ರೈತರು ಬೇಕಾಗಿದ್ದಾರಂತೆ...!

Farmer JPG
Published on

ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ಹೇಳುವಂತೆ ಪ್ರತಿ ಬಿಕ್ಕಟ್ಟಿನಲ್ಲೂ ಒಂದು ಅವಕಾಶವಿದೆ. ಕೋವಿಡ್ -19 ಲಾಕ್‌ಡೌನ್ ನಿಂದಾಗಿ ಬಹುತೇಕ ಕ್ಷೇತ್ರಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ ನಿಜ, ಆದರೆ ಈ ಪರಿಸ್ಥಿತಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಿದ್ಧರಿರುವವರಿಗೆ ಸದ್ದಿಲ್ಲದೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.

ಕಳೆದ ಹಲವಾರು ದಿನಗಳಿಂದ, ಸಾಮಾಜಿಕ ಜಾಲತಾಣಗಳಲ್ಲಿ 'ಕೃಷಿಕರು ಬೇಕಾಗಿದ್ದಾರೆ' ಎಂಬ ಬರಹವಿರುವ ಫೋಟೋಗಳು ಹರಿದಾಡುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ 'ರೈತರು ಬೇಕು' ಎಂದು ಪೋಸ್ಟ್ ಮಾಡಿದ ಮಂಡ್ಯ ಮೂಲದ ಗ್ರಾಸ್‌ರೂಟ್ಸ್ ಆರ್ಗ್ಯಾನಿಕ್ ಕಂಪನಿ ನಿರ್ದೇಶಕ ನಿರ್ದೇಶಕ ದೀಪಕ್, "ಸಾವಯವ ಮತ್ತು ನೈಸರ್ಗಿಕ ಕೃಷಿಯಲ್ಲಿ ಪರಿಣತಿ ಹೊಂದಿರುವವರಿಂದ ನಾವು ಅರ್ಜಿ ಆಹ್ವಾನಿಸಿದ್ದೇವೆ. ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಾಫ್ಟ್‌ವೇರ್ ಕಂಪನಿಗಳಂತೆ ನಾವೂ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಇಂಟರ್ನ್‌ಶಿಪ್ ಸಹ ನೀಡುತ್ತಿದ್ದೇವೆ. ಕೃಷಿಯಲ್ಲಿ ಆಸಕ್ತಿ ಹೊಂದಿರುವವರಿಗೆ ಅದರಲ್ಲಿ ಅನುಭವ ಹೊಂದಲು ಅವಕಾಶ ಕಲ್ಪಿಸುತ್ತವೆ ಎಂದು ಹೇಳಿದರು. " ಸಾವಯವ ಕೃಷಿಯಲ್ಲಿ ಪರಿಣತಿಯನ್ನು ಹೊಂದಿರುವ ಆಸಕ್ತ ರೈತರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಮಾಸಿಕ 10 ಸಾವಿರ ರೂ.ದಿಂದ 30 ಸಾವಿರ ರೂ. ವರೆಗೆ ವೇತನ ಜತೆಗೆ ಉಚಿತ ಊಟ, ವಸತಿ ಇರುತ್ತದೆ.

ಸಾಂಕ್ರಾಮಿಕ ರೋಗದಿಂದಾಗಿ ಇಡೀ ದೇಶದಲ್ಲಿ ಲಕ್ಷಾನುಗಟ್ಟಲೆ ಜನ ಹಿಮ್ಮುಖ ವಲಸೆ ಮತ್ತು ಕೆಲಸದಿಂದ ಹೊರಗುಳಿದವವರಾಗಿದ್ದಾರೆ. ಇದು ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿದೆ.

"ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕೆಲಸ ಮಾಡಿದವರೂ ಸೇರಿದಂತೆ ಅನೇಕ ರೈತರು ಮತ್ತು ಇತರರು ಸಾಮಾಜಿಕ ಮಾಧ್ಯಮದಲ್ಲಿನ ಈ ಪೋಸ್ಟ್ ನೋಡಿ ನಮ್ಮ ಬಳಿ ಬಂದಿದ್ದು, ಅವರು ನಮ್ಮ ಕೃಷಿ ಚಟುವಟಿಕೆಯ ಒಂದು ಭಾಗಿಯಾಗಬೇಕೆಂಬ ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ" ಎಂದು ಅವರು ಹೇಳಿದರು.

ಈ ಕ್ರಮವನ್ನು ಸ್ವಾಗತಿಸಿದ ಹಲವು ಕೃಷಿ ತಜ್ಞರು ಮತ್ತು ರೈತ ಮುಖಂಡರು, ವಾಪಸಾದ ಕಾರ್ಮಿಕರನ್ನು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು, ಅದರಲ್ಲಿ ಕನಿಷ್ಠ ಜ್ಞಾನವನ್ನು ಹೊಂದಿರುವ ಯುವಕರು ಮತ್ತು ಆಸಕ್ತರಿಗೆ ತರಬೇತಿ ನೀಡುವುದರಿಂದ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

"ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕೃಷಿ ಪ್ರಮುಖ ಪಾತ್ರ ವಹಿಸುತ್ತದೆ. ಕೋವಿಡ್ -19 ನಿಂದಾಗಿ ಅನೇಕರು ಕೆಲಸದಿಂದ ಹೊರಗುಳಿದಿದ್ದಾರೆ. ಈಗ ಉದ್ಯೋಗಾವಕಾಶಗಳು ಕಡಿಮೆ ಎಂದೇ ಹೇಳಬಹುದು. ಆದ್ದರಿಂದ ಅಂಥವನ್ನು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪ್ರಸ್ತುತ ಆರ್ಥಿಕ ಕುಸಿತ ಮತ್ತು ಬಿಕ್ಕಟ್ಟನ್ನು ಕೃಷಿಯ ಮೂಲಕ ಪರಿಹರಿಸಬಹುದು. ಕೃಷಿಯನ್ನು ಪುನರುಜ್ಜೀವನಗೊಳಿಸಲು ಇದು ಸೂಕ್ತ ಸಮಯ ಎಂದು ರೈತ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net