'ದೇವರ' ಸಿನಿಮಾದಲ್ಲಿ ಮಹತ್ವದ ಸಂದೇಶವಿದೆ: ನಿರ್ದೇಶಕ ಕೊರಟಾಲ ಶಿವ

jr ntr devara
Published on

ಆಂಧ್ರಪ್ರದೇಶ: ಈ ಹಿಂದೆ 'ಆಚಾರ್ಯ' ಚಿತ್ರದಲ್ಲಿ ಹೀನಾಯ ಸೋಲು ಅನುಭವಿಸಿದ್ದ ನಿರ್ದೇಶಕ ಕೊರಟಾಲ ಶಿವ, ಇದೀಗ ಜೂ. ಎನ್​ಟಿಆರ್​ ಮತ್ತು ಬಾಲಿವುಡ್​ ನಟಿ ಜಾಹ್ನವಿ ಕಪೂರ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪ್ಯಾನ್ ಇಂಡಿಯಾ 'ದೇವರ' ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದೇ ಸೆ.27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ಶಿವ ನಿರ್ದೇಶನದ ಸಿನಿಮಾಗೆ ಇದೀಗ ಕ್ಷಣಗಣನೆ ಆರಂಭಗೊಂಡಿದೆ.

ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಸಖತ್ ಬಿಜಿಯಾಗಿರುವ ಶಿವ, ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ. 'ದೇವರ' ಚಿತ್ರದಲ್ಲಿ ಯಾವುದಾದರೂ ಸಾಮಾಜಿಕ ಸಂದೇಶ ಇದೆಯೇ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, “ದೇವರ ಕಲ್ಪನೆಯೇ ಚೆನ್ನಾಗಿದೆ. ಪ್ರತಿಯೊಬ್ಬರಿಗೂ ಧೈರ್ಯದ ಜೊತೆಗೆ ಭಯವೂ ಇರಬೇಕು ಎನ್ನುತ್ತಾರೆ ನಮ್ಮ ಹೀರೋ. ಇದಕ್ಕಿಂತ ಉತ್ತಮ ಸಾಮಾಜಿಕ ಸಂದೇಶ ಮತ್ತೊಂದು ಇರಲು ಸಾಧ್ಯವಿಲ್ಲ. ನಮ್ಮ ಸಿನಿಮಾದಲ್ಲಿ ಖಂಡಿತ ಒಂದೊಳ್ಳೆ ಸಂದೇಶವಿದೆ" ಎಂದರು.

ಚಿತ್ರದಲ್ಲಿ ಜೂ. ಎನ್​ಟಿಆರ್​, ಜಾಹ್ನವಿ ಕಪೂರ್​, ಸೈಫ್ ಅಲಿ ಖಾನ್​, ಚೈತ್ರಾ ರೈ, ಶ್ರುತಿ ಮರಾಠೆ, ಮುರುಳಿ ಶರ್ಮ, ಅಭಿಮನ್ಯು ಸಿಂಗ್ ಸೇರಿದಂತೆ ಮುಂತಾದವರ ತಾರಾಗಣವಿದೆ. ಸೆ.27ರಂದು ಬಿಡುಗಡೆಯಾಗಲಿರುವ 'ದೇವರ' ಸಿನಿಮಾ ಹೇಗೆ ಕಮಾಲ್ ಮಾಡಲಿದೆ? ಪ್ರೇಕ್ಷಕರು ಏನು ಹೇಳ್ತಾರೆ ಎಂಬುದನ್ನು ಸದ್ಯ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net