VIDEO| ಮುಳ್ಳುಹಂದಿ ಎದುರು ಸೋಲೊಪ್ಪಿಕೊಂಡ ಚಿರತೆ...!

Leopard
Published on

ನವದೆಹಲಿ: ದೈತ್ಯ ಪ್ರಾಣಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಚಿರತೆ ಸಾಮಾನ್ಯವಾದ ಮುಳ್ಳುಹಂದಿಗೆ ಹೆದರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಭಾರತೀಯ ಅರಣ್ಯಾಧಿಕಾರಿ ರಮೇಶ್​ ಪಾಂಡೆ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಶನಿವಾರ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ವಿಡಿಯೋವನ್ನು ಉತ್ತರ ಪ್ರದೇಶದ ಕಟರ್ನಿಯಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ಸೆರೆಹಿಡಿಯಲಾಗಿದೆ.

ವಿಡಿಯೋದಲ್ಲಿ ಏನಿದೆ?: ರಾತ್ರಿ ವೇಳೆ ಚಿರತೆ ಮತ್ತು ಮುಳ್ಳುಹಂದಿ ಎದುರು-ಬದರಾಗುತ್ತವೆ. ಈ ವೇಳೆ ಸುಮ್ಮನೇ ಹೋಗುತ್ತಿದ್ದ ಮುಳ್ಳುಹಂದಿಯನ್ನು ಚಿರತೆ ಹಿಂಬಾಲಿಸುತ್ತದೆ. ಅದನ್ನು ಗಮನಿಸಿದ ಮುಳ್ಳುಹಂದಿ ತನ್ಮ ಎದೆಗಾರಿಕೆ ಪ್ರದರ್ಶಿಸಿ ಚಿರತೆಯ ಎದುರಿಗೆ ಬರುತ್ತದೆ. ಹತ್ತಿರ ಬರುತ್ತಿದ್ದಂತೆ ಚಿರತೆ ದಾಳಿ ಮಾಡಲು ಮುಂದಾದಾಗ ತನ್ನ ಚೂಪಾದ ಮುಳ್ಳುಗಳಿಂದ ಅದು ಸಹ ದಾಳಿ ಮಾಡುತ್ತದೆ. ಕೊನೆಗೆ ಮುಳ್ಳಂದಿಗೆ ಹೆಸರಿದ ಚಿರತೆ ತೆಪ್ಪಾಗಾಗುತ್ತದೆ.

ಈ ವಿಡಿಯೋವನ್ನು ಈವರೆಗೆ 44 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 3 ಸಾವಿರಕ್ಕೂ ಹೆಚ್ಚು ಲೈಕ್ಸ್​ ಬಂದಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net