

ಚೆನ್ನೈ: ಬಹುಭಾಷಾ ನಟಿ ನಯನತಾರಾ ಹಾಗೂ ಭಾವಿ ಪತಿ ವಿಘ್ನೇಶ್ ಶಿವನ್ಗೂ ಕರೊನಾ ಪಾಸಿಟಿವ್ ಇದೆ ಎಂಬ ವದಂತಿ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಈ ವಿಚಾರ ಇಬ್ಬರ ಕಿವಿಗೂ ಬಿದ್ದಿದ್ದು, ಹಾಸ್ಯಸ್ಪದ ವಿಡಿಯೋ ಮೂಲಕವೇ ವದಂತಿಗೆ ತೆರೆ ಎಳೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಘ್ನೇಶ್, ಡಿಯರ್ ಕರೊನಾ ಮತ್ತು ನಮ್ಮ ಸಾವಿನ ಚಿತ್ರಗಳನ್ನೊಳಗೊಂಡ ಅದ್ಭುತ ವಿನ್ಯಾಸಭರಿತ ಸುದ್ದಿಗಳನ್ನು ನಾವು ನೋಡಿದ್ದೇವೆ. ಹಾಯ್.... ನಾವಿನ್ನೂ ಜೀವಂತವಾಗಿದ್ದೇವೆ ಮತ್ತು ಆರೋಗ್ಯಯುತವಾಗಿದ್ದೇವೆ. ಸಿಲ್ಲಿ ಜೋಕ್ಸ್ ಮತ್ತು ಎಲ್ಲ ಜೋಕರ್ಸ್ಗಳ ಕಲ್ಪನೆಯನ್ನು ನೋಡುವ ಶಕ್ತಿ ಹಾಗೂ ಸಂತೋಷವನ್ನು ದೇವರು ನಮಗೆ ನೀಡಿದ್ದಾನೆ ಎಂದು ವಿಡಿಯೋವೊಂದನ್ನು ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಮರ್ಯಾದೆ ಹತ್ಯೆ ಆಧಾರಿತ ಚಿತ್ರವನ್ನು ಬೇರೆ ರೀತಿ ಬಿಂಬಿಸಲು ಹೊರಟ ಆರ್ಜಿವಿ ವಿರುದ್ಧ ಆಕ್ರೋಶ!
ವಿಡಿಯೋದಲ್ಲಿ ಏನಿದೆ?: ಪ್ರಖ್ಯಾತ "ಬೇಬಿ ಶಾರ್ಕ್" ಸಾಂಗ್ಗೆ ನಯನಾ ಮತ್ತು ವಿಘ್ನೇಶ್ ತಲೆಯಾಡಿಸಿದ್ದಾರೆ. ತಮ್ಮ ಮುಖಗಳಿಗೆ ಟಿಕ್ಟಾಕ್ನ ವಿಡಿಯೋ ಫಿಲ್ಟರ್ ಅಳವಡಿಸಿ ಮಕ್ಕಳ ರೀತಿ ಕಾಣುವಂತೆ ಹಾಡಿಗೆ ತಲೆಯಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇಬ್ಬರಿಗೂ ಕರೊನಾ ಇರುವ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದ್ದಂತೆ, ನಯನತಾರಾ ಮತ್ತು ವಿಘ್ನೇಶ್ ಆಪ್ತರಿಗೆ ಕರೆ ಮಾಡಿ ಕೇಳಿದಾಗ, ಅವರಿಂದ ಬಂದ ಉತ್ತರ ಎಲ್ಲರನ್ನೂ ಅಚ್ಚರಿಗೆ ದೂಡಿತ್ತು. ನಯನತಾರಾ ಮತ್ತು ವಿಘ್ನೇಶ್ ಕ್ಷೇಮವಾಗಿದ್ದಾರೆ. ಅವರಿಗೆ ಆ ಥರದ ರೋಗಲಕ್ಷಣಗಳಾಗಲಿ ಯಾವುದೂ ಕಂಡು ಬಂದಿಲ್ಲ. ಈ ರೀತಿಯ ಗಾಳಿಸುದ್ದಿಯನ್ನು ನಂಬಬೇಡಿ’ ಎಂದಿದ್ದರು. ಆ ಮಾತು ಕೇಳಿದ ಬಳಿಕವಷ್ಟೇ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. (ಏಜೆನ್ಸೀಸ್) ಇದನ್ನೂ ಓದಿ: VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್ಕೇಸ್ನಲ್ಲಿ ಹಣವಿದೆ ಅಂದುಕೊಂಡ ಯುವತಿಯರಿಗೆ ಕಾದಿತ್ತು ಶಾಕ್!