More

    ಪುರುಷ ಮೃತಪಟ್ಟರೆ ಎರಡನೆಯ ಹೆಂಡತಿ, ಮಕ್ಕಳಿಗೆ ಆಸ್ತಿ ಸಿಗತ್ತಾ?

    ಪುರುಷ ಮೃತಪಟ್ಟರೆ ಎರಡನೆಯ ಹೆಂಡತಿ, ಮಕ್ಕಳಿಗೆ ಆಸ್ತಿ ಸಿಗತ್ತಾ?ನಾವು ಹಿಂದೂಗಳು. ನಮ್ಮ ತಂದೆಗೆ ಇಬ್ಬರು ಪತ್ನಿಯರು. ಮೊದಲ ಹೆಂಡತಿಗೆ ಮೂವರು ಹೆಣ್ಣು ಮಕ್ಕಳು. ಎರಡನೇ ಹೆಂಡತಿಗೆ ನಾನು ಒಬ್ಬಳೇ ಮಗಳು. ನಮ್ಮ ತಂದೆ ತೀರಿಕೊಂಡು ಆರು ವರ್ಷಗಳಾಗಿವೆ.

    ನಮ್ಮ ತಂದೆಯ ಹೆಸರಿನಲ್ಲಿ ಎರಡು ಎಕರೆ ಜಮೀನು ಇದೆ. ಇದರಲ್ಲಿ ನನಗೂ ನಮ್ಮ ತಾಯಿಗೂ ಹಕ್ಕು ಇದೆಯಾ. ಇದನ್ನು ಹೇಗೆ ಹಂಚಿಕೆ ಮಾಡಿಕೊಳ್ಳಬೇಕು. ಹಂಚಿಕೆ ಮಕ್ಕಳ ಮೇಲೆ ಆಗುತ್ತದೋ ತಾಯಂದಿರ ಮೇಲೆ ಆಗುತ್ತದೋ? ನಮ್ಮ ತಂದೆ ಅವರ ಮೊದಲ ಹೆಂಡತಿ ಬದುಕಿದ್ದಾಗಲೇ ನಮ್ಮ ತಾಯಿಯನ್ನು ಮದುವೆ ಆಗಿದ್ದರು. ಅವರಿಬ್ಬರಲ್ಲಿ ಯಾವ ಮನಸ್ತಾಪವೂ ಇರಲಿಲ್ಲ. ಇಬ್ಬರ ಹೆಸರೂ ಹೆಂಡತಿ ಎಂದೇ ನಮೂದಾಗಿದೆ. ಎರಡನೆಯ ಹೆಂಡತಿಯ ಮಕ್ಕಳಿಗೆ ಆಸ್ತಿಯಲ್ಲಿ ಭಾಗದ ಬಗ್ಗೆ ಇನ್ನೂ ಕಾನೂನು ನಿರ್ಧಾರ ಆಗಿಲ್ಲ ಎಂದು ಯಾರೋ ಹೇಳಿದರು. ನನಗೆ ಘಾಬರಿ ಆಗಿದೆ. ದಯವಿಟ್ಟು ಪರಿಹಾರ ತಿಳಿಸಿ.

    ಉತ್ತರ: ನಿಮ್ಮ ಮೃತ ತಂದೆಯ ಆಸ್ತಿ ನಿಮ್ಮ ತಂದೆಯ ಮೊದಲ ಹೆಂಡತಿಗೆ, ಅವರ ಮೂರು ಮಕ್ಕಳಿಗೆ ಮತ್ತು ನಿಮಗೆ ಅಂದರೆ ಒಟ್ಟು ಐದು ಭಾಗವಾಗಿ ಹಂಚಿಕೆ ಆಗುತ್ತದೆ. ನಿಮ್ಮ ತಾಯಿ , ಮೊದಲ ಹೆಂಡತಿ ಇರುವಾಗಲೇ ವಿವಾಹವಾದ ಎರಡನೇ ಹೆಂಡತಿ ಆಗಿರುವುದರಿಂದ ಅವರಿಗೆ ಭಾಗ ಸಿಗುವುದಿಲ್ಲ. ನೀವು ವಿಭಾಗಕ್ಕೆ ದಾವೆ ಹಾಕಿದರೆ ನಿಮ್ಮ ಐದನೇ ಒಂದು ಭಾಗ ಸಿಗುತ್ತದೆ. ಹೆಂಡತಿಯರ ಸಂಖ್ಯೆಯ ಮೇಲೆ ವಿಭಾಗ ನಿರ್ಧಾರ ಆಗುವುದಿಲ್ಲ. ಆಸ್ತಿಯಲ್ಲಿಯೇ ಭಾಗ ಬೇಡ ಎನ್ನುವವರು ಬೇಕಿದ್ದರೆ ತಮ್ಮ ಭಾಗದ ಹಣವನ್ನು ಬೇರೆಯ ಭಾಗಸ್ಥರಿಂದ ಪಡೆದು ತಮ್ಮ ಹಕ್ಕನ್ನು ಬಿಟ್ಟು ಕೊಡಲೂ ಬಹುದು.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ
    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಮಗ ಎಲ್ಲದಕ್ಕೂ ತಾಯಿಯನ್ನೇ ನಾಮಿನಿ ಮಾಡಿ ಮೃತಪಟ್ಟರೆ ಆತನ ಪತ್ನಿಗೆ ಪಾಲು ಸಿಗಲ್ವಾ?

    ಮುಸ್ಲಿಂ ಧರ್ಮದ ನಿರುದ್ಯೋಗಿ, ನಡತೆ ಬಿಟ್ಟು ದೂರವಾದ ಉದ್ಯೋಗಸ್ಥ ಪತ್ನಿಯಿಂದ ಜೀವನಾಂಶ ಕೇಳಬಹುದೆ?

    ಅವನ ದೇಹ ಬೇಕು, ನೀನು ಗಂಡ ಆಗಿರ್ಬೇಕು ಅಂತಾಳೆ- ವರದಕ್ಷಿಣೆ ಕೇಸ್‌ ಧಮ್ಕಿ ಹಾಕ್ತಾಳೆ: ಏನು ಮಾಡಲಿ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts