ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ, 8 ಮಂದಿಗೆ ಗಂಭೀರ ಗಾಯ: ರಕ್ಷಣೆ ವೇಳೆ ಮತ್ತೆ ಸ್ಫೋಟ...

Candle
Published on

ಹುಬ್ಬಳ್ಳಿ: ಕೈಗಾರಿಕಾ ಪ್ರದೇಶವೊಂದರಲ್ಲಿ ಭಾರಿ ಸ್ಫೋಟ ಉಂಟಾಗಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ರಕ್ಷಣಾ ಕಾರ್ಯಾಚರಣೆ ವೇಳೆ ಮತ್ತೆ ಸ್ಫೋಟವಾಗಿದ್ದು, ಭಯದ ವಾತಾವರಣ ಉಂಟಾಗಿದೆ.

ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ವಸಾಹತುವಿನಲ್ಲಿನ ಬರ್ತ್​ಡೇಗೆ ಸ್ಪಾರ್ಕ್ ಕ್ಯಾಂಡಲ್​ ತಯಾರಿಸುವ ಕಾರ್ಖಾನೆಯಲ್ಲಿ ಸಂಭವಿಸಿದ ಈ ಅಗ್ನಿ ಅವಘಡ ಉಂಟಾಗಿದೆ. ಶಾರ್ಟ್ ಸರ್ಕ್ಯೂಟ್​​ನಿಂದಾಗಿ ಅಗ್ನಿ ಅವಘಡ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

ಅಗ್ನಿ ಅವಘಡದಿಂದಾಗಿ ಕಾರ್ಖಾನೆಯಲ್ಲಿನ ಮದ್ದುಗಳು ಸ್ಫೋಟಗೊಳ್ಳುತ್ತಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಗಾಯಾಳುಗಳನ್ನು ಕಿಮ್ಸ್​ಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಬ್ಬರ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಇಲ್ಲಿ ಕೆಲಸ ಮಾಡುವವರು ಇದೀಗ ಸಾವು-ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ.

ಗಾಯಾಳುಗಳಲ್ಲಿ ಆರು ಮಂದಿ ಮಹಿಳೆಯರು. ಚನ್ನವ್ವ (42), ಪ್ರೇಮಾ (20), ಮಾಳೇಶ (27), ನನ್ನಿಮಾ (35), ವಿಜಯಲಕ್ಷ್ಮಿ (34), ಮಲ್ಲಿಕ್ ರೆಹಾನ್ (18), ನಿರ್ಮಲಾ (29), ಗೌರವ್ವ (45) ಗಾಯಗೊಂಡವರು.

ರಕ್ಷಣಾ ಕಾರ್ಯಾಚರಣೆ ವೇಳೆಯಲ್ಲೂ ಸ್ಫೋಟಗೊಂಡಿದ್ದು, ಆತಂಕದಲ್ಲೇ ಕಾರ್ಯಾಚರಣೆ ನಡೆಸುವಂತಾಗಿದೆ. ಸ್ಥಳದಲ್ಲಿ ಜನರು ಜಮಾಯಿಸಿದಿದ್ದು, ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಒಳಗಡೆ ಎಷ್ಟು ಜನ ಸಿಲುಕಿಕೊಂಡಿದ್ದಾರೆ ಎಂಬ ಅಂದಾಜು ಇನ್ನೂ ಸಿಕ್ಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net