ಈ ರಾಶಿಯವರು ಯಾವುದಾದರೂ ಹೆಣ್ಣಿನಿಂದ ಸಾಲ ಪಡೆದಿದ್ದರೆ ಹಿಂದಿರುಗಿಸಿ: ವಾರಭವಿಷ್ಯ

Vaara-Bhavishya
Published on
ಮೇಷ

ಈ ರಾಶಿಯವರಿಗೆ ಏಕಾದಶದಲ್ಲಿ ಗುರು ಬಂದಿರುವುದು ಶುಭಸಂದೇಶ. ದೇವರು ಕೊಟ್ಟ ವರ ಸ್ವೀಕರಿಸಿ. ಇದು ಸ್ವಾರ್ಥದಿಂದ ಇರದೆ ಆನಂದದಿಂದಿರುವ ಕಾಲ. ಯಾವುದೇ ಸುಖಕ್ಕೆ ಭಂಗವಿಲ್ಲ. ಗುರುವನ್ನು ಆರಾಧಿಸುವುದು ಏಕೈಕ ಮಾರ್ಗ. ಕುಂಭಕೋಣದ ಹತ್ತಿರವಿರುವ ಸ್ವಾಮಿನಾಥಸ್ವಾಮಿ (ಸುಬ್ರಹ್ಮಣ್ಯ)ಯನ್ನು ಸಂದರ್ಶಿಸಿ ಬನ್ನಿ. ಮನಸ್ಸಿನ ಆರೋಗ್ಯ ಚೆನ್ನಾಗಿದ್ದರೆ ಶರೀರಕ್ಕೆ ಯಾವ ಭಂಗವೂ ಇಲ್ಲ.

ವೃಷಭ

ರಾಹು ವೃಷಭ ರಾಶಿಯಲ್ಲೇ ಇದ್ದು, ರೋಹಿಣಿ ನಕ್ಷತ್ರದ ದಿನದಂದು ಗುರು ನಿಮಗೆ ದಶಮಕ್ಕೆ ಆರು ತಿಂಗಳಿದ್ದು, ಆನಂತರದಲ್ಲಿ 11ನೇ ಮನೆಗೆ ಪರಿವರ್ತನೆಯಾಗುತ್ತಾನೆ. ನಿಮ್ಮನ್ನು ನೀವು ತಿದ್ದಿಕೊಂಡು, ಎಲ್ಲ ವ್ಯವಹಾರದಲ್ಲಿ ಯಾವ ನ್ಯೂನ್ಯತೆ ಇಲ್ಲದಂತೆ ನೋಡಿಕೊಂಡರೆ ಬಾಳು ಬಂಗಾರವಾಗುತ್ತದೆ. ತಾಯಿ ಸರಸ್ವತಿಯನ್ನು ಪೂಜಿಸಿ. ದಶಮ ಗುರುವಿಗೆ ಗುರುನರಸಿಂಹನನ್ನು ಪೂಜಿಸಿ, ಆರಾಧಿಸಿ.

ಮಿಥುನ

ನ.20ರಂದು ಗುರುವು ಕುಂಭರಾಶಿಗೆ ಬಂದು ಸೇರಿರುವುದು ಎಲ್ಲರಿಗೂ ಒಳ್ಳೆಯದನ್ನು ಮಾಡಿ ಸನ್ಮಾರ್ಗದಲ್ಲಿ ನಡೆಯುವಂತೆ ಹೇಳುತ್ತಾನೆ. ಅದರ ಫಲವನ್ನು ಸರಿಯಾಗಿ ಅರ್ಥೈಸಿಕೊಂಡರೆ ನವಮ ಗುರುವು ರಕ್ಷಣೆ ನೀಡಿ ಸುಖವನ್ನು ನೀಡುತ್ತಾನೆ. ಆದರೆ ಅಷ್ಟಮ ಶನಿಗೆ ಪ್ರಾರ್ಥನೆ, ಪೂಜೆ ಇರಲೇಬೇಕು. ನಿತ್ಯ ಶನಿಸ್ತೋತ್ರ ಹಾಗೂ ಶನಿ ಅಷ್ಟೋತ್ತರ ಪಾರಾಯಣ ಮಾಡಿ.

ಕಟಕ

ಸಪ್ತಮದಲ್ಲಿ ಶನಿ ಇರುವುದರಿಂದ, ಸುಖವನ್ನು ಅಪಹರಿಸಬಹುದು. ನಿಮ್ಮ ಕಾರ್ಯವೈಖರಿ ಚಿತ್ತಶುದ್ಧಿಯಿಂದ ಕೂಡಿದ್ದರೆ ಎಲ್ಲವನ್ನೂ ತಿದ್ದಿಕೊಳ್ಳುವ ಸಮಯ, ಇದ್ದದ್ದನ್ನು ಇದ್ದಂತೆಯೇ ಅನುಭವಿಸಿ. ಗುರುವಿನ ಆಶ್ರಯದಲ್ಲಿ ಸತ್ಪಲ ಪಡೆಯಿರಿ.

ಸಿಂಹ

ಸಾಕ್ಷಾತ್ ಗುರುವೇ ನಿಮ್ಮನ್ನು ರಕ್ಷಣೆ ಮಾಡಿ, ಹಣ, ಕೀರ್ತಿಯನ್ನು ಕೊಟ್ಟು ಮುನ್ನಡೆಸುತ್ತಾನೆ ಸಿಂಹ ರಾಶಿಯಲ್ಲಿ ಹುಟ್ಟಿದವರು ನಿತ್ಯಬೆಳಕು ನೀಡುವ ಸೂರ್ಯನಾರಾಯಣನನ್ನು, ಶಿವಪುತ್ರ ಕಾರ್ತಿಕೇಯನನ್ನು ಪೂಜಿಸಿ. ದಿಗ್ವಿಜಯಕ್ಕಾಗಿ ದತ್ತ ದೇವರನ್ನು ವಂದಿಸಿ-ಪ್ರಾರ್ಥಿಸಿ.

ಕನ್ಯಾ

ಪಂಚಮ ಗುರುವಿನಿಂದ ಆನಂದ ಹೊಂದಿದ್ದ ನಿಮಗೆ ನ.20ರಿಂದ ಷಷ್ಠಕ್ಕೆ ಗುರು ಬಂದು ಸೇರಿದ್ದಾನೆ. ನಡೆ-ನುಡಿಯಲ್ಲಿ ಜಾಗರೂಕರಾಗಿರಿ. ಎಡಬಿಡಂಗಿಯಂತೆ ಮಾತಾಡಿ ಸಂಬಂಧ ಕಳೆದುಕೊಳ್ಳಬೇಡಿ. ದುಃಖದುಮ್ಮಾನ ಅತಿಯಾದಾಗ ಮೌನವೇ ದೇವರಾಗುತ್ತದೆ. ನಿತ್ಯವೂ ಶಿವಸ್ತೋತ್ರ ಪಾರಾಯಣ ಮಾಡಿ. ಇನ್ನೂ 6 ತಿಂಗಳ ಪರ್ಯಂತ ಶನಿಗಾಗಿ ಶಿವನನ್ನು ಪೂಜಿಸಿ.

ತುಲಾ

ಪಂಚಮ ಗುರುವು ಶನಿ ಮನೆಯಲ್ಲಿ ಇರುವುದರಿಂದ ಶನಿಯು ಯಾವ ತೊಂದರೆ ಕೊಡದೆ ಕಾಪಾಡಿ ಧೈರ್ಯ, ಕೀರ್ತಿ, ಲಾಭ ಕೊಡುತ್ತಾನೆ. ಸತ್ಕರ್ವ ಚರಣೆ ಇರಲಿ. ಕೋರ್ಟು-ಕಚೇರಿ ವಿಚಾರದಲ್ಲಿ ಜಯ, ಮನಸ್ತಾಪವಿದ್ದಲ್ಲಿ ಅದು ಮಾಯವಾಗಿ ಪ್ರೀತಿ-ಮಾನ್ಯತೆ ಸಿಕ್ಕಿ ನೀವು ಸುಖಪಡುವ ಕಾಲ. ಉಮಾಮಹೇಶ್ವರನನ್ನು ಆರಾಧಿಸಿ.

ವೃಶ್ಚಿಕ

ವೃಶ್ಚಿಕ ರಾಶಿಯವರಿಗೆ ಶನಿಯು 3ರಲ್ಲಿದ್ದಾನೆ. ಗುರು ಶನಿಯ ಮನೆಯಲ್ಲಿದ್ದು ನಿಮ್ಮ ಕೈಸೇರಬೇಕಾದ ಭೂಮಿ, ಧನ, ಒಡವೆ-ವಸ್ತುಗಳು ಬಂದು ಸೇರುತ್ತವೆ. ಗ್ರಹಗಳು ಕೊಡುವಾಗ ಯಾರಿಗೂ ಕೇಳುವುದಿಲ್ಲ. ಕಿತ್ತುಕೊಳ್ಳುವಾಗ ಯಾರಿಗೂ ಹೇಳುವುದಿಲ್ಲ. ಶನಿ ನಿಮಗೆ ಕೊಡುವ ಕಾಲ. ಕೋಟಿಗಟ್ಟಲೆ ಸಾಲವಿದ್ದರೂ, ಕೊಟ್ಟವರಿಗೆ ಕೊಡಿಸಿ ತೃಪ್ತಿಯಲ್ಲಿ ಇಡುತ್ತಾನೆ. ಲಗ್ನದಲ್ಲಿ ಕೇತುವಿರುವ ಕಾಲದಲ್ಲಿ ಯಾವುದಾದರೂ ಹೆಣ್ಣಿನಿಂದ ಸಾಲಪಡೆದಿದ್ದರೆ ಹಿಂದಿರುಗಿಸಿ. ಅದು ಶಾಪವಾಗಬಾರದು. ಸದಾ ನಗುಮುಖವಿರಲಿ.

