ದಿ ಕೇರಳ ಸ್ಟೋರಿ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ: ಸಿಎಂ ವಿಜಯನ್ ಟೀಕೆಗೆ ನಿರ್ದೇಶಕ ಸೇನ್ ತಿರುಗೇಟು! Pinarayi Vijayan

Pinarayi Vijayan
Published on

Pinarayi Vijayan: ದಿ ಕೇರಳ ಸ್ಟೋರಿ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರೆತಿರುವುದನ್ನು ಟೀಕಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​​ಗೆ, ಚಲನಚಿತ್ರ ನೋಡಿ ನಂತರ ಪ್ರತಿಕ್ರಿಯಿಸುವಂತೆ ನಿರ್ದೇಶಕ ಸುದೀಪ್ತೊ ಸೇನ್ ತಿರುಗೇಟು ನೀಡಿದ್ದಾರೆ.

ವಿಶೇಷ ಸಂದರ್ಶನದಲ್ಲಿ ಸಿಎಂ ವಿಜಯನ್ ಅವರ ಟ್ವೀಟ್ ಉಲ್ಲೇಖಿಸಿ ಮಾತನಾಡಿರುವ ಸೇನ್, 'ದಿ ಕೇರಳ ಸ್ಟೋರಿ' ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಮುಖ್ಯಮಂತ್ರಿಗಳು ಈ ಚಿತ್ರವನ್ನು ನೋಡಿಲ್ಲ ಎನ್ನುವುದು ಖಚಿತ, ತಕ್ಷಣವೇ ಸಿನಿಮಾ ನೋಡುವಂತೆ ಅವರು ಒತ್ತಾಯಿಸಿದರು.

ಒಂದುವರೆ ದಶಕದ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿರುವ ಸೇನ್, 15 ವರ್ಷಗಳ ಹಿಂದೆ ಅವರ ಹಿರಿಯ ಕಾಮ್ರೇಡ್ ವಿ.ಎಸ್. ಅಚ್ಯುತಾನಂದನ್ ದೆಹಲಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿ ಪಿ.ಎಫ್.ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ರೀತಿಯ ಕೋಮುವಾದಿ ಸಂಘಟನೆಗಳು ಮಹಿಳೆಯರನ್ನು ಮತಾಂತರಿಸುತ್ತಿರುವಂತೆ ಮತ್ತು ಮುಂದಿನ 20 ವರ್ಷಗಳಲ್ಲಿ ಕೇರಳವು ಇಸ್ಲಾಮಿಕ್ ರಾಜ್ಯವಾಗಿ ಬದಲಾಗಲಿದೆ ಎಂದು ಹೇಳಿದ್ದನ್ನು ಉಲ್ಲೇಖಿಸಿ, ಈ ಕುರಿತ ವಿಡಿಯೋ ಯೂಟ್ಯೂಬ್‌ನಲ್ಲಿ ಲಭ್ಯವಿರುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯ ನಂತರ ಕೇರಳದಲ್ಲಿ ಪ್ರತಿಭಟನೆ ನಡೆಯಿತು. ಆ ಸಂದರ್ಭದಲ್ಲಿ ಅಚ್ಯುತಾನಂದನ್ ಅವರಿಗೆ ಕಮ್ಯುನಿಸ್ಟ್ ಪಕ್ಷದಲ್ಲಿ ಅವರ ಉಪ ಕಾರ್ಯದರ್ಶಿಯಾಗಿದ್ದ ಪಿಣರಾಯಿ ವಿಜಯನ್ ಬೆಂಬಲ ವ್ಯಕ್ತಪಡಿಸಿದ್ದನ್ನು ಈ ವೇಳೆ ಸ್ಮರಿಕೊಳ್ಳತ್ತಾ, ಆಗಿನ ಮತ್ತು ಈಗಿನ ನಿಲುವುಗಳು ಎರಡು ಸಂಪೂರ್ಣ ವಿರುದ್ಧವಾಗಿದೆ ಎಂದರು.

ಎರಡು ತಿಂಗಳ ಪರಿಶೀಲನೆಯ ನಂತರ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಪ್ರಮಾಣಪತ್ರ ನೀಡಿದ್ದು, ಈ ಚಿತ್ರದಲ್ಲಿನ ಪ್ರತಿ ಸಂಭಾಷಣೆಗೂ ತಾವೂ ಬದ್ಧರಿರುವುದಾಗಿ ತಿಳಿಸಿದರು.

'ದಿ ಕೇರಳ ಸ್ಟೋರಿ' 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿದ್ದು, ಮೊದಲು ಅಭಿನಂದನಾ ಸಂದೇಶಗಳನ್ನು ಓದುತ್ತೇನೆ, ನಂತರ ವಿಮರ್ಶೆಗಳತ್ತ ಗಮನ ನೀಡುತ್ತೇನೆ ಎಂದು ಸುದೀಪ್ತೊ ಸೇನ್ ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net