More

    ಮೂಕಪ್ರಾಣಿ ಪ್ರೀತಿಗೆಂದೇ ದೇವರು ಮನುಷ್ಯ ಜನ್ಮ ಸೃಷ್ಟಿಸಿದ್ದಾನಂತೆ. ನಿಜವಿರಬಹುದೆ?

    ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಸುದ್ದಿ ಯಾವಾಗಲೂ ಕುತೂಹಲ ಕೆರಳಿಸುವಂಥದ್ದೇ ಆಗಿರುತ್ತದೆ. ಹಾಗೆಯೇ ಮನುಷ್ಯ ಮತ್ತು ವನ್ಯ ಜೀವಿಗಳ ಅದರಲ್ಲೂ ಚಿರತೆಯೊಂದಿಗಿನ ಸ್ನೇಹ ಬಹುತೇಕ ಅಸಾಧ್ಯವೆಂದೇ ನಂಬಲಾಗಿದೆ. ಆದಾಗ್ಯೂ, ಈ ದೀರ್ಘಕಾಲದ ಕಲ್ಪನೆಯನ್ನು ತಪ್ಪೆಂದು ಇತ್ತೀಚಿನ ವೀಡಿಯೊವು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಮನುಷ್ಯ ಮತ್ತು ಚಿರತೆಗಳ ನಡುವಿನ ಸ್ನೇಹ ಬಾಂಧವ್ಯವನ್ನು ಬಿಂಬಿಸುವ ಈ ವಿಡಿಯೋ ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿದೆ.

    ಇದನ್ನೂ ಓದಿ: ಕಲ್ಲಿನಕೋಳಿ ಕೂಗಿದರೆ ಆಶ್ಚರ್ಯವಾಗದೇ ಇರಲು ಸಾಧ್ಯವೆ? ಅಂಥದೇ ಇಲ್ಲೂ ಒಂದು ಆಶ್ಚರ್ಯವಿದೆ ನೋಡಿ…!

    ಭಾರತೀಯ ಅರಣ್ಯ ಸೇವಾಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟ್ಟರ್ ನಲ್ಲಿ ಈ ದೃಶ್ಯಾವಳಿ ಇರುವ ವಿಡಿಯೋ ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ಮೂರು ಚಿರತೆಗಳನ್ನು ಮುದ್ದಿಸುತ್ತ ಮಲಗಿರುವ ದೃಶ್ಯಾವಳಿ ಇದರಲ್ಲಿದೆ. ಮೂರು ಚಿರತೆಗಳ ಪೈಕಿ ಒಂದು ಮಧ್ಯರಾತ್ರಿಯಲ್ಲಿ ಎಚ್ಚರಗೊಂಡು ಅವನ ಬಳಿ ಮಲಗಲು ಹೋಗುತ್ತಿದೆ. ಸ್ವಲ್ಪ ಹೊತ್ತಿನ ನಂತರ, ಇನ್ನೆರಡು ಚಿರತೆಗಳೂ ಹಾಗೆಯೇ ಮಾಡುತ್ತವೆ.
    ಪ್ರಾಣಿಗಳ ಭಯಾನಕತೆಯ ಬಗ್ಗೆ ಆತ ಎಳ್ಳಷ್ಟೂ ತಲೆಕೆಡಿಸಿಕೊಂಡಂತಿಲ್ಲ. ಅವುಗಳನ್ನು ಆರಾಮವಾಗಿ ಮುದ್ದಿಸುತ್ತಿದ್ದಾನೆ.

