

ನವದೆಹಲಿ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ನೇತೃತ್ವದ ಸರ್ಕಾರಕ್ಕಿಂತ ನಮ್ಮ ಮಧ್ಯಂತರ ಮಹಮ್ಮದ್ ಯೂನಿಸ್ ಸರ್ಕಾರ ಹಿಂದುಗಳನ್ನು(Hindus) ಚೆನ್ನಾಗಿ ರಕ್ಷಣೆ ಮಾಡುತ್ತಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಸರ್ಕಾರದ ಪತ್ರಿಕಾ ಪ್ರಧಾನ ಕಾರ್ಯದರ್ಶಿ ಶಫೀ ಕುಲ್ ಆಲಂ, ಬಾಂಗ್ಲದೇಶದಲ್ಲಿ ಅಲ್ಪಾ ಸಂಖ್ಯಾತರನ್ನು ಗುರಿಯಾಗಿಸಿಕೊಂಡು ಸುಳ್ಳು ನಿರೂಪಣೆಗಳನ್ನು ಭಾರತೀಯ ಮಾಧ್ಯಮಗಳು ಮಾಡುತ್ತೀವೆ ಎಂದು ಅವರು ಹೇಳಿದ್ದಾರೆ. ತಪ್ಪು ಮಾಹಿತಿಯಿಂದ ನಮ್ಮ ದೇಶದ ಬಗ್ಗೆ ಇಲ್ಲದ ಸಂಶಯಗಳನ್ನು ಹುಟ್ಟು ಹಾಕುತ್ತೀವೆ ಎಂದಿದ್ದಾರೆ.
''ಹಿಂದುಗಳು ಇಲ್ಲಿ ಉತ್ತಮ ರೀತಿಯಲ್ಲಿ ರಕ್ಷಿಸಲ್ಪಟ್ಟಿದ್ದಾರೆ. ಶೇಖ್ ಹಸೀನಾ ಅವರ ಆಡಳಿತಕ್ಕಿಂತ ನಾವು ಚೆನ್ನಾಗಿ ರಕ್ಷಿಸುತ್ತಿದ್ದೇವೆ. ಭಾರತಕ್ಕೆ ತಪ್ಪು ಮಾಹಿತಿ ರವಾನೆಯಾಗಿದೆ. ಇದರಿಂದ ಅಲ್ಲಿನ(ಭಾರತ) ಮಾಧ್ಯಮಗಳಲ್ಲಿ ತಪ್ಪು ಪ್ರಸಾರವಾಗುತ್ತಿದೆ'' ಎಂದು ಹೇಳಿದ್ದಾರೆ.
'' ಆಗಸ್ಟ್ನಲ್ಲಿ ಶೇಖ್ ಹಸೀನಾ ಸರ್ಕಾರ ಪತನವಾದಗಿನಿಂದ, ದೇವಾಲಯಳ ಮೇಲೆ ಸರಣಿ ದಾಳಿಗಳು ಮತ್ತು ಹಿಂದುಗಳ ಸಮುದಾಯ ಸದಸ್ಯರ ಮೇಲೆ ದಬ್ಬಾಳಿಕೆ ನಿರಂತವಾಗಿ ನಡೆಯುತ್ತಿದೆ. ಮೂವರು ಹಿಂದು ಸನ್ಯಾಸಿಗಳ ಬಂಧನ ನೆರೆಯ ದೇಶದಲ್ಲಿ ಆಶಾಂತಿಯ ಹೊಸ ಅಲೆಯನ್ನು ಎಬ್ಬಿಸಿದೆ. ಇದರಿಂದ ದೇಶಾದ್ಯಂತ ಅಲ್ಪ ಸಂಖ್ಯಾತರು ಪ್ರತಿಭಟನೆ ಮಾಡಲು ಬೀದಿಗೆ ಇಳಿದ್ದಾರೆ. ಹಸೀನಾ ಸರ್ಕಾರದ ಸಮಯದಲ್ಲಿ ಹಲವು ಹಿಂದುಗಳ ಮೇಲೆ ವ್ಯಾಪಕ ದೌರ್ಜನ್ಯ ನಡೆದಿದೆ. ಆದರೆ. ಅಂದು ಒಂದೇ ಒಂದು ಮಾಧ್ಯಮ ಇದರ ಬಗ್ಗೆ ಸುದ್ದಿ ಮಾಡಲಿಲ್ಲ'' ಎಂದು ಹೇಳಿದ್ದಾರೆ. ಅಲ್ಲದೇ, ಕಳೆದ ಒಂದು ವಾರದಲ್ಲಿ ಮೂರು ಇಸ್ಕಾನ್ ಕೇಂದ್ರಗಳ ಮೇಲೆ ದಾಳಿಯ ಪ್ರಯತ್ನ ನಡೆಸಲಾಗಿದೆ ಎಂದು ಆಲಂ ಒಪ್ಪಿಕೊಂಡಿದ್ದಾರೆ.
ನಾವು ಎಲ್ಲಾ ಸ್ಥಳಗಳಲ್ಲಿನ ಲಿಂಗ, ಜನಾಂಗ ಮತ್ತು ಬೇಧ ಭಾವ ಮಾಡದೇ ಪ್ರತಿಯೊಬ್ಬ ಬಾಂಗ್ಲಾ ದೇಶಿಯ ಪ್ರಜೆಯನ್ನು ಸೇರಿದಂತೆ ಎಲ್ಲಾರನ್ನು ರಕ್ಷಿಸುತ್ತಿದ್ದೇವೆ. ಇದು ಮಾನವ ಹಕ್ಕುಗಳನ್ನು ಸ್ಥಾಪಿಸಲು ನಾವು ಸದಾ ಬದ್ಧ ಎಂದು ಆಲಂ ಹೇಳಿದ್ದಾರೆ,(ಏಜೆನ್ಸೀಸ್).