ವಾರಭವಿಷ್ಯ: ಈ ರಾಶಿಯವರಿಗೆ ಮುಂದಿನ ಯುಗಾದಿಯವರೆಗೆ ಒಳ್ಳೆಯ ಫಲ

ವಿಜಯವಾಣಿ (14)
Published on

ಮೇಷ: ಚಾಂದ್ರಮಾನ ಯುಗಾದಿಯು ಮಾ. 30 ರಂದು ಬಂದು ಗ್ರಹಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಮಾ.29 ಶನಿವಾರದಂದೇ ಶನಿಯು ಮೀನ ರಾಶಿಯನ್ನು ಪ್ರವೇಶಿಸಲಿ ದ್ದಾನೆ. ಮೀನ ರಾಶಿಯಲ್ಲಿ ಪಂಚಗ್ರಹಗಳು ಇದ್ದು, ಶನಿಯು ಗುರುವಿನ ಮನೆಗೆ ಬಂದಿದ್ದರಿಂದ ಜೀವನದಲ್ಲಿ ಪ್ರಯತ್ನವಿಲ್ಲದೆ ಕೆಲಸಗಳು ಫಲಕೊಡುವುದಿಲ್ಲ. ಸೂರ್ಯನೇ ಈ ಸಂವತ್ಸರದ ನಾಯಕನಾದರಿಂದ, ಸೂರ್ಯನಾರಾಯಣನನ್ನು ಪೂಜಿಸಿ ಕ್ಷಿಪ್ರ ಫಲವು ದೊರೆಯುತ್ತದೆ.

ವೃಷಭ: ಹಗಲು ಕಂಡ ಬಾವಿಗೆ ರಾತ್ರಿ ಬೀಳಬೇಡಿ. ದೊಡ್ಡವರು, ಗುರುಗಳ ಸಲಹೆ ಪಡೆದು ಹೆಜ್ಜೆ ಹಾಕಿದರೆ ಅವಾಂತರಗಳು ಆಗುವುದಿಲ್ಲ. ಕಾಗದದ ಬರಹವನ್ನು ಅಳಿಸಬಹುದು. ಆದರೆ ದೇವರು ಬರೆದ ಹಣೆಬರಹವನ್ನು ಯಾರೂ ತಡೆಯಲಾರರು. ತಿದ್ದಿಕೊಂಡು ನಡೆಯುವುದೇ ಜೀವನದ ಗುರಿಯಾಗಿರಲಿ. ರಾಹು ಎಚ್ಚರಿಕೆ ನೀಡಿದ್ದಾನೆ. ಅತಿಯಾದ ಮಾತು ಅತಿಯಾದ ದುಡ್ಡು ದುಃಖವನ್ನು ತರುವುದು. 11ರ ಶನಿ ಸತ್ಪಲ ನೀಡುತ್ತಾನೆ. ಸತ್ಪ್ರಜೆಯಾಗಿ ಬಾಳನ್ನು ನಡೆಸಿದರೆ ಜಯವಿದೆ.

ಮಿಥುನ: ದ್ವಾದಶದಲ್ಲಿ ಗುರುವಿದ್ದಾನೆ. ಹೊಸ ವರುಷದಲ್ಲಿ ಶನಿ ಒಬ್ಬನೇ ದಶಮದಲ್ಲಿ ಬಂದಿರುವುದು ಯಾವುದೇ ವಿಶೇಷ ಫಲ ನೀಡುವುದಿಲ್ಲ. ತೃಪ್ತಿಯಾದ ಸಮಾಧಾನಕರ ಜೀವನ ನಡೆಸುವುದು ಧ್ಯೇಯವಾಗಿರಲಿ. ಗೊಂದಲಮಯ ಜೀವನ ಮಾಡಿಕೊಂಡು ಸಮಸ್ಯೆಗೆ ನಿಲುಕಿಕೊಳ್ಳಬೇಡಿ. ಈ ರಾಶಿಯವರು ಶ್ರೀರಾಮನನ್ನು ಪ್ರಾರ್ಥಿಸಿದರೆ ಹಣೆಯಲ್ಲಿ ಬರೆದ ದುಷ್ಟಾಕ್ಷರಗಳೂ ಶುಭಾಕ್ಷರಗಳಾಗಿ ಪರಿವರ್ತನೆಗೊಳ್ಳುತ್ತದೆ.

