ವಾರಭವಿಷ್ಯ: ಈ ರಾಶಿಯವರು ದೈವಬಲ ವೃದ್ಧಿಸಿಕೊಂಡರೆ ಏನನ್ನಾದರೂ ಪಡೆಯಬಹುದು

ವಿಜಯವಾಣಿ (7)
Published on

ಮೇಷ: ರಾಶಿಯವರಿಗೆ ಶನಿಯು ಇನ್ನೊಂದು ತಿಂಗಳಲ್ಲಿ 11ನೇ ಮನೆಯನ್ನು ಬಿಡುತ್ತಾನೆ. ಶರ ವೇಗದಲ್ಲಿ ಸಾಗಿ ಕೆಲಸವನ್ನು ಸಾಧಿಸಲು 1 ತಿಂಗಳ ಕಾಲಾವಕಾಶವಿರುತ್ತದೆ. ದೈವಬಲ, ಬುದ್ದಿಬಲ, ಪಿತೃಗಳ ಬಲ ಎಲ್ಲವೂ ಕೂಡಿದರೆ ಮಾತ್ರವೇ ಸಾಧನೆಯನ್ನು ಮಾಡಬಹುದು. ಮಾತಾಪಿತರಿಗೆ ವಂದಿಸಿ. ಸುಬ್ರಹ್ಮಣ್ಯ ದೇವರನ್ನು ಅನನ್ಯವಾಗಿ ಭಜಿಸಿ, ಪೂಜಿಸಿ.

ವೃಷಭ: ನೀವು ಮಾಡುವ ಕೆಲಸದಲ್ಲಿ ದೈರ್ಯವು, ಜನಬಲವು, ಕಷ್ಟಗಳಿಗೆ ಕರಗುವ ಮನಸ್ಥಿತಿಯೂ ಇರಲೇಬೇಕು. ಎಲ್ಲಿಯಾದರೂ ಸರಿ, ಸೌಂದರ್ಯ ಲಹರಿ ಪಾರಾಯಣ ಮಾಡಿಸಿ. ನಿಮ್ಮ ಆಸೆಗಳನ್ನು ಜಗಧಾತ್ರಿ ಪರಮೇಶ್ವರಿ ಪೂರ್ಣ ಮಾಡಿಕೊಡುತ್ತಾಳೆ. ಧೈರ್ಯವಿದ್ದಲ್ಲಿ ಕೀರ್ತಿ, ಕೀರ್ತಿ ಇದ್ದಲ್ಲಿ ಮಾತ್ರ ಬಾಳು ಸಂತೋಷದಿಂದ ಕೂಡಿರಲು ಸುಖವಾಗಿರುತ್ತೀರಿ.

ಮಿಥುನ: ಹತ್ತರ ಶನಿ, ಗುರುಬಲವೂ ಇಲ್ಲದೆ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡಿವೆ. ವಿಚಲಿತರಾಗದೆ ನಿಮ್ಮ ಸಾಹಸಗಳು ಮಹಾವಿಷ್ಣುವಿನ ಅನುಗ್ರಹದಿಂದ ನಡೆಯುತ್ತಲೇ ಇರಲಿ. ಶ್ರೀನಿವಾಸ ದೇವರನ್ನು ಸಾಕ್ಷಾತ್ಕರಿಸಿಕೊಂಡ ಬಾವಾಜಿಯಂತೆ ಭಕ್ತಿಯನ್ನು ಅನುಸರಿಸಿದರೆ ನಿಮ್ಮ ಆತ್ಮದಲ್ಲಿಯೇ ನೆಲೆಸಿ, ನಿಮ್ಮನ್ನು ತೃಪ್ತಿಗೊಳಿಸುತ್ತಾನೆ.

ಕಟಕ: ಏಕಾದಶ ಗುರು ಆನಂದವನ್ನು, ತೃಪ್ತಿಯನ್ನು, ಜೀವನದಲ್ಲಿ ಕೊಟ್ಟಿರುತ್ತಾನೆ. ಮನೋವೇಗದಿಂದ ಶರೀರವನ್ನು ಹಾಳುಮಾಡಿಕೊಳ್ಳದೆ ಸುಮ್ಮನೆ ಓಡಿ ದೇಹವನ್ನು ದಣಿಸದಿರಿ. ನೀವು ಸಕಾರಾತ್ಮಕ ಚಿಂತನೆಯಿಂದ ಹೆಜ್ಜೆಯನ್ನು ಹಾಕಿದರೆ ಏನನ್ನೂ ಪಡೆಯಬಹುದು. ಅಷ್ಟಮ ಶನಿ ಬಿಡುವ ಕಾಲ. ಶಿರ ಭಾಗ, ಕೈ-ಕಾಲು, ಬೆನ್ನೆಲುಬನ್ನು ಕಾಪಾಡಿಕೊಳ್ಳಿ. ಶನೀಶ್ವರ ಅಷ್ಟೋತ್ತರ ಪಠಿಸಿ.

ಸಿಂಹ: ‘ದೇವರ ನಾಮದ ಬಲವೊಂದಿದ್ದರೆ ಸಾಕಯ್ಯ, ನಿನ್ನ ಒಲುಮೆಯಿಲ್ಲದೆ ನಾನು ನಡೆಯಲಾರೆ. ಏನು ಇಲ್ಲದಿದ್ದರೂ ಪರವಾಗಿಲ್ಲ’- ಪುರಂದರದಾಸರು ವಿಠ್ಠಲನ ಸ್ಮರಣೆಯನ್ನು ಮಾಡಿದ ರೀತಿಯಲ್ಲಿ ಮಹಾವಿಷ್ಣುವಿನ ಪೂಜೆ ಮಾಡಿ. ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಬಹುದು. ಮನೋಧೈರ್ಯ, ಮನೋಇಚ್ಛೆ ಪೂರೈಸಲು ಗಣಪತಿಯನ್ನು ಪೂಜಿಸಿ. ಶನಿಸ್ತೋತ್ರ, ದುರ್ಗಾ ಸ್ತ್ರೋತ್ರವನ್ನು ಪಾರಾಯಣ ಮಾಡಿರಿ.

ಕನ್ಯಾ: ಬಲಾಬಲ ಅತಿ ಬಲಾ ಮಹಾಬಲ. ಬಲವೊಂದಿದ್ದರೆ ಸಾಲದು. ಅನಂತವಾದ ಛಲವಿರಬೇಕು. ಅದಕ್ಕೆ ಸಮನಾದ ದೈವಭಕ್ತಿಯೂ ಇರಬೇಕು. ದೇವರು ಕೊಟ್ಟಿದ್ದನ್ನು ಕೊಟ್ಟು ನೀವು ಅನ್ಯರಿಗೆ ಸಹಾಯ ಮಾಡಿದರೆ ನಿಮಗೆ ಲಲಿತಾಪರಮೇಶ್ವರಿಯೇ ಎಲ್ಲವನ್ನೂ ಕೊಟ್ಟು ಮುನ್ನಡೆಸುತ್ತಾಳೆ. ತ್ರಿಪುರ ಸುಂದರಿಯನ್ನು ಪ್ರಾರ್ಥಿಸಿ. ಕಲಬುರಗಿಯ ಸನ್ನತಿಯಲ್ಲಿ ನೆಲೆಸಿರುವ ಚಂದ್ರಲಾ ಪರಮೇಶ್ವರಿ ಸ್ತೋತ್ರವನ್ನು ಪಠಿಸಿ.

ತುಲಾ: ಈ ರಾಶಿಗೆ ಸಂಬಂಧಪಟ್ಟವರು ಉತ್ತುಂಗ ಏರಿ, ಜೀವನದಲ್ಲಿ ಯಶಸ್ಸಿನ ದಡವನ್ನು ಮುಟ್ಟುವ ವೈಶಿಷ್ಟ್ಯವಿರುವ ಏಕೈಕರಾಶಿ. ಯಾರೂ ಏನೇ ಅನ್ನಲಿ, ನಿಮ್ಮ ಯಾವ ಕೆಲಸದಲ್ಲಿಯೂ ಬೇಡದ ವಿಚಾರವನ್ನು ತಲೆಗೆ ಹಾಕಿಕೊಳ್ಳದೆ ನಿಮ್ಮಂತೆ ನೀವು ಸಾಗಿ, ನಿಮ್ಮನ್ನು ದೈವವೇ ಕಾಪಾಡುತ್ತಾನೆ. ದುರ್ಗಾಸಹಸ್ರನಾಮ ಪಾರಾಯಣ ಮಾಡಿರಿ.

ವೃಶ್ಚಿಕ: ಮೇ 13ನೇ ತಾರೀಖಿನವರೆಗೂ ನಿಮ್ಮ ಗುರುಸ್ಮರಣೆ ಮುಂದುವರಿಯಲಿ. ಗುರುವು ಅನಂತವಾಗಿ ಬೇಕಾದ್ದನ್ನು ಕೊಟ್ಟೇ ಕೊಡುತ್ತಾನೆ. ಗುರುವಿನ ಕರುಣೆ ಇದ್ದರೆ ಸಾಕು ಸಾಕು ಎನ್ನುವಷ್ಟು ಧನವನ್ನು, ಬಲವನ್ನು, ಕೀರ್ತಿಯನ್ನು ತಂದುಕೊಡುತ್ತಾನೆ. ಶನಿಯು ಪಂಚಮಕ್ಕೆ ಬರುವ ಕಾಲ. ಎಂದಿಗೂ ಗುರುವನ್ನು ಅನುಸರಿಸಿ. ನಿಮ್ಮ ಕುಲಗುರುವಿಗೆ ವಂದಿಸಿ.

ಧನಸ್ಸು: ಇಡೀ ಭರತಖಂಡವನ್ನು ಬಿಲ್ಲು-ಬಾಣಗಳಿಂದ ಸೃಷ್ಟಿಯ ಚಮತ್ಕಾರವನ್ನು ಮಾಡಿ ಮನುಷ್ಯನ ರೂಪಧರಿಸಿ 10 ಸಾವಿರ ವರ್ಷಗಳನ್ನು ಆಳಿದ ಶ್ರೀರಾಮಚಂದ್ರನನ್ನು ಜೀವನದಲ್ಲಿ ಆದರ್ಶವಾಗಿ ಇರಿಸಿಕೊಳ್ಳಿ. ನಿಮ್ಮಲ್ಲಿ ದೈವಬಲ ವೃದ್ಧಿಸಿಕೊಂಡರೆ ಏನನ್ನಾದರೂ ಪಡೆಯಬಹುದು. ರಾಮತಾರಕ ಮಂತ್ರವನ್ನು ಸದಾ ಜಪಿಸಿ.

ಮಕರ: ರಾಶಿಯ ರಾಜ ಈಶ್ವರನ ಸೃಷ್ಟಿಯಾದ ಶನಿಯು ಮಾರ್ಚ್ 29ರಿಂದ ಮುಂದೆ ಸಾಗುತ್ತಿದ್ದಾನೆ. ನದಿಯ ದಡವನ್ನು ಮುಟ್ಟಿಸಿ, ಜೀವನವನ್ನು ಸಾಗಿಸಿ ಇಷ್ಟಾರ್ಥವನ್ನು ಪೂರೈಸಿಕೊಡುತ್ತಾನೆ. ಇನ್ನು ಒಂದು ತಿಂಗಳ ಕಾಲ ತಪ್ಪದೆ ಶನಿಯ ಆರಾಧನೆಯನ್ನು, ಶನಿ ಅಷ್ಟೋತ್ತರ ಪಠಿಸಿ, ವಂದಿಸಿ, ಪೂಜಿಸಿ, ಧ್ಯಾನಿಸಿ.

ಕುಂಭ: ಮಕರ ರಾಶ್ಯಾಧಿಪತಿ ಶನಿ. ಶನಿಯು ದ್ವಿತೀಯಕ್ಕೆ ಬಂದು ದುಃಖವನ್ನು ಕಳೆದು ನಿಮ್ಮನ್ನು ಮುಂದಿನ ವಿಜಯದ ಹೆಜ್ಜೆಗೆ ಇಡಲು ತಯಾರಿಯನ್ನು ಮಾಡುತ್ತಾನೆ. ಕಷ್ಟ ಕಳೆದಿದ್ದರೆ ಮುಂದಿನ ದಿನಗಳಲ್ಲಿ ದೇವರು ಕೊಟ್ಟಿದ್ದನ್ನು ಅನುಭವಿಸಿ. ದೇವರು ನಮಗೆ ಏನು ಮಾಡಿಲ್ಲವೆಂದು ಅನ್ನಬಾರದು. ಅನ್ನ, ನೀರು, ಬಟ್ಟೆ, ಗಾಳಿ ಆಶ್ರಯ ನೀಡಿದ್ದಾನೆ. ಅವನಿಗೆ ನಾವು ಯಾವ ಬಾಡಿಗೆಯನ್ನೂ ನೀಡುವುದಿಲ್ಲ. ಕೇವಲ ಸ್ಮರಣೆ ಮಾತ್ರದಿಂದ ಸಂತೃಪ್ತನಾಗುತ್ತಾನೆ. ಅನನ್ಯವಾಗಿ ಶ್ರೀಕೃಷ್ಣನನ್ನು ಪ್ರಾರ್ಥಿಸಿ.

ಮೀನ: ವೆಂಕಟೇಶ್ವರನಿಗೆ ಗರುಡ ಸೇವೆಯೇ ಅತಿ ಮುಖ್ಯವಾದ ಸೇವೆ. ಗರುಡನು ಅವನ ಸೃಷ್ಟಿಯೇ. ಗರುಡ ರೂಪದಿಂದ ಬಂದು ಮುನುಷ್ಯನು ಮಾಡುವ ಅಧರ್ಮ, ಅನ್ಯಾಯ, ದುರಾಸೆ, ದುರ್ನಡತೆಯನ್ನು ನೋಡುತ್ತಿರುತ್ತಾನೆ. ಅದನ್ನು ಬಿಟ್ಟು ನಡೆದರೆ ರಾಜಮಾರ್ಗವನ್ನು ತಲುಪಿಸುತ್ತಾನೆ. ಮಧ್ಯಭಾಗದ ಶನಿಯ ಸಂಚಾರದಲ್ಲಿ ಸ್ಥಿರವಾದ ಧನವನ್ನು ಪಡೆದು, ದುಃಖದಿಂದ ದೂರ ಉಳಿದು, ಸುಖವಾದ ನಾವೆಯಲ್ಲಿ ಕುಳಿತು ದಡವನ್ನು ಮುಟ್ಟುವಿರಿ. ವೆಂಕಟೇಶ್ವರ ಅಷ್ಟೋತ್ತರವನ್ನು ಪಠಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net