More

    ಮಗ ಎಲ್ಲದಕ್ಕೂ ತಾಯಿಯನ್ನೇ ನಾಮಿನಿ ಮಾಡಿ ಮೃತಪಟ್ಟರೆ ಆತನ ಪತ್ನಿಗೆ ಪಾಲು ಸಿಗಲ್ವಾ?

    ಮಗ ಎಲ್ಲದಕ್ಕೂ ತಾಯಿಯನ್ನೇ ನಾಮಿನಿ ಮಾಡಿ ಮೃತಪಟ್ಟರೆ ಆತನ ಪತ್ನಿಗೆ ಪಾಲು ಸಿಗಲ್ವಾ?ನಮ್ಮ ಮದುವೆಯಾಗಿ ಇಪ್ಪತ್ತು ವರ್ಷಗಳಾಗಿವೆ. ನಮ್ಮ ಯಜಮಾನರು ಆರು ತಿಂಗಳ ಹಿಂದೆ ತೀರಿಕೊಂಡರು. ಅವರು ಕಚೇರಿಯ ದಾಖಲೆಗಳಲ್ಲಿ ಮತ್ತು ಅವರ ಎಲ್.ಐ.ಸಿ ಪಾಲಿಸಿಗಳಲ್ಲಿ ಅವರ ತಾಯಿಯನ್ನೇ ನಾಮಿನಿಯನ್ನಾಗಿ ತೋರಿಸಿದ್ದಾರೆ. ಹೀಗಾಗಿ ನಮ್ಮ ಅತ್ತೆ ನನಗೆ ಒಂದು ನಯಾ ಪೈಸೆಯನ್ನೂ ಕೊಡುವುದಿಲ್ಲ ಎನ್ನುತ್ತಿದ್ದಾರೆ. ನಮಗೆ ಮಕ್ಕಳಿಲ್ಲ. ಎಲ್ಲವನ್ನೂ ನಮ್ಮ ಮೈದುನನ ಮಕ್ಕಳಿಗೇ ಕೊಡುತ್ತೇನೆ ಎನ್ನುತ್ತಿದ್ದಾರೆ. ನಾನು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸಿ.

    ಉತ್ತರ: ನೀವು ಹೆದರಬೇಡಿ. ಮೃತ ಹಿಂದೂ ಪುರುಷನ ಎಲ್ಲ ಚರ ಸ್ಥಿರ ಸ್ವತ್ತುಗಳಲ್ಲೂ ಅತನ, ತಾಯಿಗೆ, ಹೆಂಡತಿಗೆ ಮತ್ತು ಮಕ್ಕಳಿಗೆ ಸಮಪಾಲು ಇರುತ್ತದೆ. ನಿಮಗೆ ಮಕ್ಕಳಿಲ್ಲದೇ ಇರುವುದರಿಂದ, ನಿಮ್ಮ ಪತಿಯ ಬಾಬತ್ತು ಬರಬೇಕಾದ ಎಲ್ಲ ಹಣದಲ್ಲೂ ಆಸ್ತಿ ಪಾಸ್ತಿಗಳಲ್ಲೂ ನಿಮಗೂ ನಿಮ್ಮ ಅತ್ತೆಗೂ ಸಮಭಾಗ ಇರುತ್ತದೆ.

    ನಿಮ್ಮ ಅತ್ತೆ ಅವರ ಅರ್ಧ ಭಾಗವನ್ನು ಯಾರಿಗೇ ಬೇಕಾದರೂ ಕೊಡಬಹುದು. ನಿಮ್ಮ ಅರ್ಧ ಭಾಗ ನಿಮಗೇ ಬರುತ್ತದೆ. ನಾಮಿನಿ ಯಾರೇ ಆಗಿದ್ದರೂ ನಿಮ್ಮ ವಾರಸಾ ಹಕ್ಕಿಗೆ ಚ್ಯುತಿ ಬರುವುದಿಲ್ಲ. ನೀವು ಕೂಡಲೇ ನಿಮ್ಮ ಪತಿ ಕೆಲಸಮಾಡುತ್ತಿದ್ದ ಕಛೇರಿಗೆ , ಎಲ್.‌ಐ.ಸಿ. ಶಾಖೆಗೆ, ನಿಮ್ಮ ಅರ್ಧ ಬಾಗ ನಿಮಗೇ ಕೊಡಬೇಕೆಂದು ಅರ್ಜಿ ಕೊಡಿ. ಅವರು ಒಪ್ಪದಿದ್ದರೆ ವಿಭಾಗದ ದಾವೆ ಹಾಕಿ. ಅದರಲ್ಲಿ ಕಚೇರಿಯವರನ್ನೂ, ಎಲ್.‌ಐ.ಸಿ ಯನ್ನೂ ಪಾರ್ಟಿ ಮಾಡಿ. ಎಲ್ಲ ಹಣವನ್ನೂ ನಿಮ್ಮ ಅತ್ತೆಗೇ ಬಿಡುಗಡೆ ಮಾಡಬಾರದು ಎಂದು ತಡೆ ಆಜ್ಞೆಯನ್ನೂ ಪಡೆದು ಕೊಳ್ಳಲು ಮಧ್ಯಂತರ ಅರ್ಜಿ ಹಾಕಿ. ವಿಭಾಗದ ದಾವೆಗೆ ಕೋರ್ಟು ಫೀಸು ಕಡಿಮೆ ಇರುತ್ತದೆ. ನಿಮ್ಮ ಹಕ್ಕು ನಿಮಗೆ ಸಿಗುತ್ತದೆ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ
    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಮುಸ್ಲಿಂ ಧರ್ಮದ ನಿರುದ್ಯೋಗಿ, ನಡತೆ ಬಿಟ್ಟು ದೂರವಾದ ಉದ್ಯೋಗಸ್ಥ ಪತ್ನಿಯಿಂದ ಜೀವನಾಂಶ ಕೇಳಬಹುದೆ?

    ಅವನ ದೇಹ ಬೇಕು, ನೀನು ಗಂಡ ಆಗಿರ್ಬೇಕು ಅಂತಾಳೆ- ವರದಕ್ಷಿಣೆ ಕೇಸ್‌ ಧಮ್ಕಿ ಹಾಕ್ತಾಳೆ: ಏನು ಮಾಡಲಿ?

    ತಮ್ಮಂದಿರಿಗಾಗಿ ಅಣ್ಣ ಬಹಳ ಖರ್ಚು ಮಾಡಿದರೆ ಅವರ ಆಸ್ತಿಯ ಭಾಗ ಆತ ಇಟ್ಟುಕೊಳ್ಳಬಹುದೆ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts