More

    ರಾತ್ರಿ ಕರ್ಫ್ಯೂ ವೇಳೆ ಅಂತಾರಾಜ್ಯ ಬಸ್ ಸಂಚಾರ ತಡೆಯದಂತೆ ಕೇಂದ್ರ ಸೂಚನೆ

    ನವದೆಹಲಿ: ಅನ್​ಲಾಕ್​ 1.0 ಅವಧಿಯಲ್ಲಿ ರಾತ್ರಿ 9ರಿಂದ ಮುಂಜಾನೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿದ್ದರೂ, ರಾತ್ರಿ ವೇಳೆ ಸರಕು ಸಾಗಣೆ ಮತ್ತು ಪ್ರಯಾಣಿಕರ ಸಂಚಾರಕ್ಕೆ ಯಾವುದೇ ಅಡ್ಡಿ ಮಾಡದಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚನೆ ರವಾನಿಸಿದೆ.
    ಶುಕ್ರವಾರ ಗೃಹ ಕಾರ್ಯದರ್ಶಿ ಹೊರಡಿಸಿರುವ ಹೊಸ ಅಧಿಸೂಚನೆಯಲ್ಲಿ ಆಯಾ ಪ್ರದೇಶಗಳಲ್ಲಿ ರಾತ್ರಿ ವೇಳೆ ಸರಕು ಮತ್ತು ಸಾರಿಗೆ ಸೇವೆಗಳಿಗೆ ಅಡ್ಡಿ ಮಾಡಬಾರದು ಎಂದು ಹೇಳಲಾಗಿದೆ.

    ಇದನ್ನೂ ಓದಿ: ಪಾಗಲ್​ ಪ್ರೇಮಿಯ ಪ್ರತೀಕಾರದ ಹುಚ್ಚಾಟ ಮಾಡಿರುವ ಅನಾಹುತ ಏನೆಂದು ತಿಳಿದರೆ ಶಾಕ್​ ಆಗೋದ ಗ್ಯಾರಂಟಿ!

    “ಸರಕುಗಳ ಲೋಡಿಂಗ್​ ಮತ್ತು ಅನ್​ಲೋಡಿಂಗ್​ (ಸಪ್ಲೈ ಚೈನ್ ಮತ್ತು ಲಾಜಿಸ್ಟಿಕ್ಸ್‌ನ ಭಾಗ) ಮಾಡಲು ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವ ಬಸ್​​ಗಳು ಮತ್ತು ಟ್ರಕ್​​ಗಳು ಸರಕು ಸಾಗಣೆ ವಾಹನಗಳು, ಬಸ್, ರೈಲು, ವಿಮಾನ ಇಳಿದ ನಂತರ ತಮ್ಮ ತಮ್ಮ ಸ್ಥಳಗಳಿಗೆ ಪ್ರಯಾಣಿಸುವ ವ್ಯಕ್ತಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: ಕ್ವಾರಂಟೈನ್ ಕೇಂದ್ರದಲ್ಲಿ ಪ್ರೇಮ ಪ್ರಸಂಗ: ಯುವಕ-ಬಾಲಕಿ ಪರಾರಿ!

    ರಾತ್ರಿ ಕರ್ಫ್ಯೂ ಸಮಯದಲ್ಲಿ ಜಾರಿ ಸಂಸ್ಥೆಗಳು ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುತ್ತಿರುವ ಸಂಗತಿ ಕೇಂದ್ರ ಸರ್ಕಾರದ ಗಮನಕ್ಕೆ ಬಂದ ಹಿನ್ನೆಯಲ್ಲಿ ಇಂಥ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕ ಸಭೆ, ಸಮಾರಂಭಗಳು, ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ರಾತ್ರಿಯಿಂದ ಮುಂಜಾನೆವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೆ ಅಗತ್ಯ ಸೇವೆಗಳು ಮತ್ತು ಜನರ ಸಂಚಾರವನ್ನು ಅಡ್ಡಿಪಡಿಸುವ ಉದ್ದೇಶವನ್ನು ಅದು ಹೊಂದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

    ಮರಿಗೆ ತೊಂದರೆಯಾಗದಂತೆ ತಾಯಿ ಆನೆ ಮಾಡಿದ್ದೇನು ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts