ವಾರಭವಿಷ್ಯ: ಈ ರಾಶಿಯವರಿಗೆ ಧನ-ಕನಕ ಸುಖ ಸಂಪತ್ತು ಒದಗಿ ಬರುತ್ತದೆ

ವಿಜಯವಾಣಿ (10)
Published on

ಮೇಷ: ಆರು ಕಣ್ಣುಗಳು, ಆರು ತಲೆಗಳು, 12 ಬಾಹುಗಳು ಇರುವ ಎಲ್ಲ ದೇವರ ಸ್ವರೂಪ ಸುಬ್ರಹ್ಮಣ್ಯ ದೇವರು ನಿಮ್ಮನ್ನು ಕಾಪಾಡುತ್ತಾನೆ. ಅನಂತ ಭಕ್ತಿಯಿಂದ ನೀವು ಅವನ ಪೂಜೆ ಮಾಡಿದರೆ ನಿಮ್ಮ ಜೀವಿತಾವಧಿಯಲ್ಲಿ ಯಾವುದೇ ಕಷ್ಟ, ನಿರಾಸೆ, ನಷ್ಟಗಳು ಆಗುವುದಿಲ್ಲ. ಅವನು ಪೂಜಿಸಿದ ಕ್ಷಣವೇ ನಿಮಗೆ ಭಾಗ್ಯೋದಯವಾಗಿ ವ್ಯಾಪಾರ-ವಹಿವಾಟು ಆರಂಭವಾಗುತ್ತದೆ, ಶನಿಯ ಸಂಚಾರ ಬಂದರೂ ನಿಮ್ಮನ್ನು ತನ್ನ ಬಾಹುವಿನಿಂದ ಕಾಪಾಡುತ್ತಾನೆ. ನಿತ್ಯ ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ.

ವೃಷಭ: ಮಹಾಕಾಳಿ-ಮಹಾಲಕ್ಷ್ಮೀ- ಮಹಾ ಸರಸ್ವತಿ ಐಕ್ಯರೂಪ ದುರ್ಗಾ ಪರಮೇಶ್ವರಿ, ದುರ್ಗೆಯ ಅನುಗ್ರಹ, ರಾಮನ ಅಪ್ಪಣೆ ಇಲ್ಲದೆ ಯಾರೂ ದಡವನ್ನು ಮುಟ್ಟಲು, ಸಮುದ್ರವನ್ನು ದಾಟಲು ಅಸಾಧ್ಯ. ಆಸೆಯು ಹಿಮಾಲಯ ಪರ್ವತದಷ್ಟಿದೆ. ಧನಕನಕ ವಸ್ತುಗಳು ಸಂತೋಷವನ್ನು ಕೊಡಲು ನಿತ್ಯವೂ ಪ್ರಾತಃಕಾಲದಲ್ಲಿ ದುರ್ಗೆಯನ್ನು ಪೂಜಿಸಿ, ಅರ್ಚಿಸಿ.

ಮಿಥುನ: ದ್ವಾದಶದಲ್ಲಿ ಗುರುವಿದ್ದಾನೆ. ನಿಮಗೆ ಹತ್ತು ಹಲವಾರು ಸಂಕಟಗಳನ್ನು ತಂದು ನಿಮ್ಮನ್ನು ನಿಮ್ಮ ಅಡಿಪಾಯವನ್ನು ಅಲುಗಾಡಿಸಿದ್ದಾನೆ. ನನ್ನಿಂದೇನಾದರೂ ಗುರುದ್ರೋಹ ಆಗಿದೆಯೋ, ಅಥವಾ ಕುಲಗುರುಗಳ ಮಾತಿನಂತೆ ನಡೆಯಲಿಲ್ಲವೆ ಎಂದು ನಿಮ್ಮನ್ನು ನೀವೇ ಅವಲೋಕಿಸಿಕೊಳ್ಳಿ. ಇನ್ನು 5 ತಿಂಗಳಲ್ಲಿ ಆರೋಗ್ಯಕ್ಕೆ, ಯಶಸ್ಸಿಗೆ, ಗುರುವಿನ ಅನುಗ್ರಹ ಬೇಕೇಬೇಕು.

ಕಟಕ: ಏಕಾದಶ ಗುರುವು ನಿಮ್ಮ ಚಿತ್ತವನ್ನು ಸ್ವಸ್ಥವಾಗಿಟ್ಟು, ಸಂತೋಷ ಕೊಟ್ಟು ಪಂಚ ಭಕ್ಷ್ಯ, ಪರಮಾನ್ನ ಕೊಟ್ಟಿದ್ದಾನೆ. ಇದ್ದದ್ದನ್ನು- ಕೊಟ್ಟು ತಿಂದರೆ ಅದು ಮಹಾಭಾಗ್ಯವೆಂದು ಶಾಸ್ತ್ರ-ಪುರಾಣಗಳು ಹೇಳುತ್ತವೆ. ಚಿಂತೆ ದೂರವಿರಿಸಿ, ಶರೀರಕ್ಕೆ ಅಯಾಸ ಆಗದಂತೆ ನೋಡಿ. ಸುಖ-ಶಾತಿ ಸಮೃದ್ಧಿ ಪಡೆಯಲು ಶ್ರೀರಾಮಚಂದ್ರನನ್ನು ಪ್ರಾರ್ಥಿಸಿ-ಪೂಜಿಸಿ. ಶನಿ ಪ್ರದೋಷ ಕಥೆಯನ್ನು ಓದಿರಿ.

ಸಿಂಹ: ಧೈರ್ಯ ಇದ್ದವರಿಗೆ ದೇವರು ತನ್ನಿಂದ ತಾನೇ ಸಹಾಯ ಮಾಡುತ್ತಾನೆ. ಇಷ್ಟ ಇದ್ದವನಿಗೆ ನೌಕರಿಯನ್ನು ಕೊಡುತ್ತಾನೆ. ದೇವರನ್ನು ಚಿಂತಿಸಿದ ಮರುಕ್ಷಣವೇ ನಿಮ್ಮ ಮುಂದೆ ಪ್ರತ್ಯಕ್ಷನಾಗಿ ಬೇಕಾದ ವರ ನೀಡುತ್ತಾನೆ. ಸಿಂಹ ರಾಶಿಯವರಿಗೆ ಗುರು-ಶನಿ ಎಲ್ಲಿ ಬೇಕಾದರೂ ಇರಲಿ ಪರಮಾತ್ಮನು ನಿಮ್ಮ ಬೆನ್ನ ಹಿಂದೆ ಇದ್ದಾನೆ ಎಂದು ತಿಳಿದು ಸೂರ್ಯನಾರಾಯಣನನ್ನು, ಕಾರ್ತಿಕೇಯನನ್ನು ಪ್ರಾರ್ಥಿಸಿ-ಪೂಜಿಸಿ.

ಕನ್ಯಾ: ಗುರುವು ನವಮದಲ್ಲಿ ಇದ್ದು, ಏನೆಲ್ಲಾ ಕೊಟ್ಟಿದ್ದಾನೆ ಎಂದು ನೀವೇ ಆಲೋಚಿಸಿ. ಪರಮಾತ್ಮನು ಕೊಟ್ಟಿದ್ದನ್ನು ಬೇರೆಯವರಿಗೂ ಕೊಟ್ಟರೇ ದೈವವೇ ಒಲಿದು ಬಂದು ನಿಮ್ಮನ್ನು ಕಾಪಾಡುತ್ತಾನೆ. ಋಣವನ್ನು ತೀರಿಸುವ ಕಾಲ ವಚನ ಭ್ರಷ್ಟರಾಗಬಾರದು. ಇಲ್ಲವಾದರೆ ಗುರುಶಾಪವು ಉಂಟಾಗುತ್ತದೆ. ಅನಂತಪದ್ಮನಾಭನ ಕಥೆಯನ್ನು ಓದಿರಿ.

ತುಲಾ: ರಾಮಾ ಎಂದರೆ ಇಷ್ಟಾರ್ಥ ಸಿದ್ದಿಸುವಂಥವನು ಎಂದರ್ಥ. ತುಲಾ ರಾಶಿಯವರಿಗೆ ಪಂಚಮ ಶನಿಯು ಜರುಗಿ ಒಳ್ಳೆಯ ಕಾಲವು ಹತ್ತಿರದಲ್ಲಿದೆ. ತುಲಾ-ವೃಷಭ ರಾಶಿಯಲ್ಲಿ ಹುಟ್ಟಿದವರು ಕಾಳಿಯನ್ನು ಪೂಜಿಸಲೇಬೇಕು, ನಿಮ್ಮನ್ನು ಯಾರಾದರೂ ನಿಂದಿಸಿದರೆ ಅಥವಾ ನಿಮ್ಮ ಭಂಡಾರಕ್ಕೆ ಕೈಹಾಕಿದರೆ ಅವರನ್ನು ಶಿಕ್ಷಿಸಿ, ನಿಮಗೆ ರಕ್ಷಣೆ ಕೊಡುತ್ತಾಳೆ. ತ್ರಿಲೋಕ ಸುಂದರಿಯಾದ ಲಲಿತೆಯನ್ನು ಲಲಿತಾ ಸಹಸ್ರನಾಮದಿಂದ ಪಾರಾಯಣ ಮಾಡಿಸಿ.

ವೃಶ್ಚಿಕ:  ರಾಶಿಯವರಿಗೆ ಮಳೆಗಾಲದಲ್ಲಿ ಜೋರಾಗಿ ಮಳೆ ಬಂದಂತೆ, ಕೆಲವೊಮ್ಮೆ ಅದೃಷ್ಟವು ಒದಗಿ ಬಂದು, ಗುರುಚರಿತ್ರೆಯ 48ನೇ ಅಧ್ಯಾಯದಲ್ಲಿ ಬರೆದಿರುವಂತೆ ಧನ-ಕನಕ ಸುಖ ಸಂಪತ್ತು ಒದಗಿ ಬರುತ್ತದೆ. ನಿಮ್ಮ ಸಾಲವನ್ನು ತೀರಿಸುವ ಸಮಯ. ಗುರುಚರಿತ್ರೆಯ 48ನೇ ಅಧ್ಯಾಯ ಪಠಿಸಿ. ದತ್ತ ಕ್ಷೇತ್ರಕ್ಕೆ ತೆರಳಿ ದತ್ತಾತ್ರೆಯನನ್ನು ಪೂಜಿಸಿ ಬನ್ನಿ.

