಕೊಟ್ಟಿದ್ದನ್ನು ಕೊಡದಿದ್ದರೆ ಅನ್ಯರ ಶಾಪ ರ್ಸ³ಸುವುದು. ಇದನ್ನು ತಿಳಿದು ತಿದ್ದಿಕೊಂಡು ನಡೆದರೆ ಶನಿಯು ಸುಖಕರವಾದ ಜೀವನ ನೀಡುತ್ತಾನೆ.

ತುಲಾ

ರಾಶ್ಯಾಧಿಪತಿ ಶುಕ್ರನಾಗಿದ್ದು, ಕಾಳಿಯನ್ನು, ಕಾಳರಾತ್ರಿ ದೇವಿಯನ್ನು, ವಿದ್ಯಾ ಸ್ವರೂಪಿ ಸರಸ್ವತಿ, ದುರ್ಗೆಯನ್ನು ಪೂಜಿಸಲೇಬೇಕು. ಹಿಂದೂ ಧರ್ಮದಲ್ಲಿ 33 ಸಾವಿರ ಕೋಟಿ ದೇವತೆಗಳಿದ್ದು, ಅವರ ಅನುಗ್ರಹ ಪಡೆಯಲು ದೈವ ಪ್ರಾರ್ಥನೆ ಅತ್ಯಗತ್ಯ. ಸಪ್ತಮದಲ್ಲಿ ಗುರುವಿದ್ದು, ಇಷ್ಟಾರ್ಥಗಳು ಸಿದ್ಧಿಸಿ, ಸುಖಪಡುವ ಸಮಯ. ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ. ಪ್ರತಿನಿತ್ಯ ಗುರುಚರಿತ್ರೆಯ ಒಂದು ಅಧ್ಯಾಯ ಪಾರಾಯಣ ಮಾಡಲೇಬೇಕು.

ವೃಶ್ಚಿಕ

ಮೇಷಕ್ಕೆ ಟಗರು, ವೃಶ್ಚಿಕಕ್ಕೆ ಚೇಳು. ಟಗರು ಗುಮ್ಮುತ್ತದೆ. ಚೇಳು ಕಚ್ಚುತ್ತದೆ. ಪ್ರಾಣಿಗಳು, ಮನುಷ್ಯರು ಭಗವಂತನ ಸೃಷ್ಟಿ. ಕಾಲವೆಂಬ ಈಶ್ವರನು ಜೀವನವನ್ನು ಕೊಟ್ಟು ನಡೆಸುತ್ತಾನೆ. ಉಪಕಾರ ಸ್ಮರಣೆ ಇದ್ದರೆ, ನಿಮ್ಮ ಜೀವನವು ಉತ್ತುಂಗಕ್ಕೆ ಸಾಗುತ್ತದೆ. ಷಣ್ಮುಖನನ್ನು ಪಳನಿಯಲ್ಲಿ ದರ್ಶಿಸಿ ಬಂದರೆ ಯೋಗಾನುಯೋಗಗಳು ಲಭಿಸುತ್ತವೆ.

ಧನುಸ್ಸು

ಏನೂ ಬದಲಾವಣೆಯಿಲ್ಲ, ಅಪೇಕ್ಷಿತ ಕೆಲಸವು ಆಗಲಿಲ್ಲ ಎಂದು ಬೇಸರಿಸಬೇಡಿ. ಗುರುವಿನ ರಾಶಿಯಲ್ಲಿ ಹುಟ್ಟಿದ ನಿಮಗೆ ಗುರುಗಳು ಮನಸ್ಸು ಮಾಡಿದರೆ ಏನನ್ನೂ ಕೊಡಬಲ್ಲರು. ಗುರು ಚರಣಕ್ಕೆ ನಿಮ್ಮ ಲಲಾಟ ಮುಟ್ಟಿದರೆ ನೀವು ಬಯಸಿದ್ದು ಸಿಗುತ್ತದೆ. ಪಾರ್ವತಿ ಸಹಿತ ಪರಮೇಶ್ವರ ಸ್ವರೂಪಿ ತಂದೆ-ತಾಯಿಯನ್ನು ಪೂಜಿಸಿ. ಹರ್ಷ-ಸಂತೋಷ ಕಾರ್ಯಗಳಲ್ಲಿ ಜಯ ಉಂಟಾಗುತ್ತದೆ.

