ಚಿತ್ರ ವಿ-ಚಿತ್ರ: ಮುಗ್ಧ ಮಕ್ಕಳ ಹಗೆಯಿಲ್ಲದ ನಗು

sudina 1
Published on

ನವದೆಹಲಿ: ಮಕ್ಕಳ ಆಟಗಳು ಯಾವಾಗಲೂ ಎಲ್ಲರ ಗಮನವನ್ನೂ ಸೆಳೆಯುತ್ತವೆ. ಅದಕ್ಕೆ ಕಾಲ-ದೇಶ, ಗಂಡು-ಹೆಣ್ಣು ಇತ್ಯಾದಿ ಯಾವ ಭೇದವೂ ಇಲ್ಲ. ಇಬ್ಬರು ಪುಟ್ಟ ಬಾಲಕರು ಆರೇಂಜ್ ಸೋಡಾ ಕುಡಿಯುತ್ತ ಸಂತೋಷಪಡುವ, ಕೇಕೆ ಹಾಕಿ ನಗುವ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಗುವಿನ ಕಾರಣಗಳು ತಿಳಿದಿಲ್ಲವಾದರೂ ಅವರ ಮನಃಪೂರ್ವಕ ನಗು ನೆಟ್ಟಿಗರನ್ನು ಸೆಳೆಯುತ್ತಿದೆ. ಇಬ್ಬರು ಮಕ್ಕಳೂ ಒಂದೇ ಥರದ ಬಟ್ಟೆ ಧರಿಸಿದ್ದು ಸಹೋದರರಂತೆ ಕಾಣುತ್ತಾರೆ. ಈ ವಿಡಿಯೋವನ್ನು ನಿಕೋಲಾ ಮಾರಿಯಾ ರಾಬರ್ಟ್ ಎನ್ನುವವರು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net