ಧನು

ಈ ತನಕ ಆಗಿರುವುದು ಸೋಲಲ್ಲ, ಜಯದ ಮೆಟ್ಟಿಲೆಂದು ತಿಳಿದು ಮುನ್ನುಗ್ಗಿ. ಯಾರನ್ನೂ ದೂಷಿಸ ಬೇಡಿ. ಯಾರನ್ನೂ ತೀರಾ ಹತ್ತಿರ ಮಾಡಿಕೊಂಡು ಗುಟ್ಟು ಬಿಟ್ಟುಕೊಡಬೇಡಿ. ನಿಮಗೆ ಸುಸಮಯ ಬಂದಿದೆ. ಬಂಗಾರದ ಕಿರೀಟ ರತ್ನಸಿಂಹಾಸನ ಪಡೆದು ಸುಂದರ ಬಾಳು ನಡೆಸಿ. ಎಲ್ಲರಿಗೂ ಉಪಕಾರ ಮಾಡಿ. ನಿಮಗೆ ಸೋಲೆಂಬುದಿಲ್ಲ. ನೀತಿಮಾರ್ಗದಲ್ಲಿ ಸಾಗಿರಿ. ದತ್ತಾತ್ರೇಯನನ್ನು, ಹನುಮಂತನನ್ನು ಪ್ರಾರ್ಥಿಸಿ.

ಮಕರ

ಕುಂಭ ರಾಶಿಗೆ ಗುರು ಬಂದು ಅಲ್ಪ ಸುಖಶಾಂತಿ, ಧೈರ್ಯವನ್ನು ಕೊಟ್ಟು ಮುನ್ನಡೆಸುತ್ತಾನೆ. ದೇವರು-ಧರ್ಮ ಎಲ್ಲಿದೆಯೋ ಅಲ್ಲಿ ನಕಾರಾತ್ಮಕ ಯೋಚನೆಗಳು ಬೇಡ. ತ್ಯಾಗದಿಂದಲೇ ಬೆಳಕನ್ನು ಕಾಣಬೇಕು. ಶನಿಸ್ತೋತ್ರ ಪಾರಾಯಣ ಮಾಡಿ. ಶಿವಸಹಸ್ರನಾಮ ಪ್ರತಿ ಸೋಮವಾರದಂದು ಶಿವಾ ಲಯದಲ್ಲಿ ಪಠಿಸಿದರೆ ಕಷ್ಟಕಾರ್ಪಣ್ಯ ಕಳೆಯುವುದು.

ಕುಂಭ

ಪುಷ್ಕರ ನದಿಯಲ್ಲಿ ಸ್ನಾನಮಾಡಿ. ಇಲ್ಲದಿದ್ದರೆ ಮನೆನೀರಿಗೆ ಒಂದು ತುಳಸಿ-ಆಲದ ಎಲೆಯನ್ನು, ಔದುಂಬರ ಎಲೆಯನ್ನು, ಬೇವಿನ ಕಡ್ಡಿಯನ್ನು, ನೇರಳೆಯ ಸೊಪ್ಪು ತಂದು ಸೇರಿಸಿ ಸ್ನಾನಮಾಡಿ. ದೇವರು ವಿಶೇಷ ಫಲ, ಸುಖ, ಶಾಂತಿ, ಕಾರ್ಯಜಯಕೊಟ್ಟು ಹರಸುತ್ತಾನೆ. ಅಶ್ವಥ ವೃಕ್ಷ-ಔದುಂಬರ ವೃಕ್ಷಕ್ಕೆ ಪ್ರತಿ ಶನಿವಾರ ನಮಸ್ಕರಿಸಿ. ದೃಷ್ಟಿದೋಷವು ಹೋಗಿ ಸುಖದ ಹಾದಿ ಕಾಣುತ್ತದೆ.

ಮೀನ

ನಮಃ ಸಂಸಾರಕಾಂತಾರ- ಮಹಾಭಯನಿವಾರಿಣೀ |

ಪಿನಾಕಿನೇ ಮಹೇಶಾಯ ಸರ್ವಾಭೀಷ್ಟಪ್ರದಾಯಿಸೇ || ಈ ಮಂತ್ರವನ್ನು ಪಾರಾಯಣ ಮಾಡಿ. ದೇವರು ಜನರನ್ನು, ಧನವನ್ನು, ಕೀರ್ತಿಯನ್ನು ಕೊಟ್ಟು ಸುಖಕ್ಕೆ ಏನೂ ಕೊರತೆಯಿಲ್ಲದಂತೆ ಕಾಪಾಡುತ್ತಾನೆ. ದ್ವಾದಶ ಗುರುವಿಗೆ ದತ್ತಾತ್ರೇಯ ಅಷ್ಟೋತ್ತರ, ಸಂಕಷ್ಟಹರ ವಾಸುದೇವಾನಂದ ವಿರಚಿತ ದತ್ತ ಅಷ್ಟಕವನ್ನು ಪಾರಾಯಣ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net