ಜಲಮಂಡಳಿ ಕಾಮಗಾರಿ; ವಾಹನ ಸಂಚಾರ ಮಾರ್ಗ ಮಾರ್ಪಾಡು

Traffic
Published on

ಬೆಂಗಳೂರು: ಜಲಮಂಡಳಿ ವತಿಯಿಂದ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವುದರಿಂದ ವಿಬ್‌ಗಯಾರ್ ಕ್ರಾಸ್ ರಸ್ತೆಯಿಂದ ಬ್ಲ್ಯಾಕ್ ಆ್ಯಂಡ್ ವೈಟ್ ಜಂಕ್ಷನ್‌ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗವಾಗಿ ಎಚ್‌ಎಎಲ್ ಮತ್ತು ಕುಂದಲಹಳ್ಳಿ ಕಡೆಯಿಂದ ಬಳಗೆರೆ ಟಿ ಜಂಕ್ಷನ್ ಕಡೆಗೆ ಚಲಿಸುವ ಲಘು ವಾಹನಗಳು ತೂಬರಹಳ್ಳಿ ಎಕ್ಸಟೆನ್ಷನ್ ರಸ್ತೆಯನ್ನು ಬಳಸಿ ಬಳಗೆರೆ ಹಾಗೂ ‘ಟಿ’ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿದೆ. ಬಳಗೆರೆ ಮತ್ತು ‘ಟಿ’ ಜಂಕ್ಷನ್‌ನಿಂದ ಎಚ್‌ಎಎಲ್ ಮತ್ತು ಕುಂದಲಹಳ್ಳಿ ಕಡೆಗೆ ಚಲಿಸುವ ಲಘು ವಾಹನಗಳು

ವಿಬ್‌ಗಯಾರ್ ರಸ್ತೆ ಮೂಲಕ ಬ್ಲ್ಯಾಕ್ ಆ್ಯಂಡ್ ವೈಟ್ ಜಂಕ್ಷನ್‌ನಲ್ಲಿ ಎಡಕ್ಕೆ ಚಲಿಸಿ ಸಾಯಿಬಾಬಾ ಟೆಂಪಲ್ ರಸ್ತೆ ಮೂಲಕ ಕುಂದಲಹಳ್ಳಿ ಕಡೆಗೆ ಸಂಚರಿಸಬಹುದು. ಎಚ್‌ಎಎಲ್ ಮಾರ್ಗವಾಗಿ ಬರುವ ವಾಹನಗಳು ವರ್ತೂರು ಕೋಡಿ, ವರ್ತೂರು ಮೂಲಕ ಗುಂಜೂರಿನ ಕಡೆಗೆ ಸಾಗಬಹುದು ಎಂದು ಟ್ರಾಫಿಕ್ ಪೊಲೀಸರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net