

ಮುಂಬೈ: ಆಶಿಕಿ-2 ಚಿತ್ರದ ಮೂಲಕ ಮುನ್ನೆಲೆ ಬಂದ ಬಾಲಿವುಡ್ ನಟಿ ಶ್ರದ್ಧಾ ಕಪೂರ್(Shraddha Kapoor) ಇದೀಗ ಚಿತ್ರೋದ್ಯಮದಲ್ಲಿ ಉತ್ತಂಗದಲ್ಲಿದ್ದಾರೆ. ದಕ್ಷಿಣ ಭಾರತ ಸಿನಿಮಾಗಳಲ್ಲಿ ಪಾತ್ರವಹಿಸಲು ಮತ್ತು ಐಟಂಮ್ ಸಾಂಗ್ಗಳಲ್ಲಿ ನಟಿಸಲು ದುಪಟ್ಟು ಸಂಭಾವನೆ ಕೇಳುತ್ತಿದ್ದಾರೆ ಎಂದು ವರದಿಯಾಗಿದೆ.
ಹೌದು, ಪ್ರತಿ ಸಿನಿಮಾಗಳಲ್ಲಿ ನಟಿಸಲು ಶದ್ಧಾ ಬರೊಬ್ಬರಿ 8 ಕೋಟಿ ರೂ.ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇವರು ನಟಿಸಿರುವ ಒಟ್ಟು 19 ಸಿನಿಮಾಗಳು 1,638 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿವೆ. ಹೀಗಾಗಿ, ಇಂದು ಬಾಲಿವುಡ್ನ ಟಾಪ್ ಸ್ಟಾರ್ಗಳಲ್ಲಿ ಶ್ರದ್ಧಾ ಒಬ್ಬರಾಗಿದ್ದಾರೆ. ಇವರನ್ನು ದಕ್ಷಿಣ ಭಾರತ ಸಿನಿಮಾಗಳಿಗೆ ಕರೆ ತರಲು ಸಾಕಷ್ಟು ನಿರ್ದೇಶಕರು ಪ್ರಯತ್ನ ಪಡುತ್ತಿದ್ದಾರೆ. ಆದರೆ, ಇವರ ದುಪ್ಪಟ್ಟು ಸಂಭಾವನೆಯಿಂದ(8 ಕೋಟಿ ರೂ.) ನಿರ್ಮಾಪಕರು ಹಿಂದೆ ಸರಿಯುತ್ತಿದ್ದಾರೆ ಎನ್ನಲಾಗಿದೆ.
ಒಂದೇಡೆ ಶ್ರದ್ಧಾರ ದುಪಟ್ಟು ಸಂಭಾವನೆಯಿಂದ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಅವಕಾಶ ಕಳೆದುಕೊಳ್ಳುತ್ತಿದ್ದಾರೆ ಎಂದು ಕೆಲ ನಿರ್ದೇಶರು ಮತ್ತು ನಿರ್ಮಾಪಕರು ಹೇಳುತ್ತಿದ್ದಾರೆ. ಅಲ್ಲದೆ, ಇತ್ತೀಚಿಗೆ ಪುಷ್ಪ-2 ಸಿನಿಮಾದಲ್ಲಿ ಐಟಂ ಸಾಂಗ್ವೊಂದಕ್ಕೆ ಶ್ರದ್ಧಾ ಅವರನ್ನು ಸಂಪರ್ಕ ಮಾಡಲಾಗಿತ್ತು. ಆದರೆ, ಅವರು ದುಪ್ಪಟ್ಟು ಸಂಭಾವನೆ( 8 ಕೋಟಿ ರೂ.) ಕೇಳಿದ್ದರಿಂದ ಈ ಅವಕಾಶವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ, ಕನ್ನಡ ಬೆಡಗಿ ಶ್ರಿಲೀಲಾ ಅವರಿಗೆ ಅವಕಾಶ ನೀಡಲಾಯಿತು ಎಂದು ವರದಿಯಾಗಿದೆ.
ಇತ್ತೀಚಿಗೆ ತೆಲುಗಿನ ಸ್ಟಾರ್ ನಾನಿ ಮುಂಬರುವ ಸಿನಿಮಾದಲ್ಲಿ ನಟಿಸಲು ಬರೊಬ್ಬರಿ 12 ಕೋಟಿ ರೂ ಸಂಭಾವನೆ ಕೇಳಿದ್ದಾರೆ. ಹೀಗಾಗಿ, ನಿರ್ಮಾಪಕರು ಹಿಂದೆ ಸರಿದಿದ್ದು, ಹೊಸ ಮುಖಗಳನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್).