

ವಾಷಿಂಗ್ಟನ್: ನಿನ್ನೆ (ಜ.29) ರಾತ್ರಿ ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್ ಮತ್ತು ಪ್ರಯಾಣಿಕರ ವಿಮಾನ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ (Washington DC Plane Crash). 60 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಅಮೆರಿಕನ್ ಈಗಲ್ ಫ್ಲೈಟ್ 5342, ಮೂವರು ಸೈನಿಕರಿದ್ದ ಬ್ಲ್ಯಾಕ್ ಹಾಕ್ ಮಿಲಿಟರಿ ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಘಟನೆಯ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.
ಅಮೆರಿಕಾದ ಶ್ವೇತಭವನದಿಂದ ಐದು ಕಿಲೋಮೀಟರ್ ದೂರದಲ್ಲೇ ಈ ದುರಂತ ಸಂಭವಿಸಿದೆ. ಹೆಲಿಕಾಪ್ಟರ್ ಮತ್ತು ವಿಮಾನ ನಡುವಿನ ಭೀಕರ ಅಪಘಾತದಲ್ಲಿ ಹಲವರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದ್ದೇ ಆದರೂ ಎಷ್ಟು ಸಂಖ್ಯೆ ಎಂದು ಸದ್ಯದ ಮಟ್ಟಿಗೆ ನಿಖರವಾಗಿ ಹೇಳಲು ಸಾದ್ಯವಾಗಿಲ್ಲ. ವಿಮಾನ ಹಾಗೂ ಹೆಲಿಕಾಪ್ಟರ್ನ ಅವಶೇಷಗಳು ಪೊಟೊಮ್ಯಾಕ್ ನದಿಗೆ ಬಿದ್ದಿವೆ. ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಯುಎಸ್ ರಕ್ಷಣಾ ಪಡೆಗಳು ಧಾವಿಸಿದ್ದು, ಮೃತದೇಹಗಳಿಗೆ ಶೋಧ ನಡೆಸುತ್ತಿದೆ.
ಇಲ್ಲಿಯವರೆಗೂ 18 ಮೃತದೇಹಗಳನ್ನು ನದಿಯಿಂದ ಹೊರತೆಗಯಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, "ದುರಂತದ ಬಗ್ಗೆ ತನಿಖೆ ಕೈಗೊಂಡಿದ್ದೇವೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ" ಎಂದು ಸಂತಾಪ ಸೂಚಿಸಿದ್ದಾರೆ,(ಏಜೆನ್ಸೀಸ್).