ಕಟಕ: ಕಂಟಕ ಶನಿಯನ್ನು ದಾಟಿ ಬಂದಿದ್ದೀರಿ. ಶನಿಯು 9ನೇ ಮನೆಗೆ ಬಂದಿದ್ದಾನೆ. ಆರೋಗ್ಯವೂ ಸುಧಾರಿಸಲು ಇಷ್ಟ ದೇವರನ್ನು ಪೂಜಿಸಿ. ಪಾದರಸದಂತೆ ಜೀವನ ನಡೆಸಬಹುದು. ಶ್ರೀರಾಮಚಂದ್ರನ ಅನುಗ್ರಹವು ಅಗತ್ಯ. ಪಾಡ್ಯದಿಂದ ದಶಮಿಯವರೆಗೂ ರಾಮಪೂಜೆ ಮಾಡಿರಿ. ಮುಂದಿನ ಯುಗಾದಿಯವರೆಗೆ ಒಳ್ಳೆಯ ಫಲಗಳನ್ನು ಪಡೆಯಬಹುದು.

ಸಿಂಹ: ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಏನು ಮಾಡಬೇಕು, ಏನು ಮಾಡಬಾರದೆಂಬ ಗೊಂದಲದ ಕತ್ತಲೆಯು ಜೀವನದಲ್ಲಿದೆ. ರಾಶಿಯ ಅಧಿಪತಿ ಸೂರ್ಯ. ಅವನನ್ನು ಬೇಡಿ ಬೆಳಕನ್ನು ಪಡೆಯಿರಿ. ಅಷ್ಟಮ ಶನಿಯಿಂದ ಆರೋಗ್ಯ ವ್ಯತ್ಯಾಸ ಆಗಬಹುದು. ದೇವ ಪ್ರಾರ್ಥನೆಯನ್ನು ಊರುಗೋಲಾಗಿಟ್ಟುಕೊಂಡು ಮುಂದೆ ಸಾಗಿರಿ. ಗುರು ಏಕಾದಶಕ್ಕೆ ಬಂದಾಗ ಸುಖ ಸಮಯ ಬರಲಿದೆ.

ಕನ್ಯಾ: ಆರರ ಶನಿಯು ಕೋಟಿಯನ್ನು ಕೊಟ್ಟು, ನೀವು ಬಯಸದೆ ಇದ್ದರೂ ನಿಮ್ಮನ್ನು ಸುಖದ ದಾರಿಯಲ್ಲಿ ಇಟ್ಟಿದ್ದ ಗುರುಬಲವು ಇನ್ನೂ ಇದ್ದರೂ, ಸಪ್ತಮಕ್ಕೆ ಶನಿಯು ಗುರುವಿನ ಮನೆಯಲ್ಲಿ ಇರುವುದರಿಂದ ಹೊಟ್ಟೆ ಸಂಬಂಧವಾದ ಕೆಲವೊಂದು ವ್ಯತ್ಯಾಸ ಕಾಣಬಹುದು. ಕೂಡಲೇ ವೈದ್ಯರನ್ನು ಸಂರ್ಪಸಿ. ಶ್ರೀಹರಿಯನ್ನು ಪ್ರಾರ್ಥಿಸಿ ಶುಭವಾಗಲಿ.

ತುಲಾ: ಗುರುಚರಿತ್ರೆಯ ಸಾರಾಂಶದಲ್ಲಿ ಗುರುಗಳ ಚಳಿ ನೀಗಲು ಅಗ್ನಿಯನ್ನು ಪಾತ್ರೆಯಲ್ಲಿ ಹಾಕಿಕೊಂಡು ಸಾಯಂದೇವನು ಬರುವಾಗ ಅವನ ರಕ್ಷಣೆಗಾಗಿ ಗುರುಗಳು ಘಟಸರ್ಪಗಳನ್ನು ಕಳಿಸಿರುತ್ತಾರೆ. ಭಯಭೀತರಾದರೂ, ಮಿಂಚಿನ ಬೆಳಕನ್ನು ಆಧಾರವಾಗಿಟ್ಟುಕೊಂಡು ಗುರುಗಳ ಹತ್ತಿರ ಬಂದು ಸೇರುತ್ತಾರೆ. ಹಾಗೆಯೇ ಗುರು ಕಟಾಕ್ಷ ಇದ್ದರೆ, ಲೋಕಾನುರಾಗಿಯಾಗಿ, ಕೀರ್ತಿಯನ್ನು ಸಂಪಾದಿಸಿ ಬಾಳಬಹುದು.

ವೃಶ್ಚಿಕ: ಪಂಚಮಕ್ಕೆ ಶನಿ ಬಂದಿದ್ದಾನೆ. ಗುರು ಸಪ್ತಮದಲ್ಲಿ ಇರುವುದು ಶುಭವೇ. ಗುರುವಿನ ಸಹಾಯದಿಂದ ಕೆಲಸಗಳು ಆಗುತ್ತವೆ. ಧನವನ್ನು ಪಡೆಯುವ ಮಾರ್ಗವನ್ನು ಹುಡುಕಿಕೊಳ್ಳಬಹುದು. ಸುಬ್ರಹ್ಮಣ್ಯ ದೇವರನ್ನು ಪೂಜಿಸಿ. ಪಂಚಮದಲ್ಲಿ ಶನಿಯಿದ್ದಾನೆ. ಆದ್ದರಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಿ.

