ರಾಜ್ಯದಲ್ಲಿ ಮತ್ತೆ ಮಳೆ ಬಿರುಸು; ಮುಂದಿನ ನಾಲ್ಕು ದಿನ ವರ್ಷಧಾರೆ ಮುನ್ಸೂಚನೆ..

Rain Kerala
Published on

ಬೆಂಗಳೂರು: ರಾಜ್ಯದಲ್ಲಿ ಕೆಲವು ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ  ಇಲಾಖೆ ಮುನ್ಸೂಚನೆ ನೀಡಿದೆ. 

ಜು.1ರಿಂದ ಜು.17ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿರಂತರವಾಗಿ ವರ್ಷಧಾರೆಯಾಗಿತ್ತು. ನಂತರ, ಮಳೆ ಬಿಡುವು ನೀಡಿತ್ತು. ಜೂ 1ರಿಂದ ಜು.22ರವರೆಗೆ ರಾಜ್ಯಾದ್ಯಂತ 392 ಮಿಮೀ ಮಳೆಯಾಗಬೇಕಿತ್ತು. ಆದರೆ, 472 ಮಿಮೀ ಮಳೆಯಾಗಿದ್ದು, ಶೇ.20 ವಾಡಿಕೆಗಿಂತ ಹೆಚ್ಚು ಬಿದ್ದಿದೆ.

ಶನಿವಾರವೂ ಹಲವೆಡೆ ಮಳೆಯಾಗಿದ್ದು, ಬೀದರ್‌ನಲ್ಲಿ 10 ಸೆಂಮೀ ಮತ್ತು ಕಲಬುರಗಿಯಲ್ಲಿ 6 ಸೆಂಮೀ ಮಳೆ ಬಿದ್ದಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಮುಂದಿನ 4 ದಿನ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net