ಕ್ವಾರಂಟೈನ್ ಕೇಂದ್ರದಲ್ಲಿ ಪ್ರೇಮ ಪ್ರಸಂಗ: ಯುವಕ-ಬಾಲಕಿ ಪರಾರಿ!

love
Published on

ಕಾಸರಗೋಡು: ಜಿಲ್ಲೆಯ ಉಪ್ಪಳ ಚೆರುಗೋಳಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿದ್ದ ಆಂಧ್ರಪ್ರದೇಶದ 12 ವರ್ಷದ ಬಾಲಕಿ ಹಾಗೂ ತಮಿಳುನಾಡಿನ 21 ವರ್ಷದ ಯುವಕ ಗುರುವಾರ ಬೆಳಗ್ಗೆ ಪರಾರಿಯಾಗಿದ್ದಾರೆ!

ಇಬ್ಬರ ಕುಟುಂಬಗಳು ಅಲೆಮಾರಿಗಳಾಗಿದ್ದು, ಗುಜರಿ ಹೆಕ್ಕಿ ಜೀವನ ಸಾಗಿಸುತ್ತಿದ್ದರು. ಅವರನ್ನು ಸಾಮಾಜಿಕ ಕಾರ್ಯಕರ್ತರು ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಿ ವಸತಿ ಸೌಕರ್ಯ ಕಲ್ಪಿಸಿದ್ದರು. ಅಲ್ಲಿ ಬಾಲಕ-ಯುವಕನ ನಡುವೆ ಪ್ರೀತಿ ಮೊಳೆತಿದ್ದು, ಕುಟುಂಬಗಳ ಕಣ್ತಪ್ಪಿಸಿ ಇಬ್ಬರೂ ಪರಾರಿಯಾಗಿದ್ದಾರೆ.

ಹುಡುಗಿ ಅಪ್ರಾಪ್ತ ವಯಸ್ಕಳಾಗಿರುವುದರಿಂದ ಇದು ಅಪಹರಣ ಪ್ರಕರಣ ಎಂದು ಬಿಂಬಿತವಾಗುವ ಸಾಧ್ಯತೆ ಇದೆ. ಯುವಕನ ಮೇಲೆ ಪೊಲೀಸರು ಕ್ರಮ ಕೈಗೊಳ್ಳಲು ಅವಕಾಶವಿದೆ. ಅದಲ್ಲದೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ತಪ್ಪಿಸಿಕೊಂಡು ಹೋಗಿರುವುದು ಕೂಡ ಅಪರಾಧ. ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ನೀಡಿರುವ ದೂರಿನಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net