ಧನಸ್ಸು: ಧನುರ್ ರಾಶಿಗೆ ಸಪ್ತಮಕ್ಕೆ ಗುರು ಬರಲಿದ್ದು, ಶನಿಯು ಚತುರ್ಥಕ್ಕೆ ಬಂದರೂ ಗುರು ಮನೆಯಲ್ಲಿ ಇರುತ್ತಾನೆ. ಹಾನಿ ಉಂಟಾಗದಿದ್ದರೂ, ವಿಚಾರಗಳನ್ನು ಅವಿವೇಕತನದಿಂದ ಮುಂದೂಡದೆ ಸಮಸ್ಯೆಗಳನ್ನು ಸರಿಯಾಗಿ ಕಂಡುಹಿಡಿದು ಪರಿಹಾರ ಕಂಡುಕೊಂಡರೆ ಲಾಭವು ಕೈ ಸೇರುತ್ತದೆ. ಗುರುದತ್ತಾತ್ರೇಯನ ಗುರುಚರಿತ್ರೆ ಪಾರಾಯಣ ಮಾಡಲೇಬೇಕು.

ಮಕರ: ಕಷ್ಟಗಳಿಂದ ನಿಟ್ಟುಸಿರುಬಿಟ್ಟು ಈಗತಾನೇ ಶನಿಯ ದೃಷ್ಟಿಯಿಂದ ಆಚೆ ಬಂದಿದ್ದೀರಿ. ಉತ್ತರಾಷಾಢ, ಧನಿಷ್ಠ, ಶ್ರವಣ ನಕ್ಷತ್ರದವರಿಗೆ ಶನಿಯ ಪ್ರಭಾವ ಕಳೆದು ಜೀವನವು ಲಾಭದತ್ತ ಸಾಗುವುದು. ಕೈತುಂಬ ಲಾಭ, ಕೀರ್ತಿ ಬರುವ ಕಾಲ. ಎಲ್ಲರಿಗೂ ಸಹಾಯ ಮಾಡಿ. ಬಾಳು ಬಂಗಾರವಾಗಲಿ.

ಕುಂಭ: ಶನಿಯು ಕುಂಭ ರಾಶಿಯನ್ನು ಬಿಟ್ಟು ಗುರು ರಾಶಿಯನ್ನು ಸೇರಿದ್ದಾನೆ. ಶನಿಯು ಕೂಡ ಯಾರ ಅಧೀನದಲ್ಲಿರದೆ ಧರ್ಮ-ಕರ್ಮ ನೋಡುವ ಏಕೈಕ ಗ್ರಹ. ಬಂದ ಧನವನ್ನು ವೃಥಾ ಖರ್ಚು ಮಾಡದೆ ಇಟ್ಟುಕೊಂಡರೆ ಗುರುವು ಪಂಚಮಕ್ಕೆ ಬಂದಾಗ ಅನುಕೂಲವಾಗುತ್ತದೆ. ಶನಿಯ ಪ್ರಾರ್ಥನೆ ಇರಲಿ. ಇನ್ನೂ ಎರಡೂವರೆ ವರ್ಷಗಳ ಕಾಲ ಶನಿ ಸಂಚಾರವು ಇರುತ್ತದೆ.

ಮೀನ: ಶನಿಯು ಕೊಟ್ಟರೆ ಕೋಟ್ಯಧಿಪತಿ. ಕೊಡದಿದ್ದರೆ ನಮ್ಮ ಕರ್ಮಗಳ ಪಾಪದ ರಾಶಿಯನ್ನು ಅನುಭವಿಸುವಂತೆ ಮಾಡುತ್ತಾನೆ. ಶನಿಗೆ ಯಾರ ಪೂಜೆಯೂ ಭಕ್ತಿಯೂ ಬೇಕಿಲ್ಲ. ಧರ್ವಚರಣೆ, ತ್ಯಾಗದ ಬುದ್ದಿ ಇದ್ದರೆ ಸರ್ವಸ್ವವನ್ನೂ ಕೊಡುತ್ತಾನೆ. ಎರಡೂವರೆ ವರ್ಷದ ಶನಿ ಸಂಚಾರ ಕಳೆದಿದೆ. ಇನ್ನೂ 5 ವರ್ಷ ಬಾಕಿಯಿದೆ. ಶನಿಯು ಗುರುಮನೆಯಲ್ಲಿ ಇದ್ದು, ಎಲ್ಲವೂ ಸಕಾರಾತ್ಮಕವಾಗುತ್ತದೆ. ಶನಿಸ್ತೋತ್ರ ಪಠಿಸಿ. ಹರಿಹರನಿಗೆ ಪೂಜೆ ಇರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net