ಮಕರ

ಶನಿಯು ವಕ್ರಗತಿಯಲ್ಲಿ ಬಂದು ರಾಶಿಯನ್ನು ಸೇರಿದ್ದಾನೆ. ಚಿಂತೆಯು ಬೇಡ. ಯಾವಾಗಲೂ ಪರಮಾತ್ಮನು ಕೆಟ್ಟ ಕಾಲವನ್ನು ಕೊಡುವುದಿಲ್ಲ. ದೃಢವಾದ ಭಕ್ತಿಯಿದ್ದರೆ ಒಳ್ಳೆಯ ಕಾಲವು ಬಂದೇ ಬರುತ್ತದೆ. ಸುಂದರಕಾಂಡ ಪಾರಾಯಣ ಮಾಡಿ, ಇಷ್ಟಾರ್ಥ ನೆರವೇರುತ್ತದೆ. ಶನಿಗಾಗಿ ಇನ್ನೂ 7ವಾರ ಕಾಲ ಎಳ್ಳುಬೆಲ್ಲ ದಾನ ಕೊಟ್ಟು ಎಳ್ಳೆಣ್ಣೆ ದೀಪವನ್ನು ಹಚ್ಚಿರಿ. ಎಲ್ಲ ವಿಧವಾದ ಸುಖವು ಬಂದು ಸೇರುವುದು.

ಕುಂಭ

ರಾಶ್ಯಾಧಿಪತಿ ದ್ವಾದಶದಲ್ಲಿ ವಕ್ರಗತಿಯಲ್ಲಿ ಸಾಗಿದ್ದಾನೆ. ಅಂದರೆ ಕೆಲವು ಕಾಲ ನೀವು ಎಚ್ಚರಿಕೆಯಿಂದಿದ್ದರೆ ದೈವ ಪ್ರೇರಣೆಯಿಂದ ಮಾರ್ಗ ತೋರಿ ನಡೆಸುವ ಗುರುವೇ ನಿಮಗೆ ದಾರಿದೀಪವಾಗುತ್ತಾನೆ. ಗುರುವಿನಲ್ಲಿ ದೃಢವಾದ ನಂಬಿಕೆ ಇರಲಿ. ಅವರೇ ಸಾಕ್ಷಾತ್ ಈಶ್ವರನೆಂದು ಪೂಜಿಸಿ. ನಿಮ್ಮ ಹಣೆಬರಹವು ಸರಿಯಾಗಿ ಒಳ್ಳೆಯ ದಿನಗಳನ್ನು ಮುಂದೆ ಕೊಡುತ್ತಾನೆ. ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ಶನಿ ಅಷ್ಟೋತ್ತರ ಪಠಿಸಿ. ಎಕ್ಕದ ಹೂವಿನಿಂದ ಈಶ್ವರನನ್ನು ಪೂಜಿಸಿ. ತಪೋಫಲವು ವೃದ್ಧಿಯಾಗಿ ಧನವೂ, ಸುಖವೂ ಲಭಿಸುತ್ತದೆ.

ಮೀನ

ನೀರಿನಲ್ಲಿದ್ದ ಮೀನು ಸುಂದರವಾಗಿರುತ್ತದೆ. ಮನುಷ್ಯನು ಸ್ವತಃ ದೈವಭಕ್ತನಾಗಿದ್ದರೆ ಅವನ ತೇಜಸ್ಸು ಸಾಕಾಗುತ್ತದೆ. ಮನೋಬಲವು ತಪೋಬಲವೂ ಬರುತ್ತದೆ. ಮೀನ ರಾಶಿಯ ಅಧಿಪತಿ ಗುರುವಾಗಿ ಇರುವುದರಿಂದ ಸಂತೋಷ ಪಡೆಯಲು ದಕ್ಷಿಣಾಮೂರ್ತಿ ಮೊರೆಹೋಗಿ. ಸದಾಶಿವನನ್ನು ಭಜಿಸಿ. ಕಡಲೆ ಕಾಳು-ಬೆಲ್ಲ ನೈವೇದ್ಯ ಮಾಡಿ. ಶನಿಯು ದ್ವಾದಶದಲ್ಲಿದ್ದು, ಯಾರಿಗೂ ಅಪಮಾನ ಮಾಡಬೇಡಿ. ಯಾರನ್ನೂ ನಿಂದಿಸಬೇಡಿ. ಮೌನದಿಂದಿದ್ದರೆ ನಿಮ್ಮ ಕಾರ್ಯಗಳು ಈಡೇರಿ ದೈವ ಸಹಾಯವು ದೊರೆಯುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net