ಮದುವೆಗೆ ಹೋಗೋ ಮುನ್ನ ಎಚ್ಚರ​! ಅಕ್ಷತೆ ಹಾಕುವ ಬದಲು ಕಪ್ಪೆ ಓಟ ಮಾಡಬೇಕಾದೀತು ಹುಷಾರ್​..

marriage
Published on

ಭೋಪಾಲ್​: ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿನ ನಿಯಂತ್ರಣಕ್ಕೆಂದು ಲಾಕ್​ಡೌನ್​ ಮಾಡಲಾಗಿದೆ. ಲಾಕ್​ಡೌನ್​ ಮುಗಿಯುವವರೆಗೂ ದಯವಿಟ್ಟು ಯಾರೂ ಹೊರಗೆ ಹೋಗಬೇಡಿ, ಮದುವೆ ಕಾರ್ಯಕ್ರಮ ಎಂದು ಓಡಾಡಬೇಡಿ ಎಂದು ಸರ್ಕಾರ ಮನವಿ ಮಾಡುತ್ತಲೇ ಇದೆ. ಆದರೂ ಕೇಳದೆ ಮದುವೆಗೆ ಹೋಗಿದ್ದ ಜನರಿಗೆ ಪೊಲೀಸರು ವಿಶೇಷ ಶಿಕ್ಷೆ ನೀಡಿರುವ ಘಟನೆ ಮಧ್ಯಪ್ರದೇಶದ ಭಿಂದ್​ ಜಿಲ್ಲೆಯಲ್ಲಿ ನಡೆದಿದೆ.

ಭಿಂದ್​ ಜಿಲ್ಲೆಯ ಉಮಾರಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಸುಮಾರು 300 ಜನರು ಸೇರಿಕೊಂಡು ಭರ್ಜರಿಯಾಗಿ ಮದುವೆ ಮಾಡುತ್ತಿದ್ದರು. ಈ ವೇಳೆ ಕರೊನಾ ನಿಯಮ ಪಾಲನೆಯಾಗುತ್ತಿದೆಯೇ ಎಂದು ಪರಿಶೀಲಿಸಲು ಪೊಲೀಸರು ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದಾರೆ. ನೂರಾರು ಜನರು ಮಾಸ್ಕ್​, ಸಾಮಾಜಿಕ ಅಂತರವಿಲ್ಲದೆಯೇ ಮದುವೆ ಮಾಡುತ್ತಿದ್ದುದ್ದನ್ನು ಕಂಡ ಪೊಲೀಸರು, ಅವರಿಗೆ ಶಿಕ್ಷೆ ನೀಡುವ ನಿರ್ಧಾರ ಮಾಡಿದ್ದಾರೆ.

ಪೊಲೀಸರು ಬಂದಿದ್ದನ್ನು ಕಂಡೊಡನೆ ಅನೇಕರು ಮದುವೆ ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಸುತ್ತುವರೆದ ಪೊಲೀಸರು ಸಾಕಷ್ಟು ಜನರಿಗೆ ಕಪ್ಪೆ ಓಟ ಮಾಡುವ ಶಿಕ್ಷೆ ನೀಡಿದ್ದಾರೆ. ಈ ಶಿಕ್ಷೆಯ ವಿಡಿಯೋ ಕೂಡ ವೈರಲ್​ ಆಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net