VIDEO | ಸಂಗೀತ ನುಡಿಸುವ ಘೇಂಡಾಮೃಗ ನೋಡಿದ್ದೀರಾ ? ಇದೋ ಇಲ್ಲಿದೆ...

rhino
Published on

ಡೆನ್​ವರ್​ : ಘೇಂಡಾಮೃಗವೊಂದು ಕೀಬೋರ್ಡ್​ ನುಡಿಸಿರುವ ವಿಸ್ಮಯಕಾರಿ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕದ ಕೊಲರಾಡೊದಲ್ಲಿರುವ ಡೆನ್​ವರ್​ ಜೂನಲ್ಲಿರುವ 'ಬಂಧು' ಎಂಬ ಈ ಗ್ರೇಟರ್ ಒನ್​-ಹಾರ್ನಡ್​ ರೈನೋಗೆ ಇದೀಗ 12 ವರ್ಷ ತುಂಬಿದೆ. ಅದರ ಹುಟ್ಟಿದಹಬ್ಬದ ಸಂದರ್ಭಕ್ಕೆ ಅದು ಎಲ್ಲರಿಗೂ ತನ್ನ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಟ್ರೀಟ್ ಕೊಟ್ಟಿದೆ.

ಡೆನ್ವರ್​ ಜೂನ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ 'ಹ್ಯಾಪಿ ಬರ್ತ್​ಡೇ ಬಂಧು!' ಎಂದು ಪೋಸ್ಟ್​ ಆಗಿರುವ ಈ ವಿಡಿಯೋದಲ್ಲಿ, ಘೇಂಡಾಮೃಗವು ತಾನೇ ರಚಿಸಿರುವ ಗೀತೆಯನ್ನು ತನ್ನ ಮೇಲ್​​ತುಟಿಯನ್ನು ಬಳಸಿ ನುಡಿಸುತ್ತಿರುವುದನ್ನು ಸೆರೆ ಹಿಡಿದಿದ್ದಾರೆ. ನೀವೂ ನೋಡಿ ಆನಂದಿಸಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net