ಧನಸ್ಸು: ಧನುರ್ ವಿದ್ಯೆಯಲ್ಲಿ ಬಾಣ-ಬಿಲ್ಲುಗಳನ್ನು ಹಿಡಿದು ಚಮತ್ಕಾರವನ್ನು ಶ್ರೀರಾಮಚಂದ್ರನು ತೋರಿಸಿದ್ದಾನೆ. ಆಗ, ಈಗೀನ ಶಸ್ತ್ರಾಸ್ತ್ರಗಳು ಇರಲಿಲ್ಲ. ರಾಮನ ಗುರಿಯೇ ಬಾಣದ ಗುರಿ. ಜೀವನದಲ್ಲಿ ಗುರಿಯನ್ನು ಮುಟ್ಟಲು ಶ್ರೀರಾಮನನ್ನು ಪ್ರಾರ್ಥಿಸಿ. ಸರ್ವಸಂಕಟವನ್ನು ಪರಿಹಾರ ಮಾಡುವ ಚಿಂತಾಮಣಿ ಗಣಪತಿಯನ್ನು ಪೂಜಿಸಿ.

ಮಕರ: ಕತ್ತಲು ಮುಗಿದು ಬೆಳಕು ಹತ್ತುವ ಸಮಯ. ಹತ್ತು ಹತ್ತು ಆಳೆತ್ತರ ಹತ್ತು, ಆಕಾಶ ಮುಟ್ಟು- ಇದು ದೈವ ಕೃಪೆಯಿಂದ ಮಾತ್ರವೇ ಸಾಧ್ಯ. ಭಾಗ್ಯದ ಬಾಗಿಲು ತೆರೆದಿದೆ. ಅತಿಯಾದ ಆಸೆಯನ್ನು ಇಟ್ಟುಕೊಳ್ಳಬಾರದು. ದೈವಕೃಪೆ ವೃದ್ಧಿಸಿಕೊಂಡರೆ ಬಾಳನ್ನು ಬಂಗಾರವಾಗಿಸುತ್ತಾನೆ.

ಕುಂಭ: ದೇವರನ್ನು ಪೂಜಿಸಲು ಹವನಗಳನ್ನು, ವ್ರತವನ್ನು ಮಾಡಲು ಕುಂಭ (ಕಳಶ) ಸ್ಥಾಪನೆ ಮಾಡಲೇಬೇಕು. ಕಳಶ ಪೂಜೆಯನ್ನು ಮಾಡುವುದು ದೈವವನ್ನು ಆವಾಹನೆ ಮಾಡಲು ನಿಮ್ಮ ಬಾಳು ಸುಖವಾಗಿರಲು ಸಾಧ್ಯವಾದಲ್ಲಿ ಐದು ಮಾಸದಲ್ಲಿ ನಿಮಗೆ ಅನುಕೂಲದ ದಿನದಂದು ವಿಧಿವತ್ತಾಗಿ ಸತ್ಯನಾರಾಯಣವನ್ನು ಆವಾಹನೆ ಮಾಡಿ ಪೂಜಿಸಿ. ಇಷ್ಟಾರ್ಥ ನೆರವೇರಿಸಿಕೊಳ್ಳಿ.

ಮೀನ: ಅತಿಯಾದ ಮಂಜು ಕವಿದರೆ ವಿಮಾನದ ಹಾರಾಟವು, ರೈಲು, ಬಸ್ಸುಗಳ ಸಂಚಾರವು ನಿಂತುಹೋಗುತ್ತದೆ. ದಾರಿ ಕಾಣದಂತಾಗುತ್ತದೆ. ಆ ದಾರಿಯಲ್ಲಿ ವಿಘ್ನವಿಲ್ಲದೆ ನಡೆಸಲು ಶಿವನ ಕೃಪೆ ಬೇಕು. ಧರ್ಮಸ್ಥಳದ ಧರ್ವಧಿಕಾರಿಗಳನ್ನು ಸಂದರ್ಶಿಸಿ ಆಶೀರ್ವಾದ ಪಡೆದು ಅಣ್ಣಪ್ಪ ಸ್ವಾಮಿಯನ್ನು, ಮಂಜುನಾಥನನ್ನು, ಗಣಪತಿಯ ಸೇವೆಯನ್ನು ಮಾಡಿದರೆ ವಿಘ್ನಗಳು, ಸಂಕಟವು ದೂರವಾಗಿ ಸರ್ವಸಂಕಟಕ್ಕೆ ಪರಿಹಾರವು ಸಿಕ್ಕು ಯಶಸ್ವಿಯಾಗಿ ಬಾಳ್ವೆಯನ್ನು ನಡೆಸುತ್ತೀರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net