    ಇದನ್ನೂ ಓದಿ:  ನೇಪಾಳ ಗಡಿಯಲ್ಲಿ ಭಾರತೀಯರ ಮೇಲೆ ಗುಂಡಿನ ದಾಳಿ, ಒಬ್ಬನ ಸಾವು

    “ಅಷ್ಟಕ್ಕೂ ಈ ಚಿರತೆಗಳಿಗೆ ಬೇಕಾದುದಾದರೂ ಏನು? ಬೆಚ್ಚಗಿನ ನೆಲ, ಹೊದಿಕೆ ಮತ್ತು ಪ್ರೀತಿಯ ಅಪ್ಪುಗೆ. ಇಲ್ಲಿ ಪ್ರತಿ ಕ್ಷಣವೂ ಬಿಂಬಿತವಾಗಿರುವುದು ಪ್ರೀತಿಯೊಂದೇ’ ಎಂದು ಕಸ್ವಾನ್ ಈ ವಿಡಿಯೋಗೆ ಶೀರ್ಷಿಕೆ ಬರೆದಿದ್ದಾರೆ. ಆನ್‌ಲೈನ್‌ನಲ್ಲಿ ಶೇರ್ ಆದ ಈ ವಿಡಿಯೋವನ್ನು ಈಗ 1.5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 10,000 ಕ್ಕೂ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ. ಮತ್ತು 3,000 ಜನರು ಈ ಪೋಸ್ಟ್​​​ಗೆ ರಿಟ್ವೀಟ್ ಮಾಡಿದ್ದಾರೆ.
    “ಪ್ರೀತಿ ಎಂದರೆ ಮನುಷ್ಯರಿಗಿಂತ ಪ್ರಾಣಿಗಳು ಸುಲಭವಾಗಿ ಅರ್ಥಮಾಡಿಕೊಳ್ಳುವ ಭಾಷೆ.ಶುದ್ಧ ಪ್ರೀತಿಯನ್ನು ನೀಡಿ. ಪ್ರತಿಯಾಗಿ ನೀವು ನಂಬಿಕೆ ಮತ್ತು ಶರಣಾಗತಿಯನ್ನು ಸ್ವೀಕರಿಸುತ್ತೀರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಚೀನಾ ಪರ ಟ್ವೀಟ್ ಮಾಡುತ್ತಿದ್ದ 1.7 ಲಕ್ಷ ಖಾತೆಗಳ ಬಾಯಿ ಮುಚ್ಚಿಸಿದ ಟ್ವೀಟರ್

    “ಇತರ ಪ್ರಾಣಿಗಳಿಗೆ ಕಾಳಜಿ ಮತ್ತು ಪ್ರೀತಿ ನೀಡಲೆಂದೇ ದೇವರು ಮನುಷ್ಯ ಜನ್ಮವನ್ನು ಸೃಷ್ಟಿಸಿದ್ದಾನೆ ಎಂದು ನಾನು ಭಾವಿಸುತ್ತೇನೆ ಎಂದು ಟ್ವಿಟರ್ ಬಳಕೆದಾರರು ಅಭಿಪ್ರಾಯ ಪಟ್ಟಿದ್ದಾರೆ.

    2018 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ “ದಿ ಚೀತಾ ಎಕ್ಸ್‌ಪೀರಿಯೆನ್ಸ್” ಪ್ರಯೋಗದಿಂದ ಈ ದೃಶ್ಯಾವಳಿಯನ್ನು ಸೆರೆಹಿಡಿಯಲಾಗಿದೆ ಎಂದು ಒಬ್ಬ ಟ್ವಿಟರ್​ ನಲ್ಲಿ ಒಬ್ಬರು ಹೇಳಿದ್ದಾರೆ. ಚಿರತೆಗಳಿಗೆ ಗೇಬ್ರಿಯಲ್ ಮತ್ತು ವೋಲ್ಕರ್ ಎಂದೂ ಮತ್ತು ಅವುಗಳೊಂದಿಗಿರುವ ಆ ವ್ಯಕ್ತಿಗೆ ಡಾಲ್ಫ್ ವೋಕರ್ ಎಂದೂ ಹೆಸರಿತ್ತು. ಚಿರತೆಗಳು ಅವನ ಕೈತುತ್ತು ತಿಂದು ಅನೇಕ ರಾತ್ರಿಗಳನ್ನು ಅವನ ಜೊತೆಯಲ್ಲಿ ಕಾಡಿನಲ್ಲಿ ಕಳೆದಿದ್ದವಂತೆ.

    151 ಕೋಟಿ ರೂ. ಇಎಸ್ಐ ಹಗರಣ: ಮಾಜಿ ಸಚಿವನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts