

ಸ್ಯಾನ್ಫ್ರಾನ್ಸಿಸ್ಕೋ: ಕರೊನಾ ಮೂಲವಾದ ಚೀನಾ ದೇಶವನ್ನು ಕರೊನಾ ಚೀನಾ ಎಂದೇ ಹಲವರು ದೂರಿದ್ದಾರೆ. ಇಷ್ಟಾದರೂ ಕ್ಯಾರೆ ಅನ್ನದ ಚೀನಾ ಆಗಾಗ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಲೇ ಇದೆ.. ಈ ಮಧ್ಯೆ, ಚೀನಾದಿಂದ ಕಾರ್ಯ ನಿರ್ವಹಿಸುತ್ತಿದ್ದ ಲಕ್ಷಾಂತರ ಟ್ಟಿಟರ್ ಖಾತೆಗಳನ್ನು ಟ್ವಿಟರ್ ಸಸ್ಥೆ ರದ್ದು ಮಾಡಿದೆ.
ಚೀನಾ ಪರವಾಗಿ ಟ್ವೀಟ್ ಮಾಡುತ್ತಿರುವ 1.70 ಲಕ್ಷ ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ಟ್ವಿಟರ್ ಗುರುವಾರ ತಿಳಿಸಿದೆ.
ಚೀನಾದ ಕಮ್ಯೂನಿಸ್ಟ್ ಪಕ್ಷದ ಪರವಾಗಿ ಭೌಗೋಳಿಕ ರಾಜಕೀಯ ಕುರಿತು ಟ್ವೀಟ್ ಮಾಡುತ್ತಿದ್ದ ಖಾತೆಗಳನ್ನು ಈ ಪ್ಲಾಟ್ಫಾರ್ಮ್ನ ನೀತಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಟ್ವಿಟರ್ ಕಂಪನಿ ಹೇಳಿದೆ. ಖಾತೆಗಳಲ್ಲಿ ಮುಖ್ಯವಾಗಿ ಚೀನಿ ಭಾಷೆಗಳಲ್ಲಿ ಟ್ವೀಟ್ ಮಾಡಲಾಗಿದೆ" ಎಂದು ಟ್ವಿಟರ್ ಹೇಳಿದೆ.
ಇದನ್ನೂ ಓದಿ: ಇದೋ ನೋಡಿ… 1600 ವರ್ಷಗಳ ಹಿಂದೆ ಮುಳುಗಿದ್ದ ಚರ್ಚ್…!
ಚೀನಾದಲ್ಲಿ ಅಧಿಕೃತವಾಗಿ ಟ್ವಿಟರ್ ಸ್ಥಗಿತಗೊಳಿಸಲಾಗಿದೆ. ಆದಾಗ್ಯೂ ಅನೇಕರು ವಿಪಿಎನ್ ಬಳಸಿ ಟ್ವಿಟರ್ ಬಳಕೆ ಮಾಡುತ್ತಿದ್ದಾರೆ.
ಸ್ಟ್ಯಾನ್‌ಫೋರ್ಡ್ ಇಂಟರ್ನೆಟ್ ಅಬ್ಸರ್ವೇಟರಿಯ ಸಂಶೋಧನಾ ವ್ಯವಸ್ಥಾಪಕ ರೆನೀ ಡಿರೆಸ್ಟಾ, ಈ ಖಾತೆಗಳನ್ನು ಜನವರಿಯಲ್ಲಿ ಆರಂಭಿಸಲಾಗಿದ್ದು, ಆ ಖಾತೆದಾರರು ಕೋವಿಡ್ -19 ಬಗ್ಗೆ ಪೋಸ್ಟ್ ಮಾಡುತ್ತಿದ್ದರು ಎಂದು ಹೇಳಿದರು.
23,750 ಖಾತೆಗಳು ಒಟ್ಟಾರೆ 3,48,608 ಸಲ ಟ್ವೀಟ್ ಮಾಡಿವೆ ಎಂದು ಸ್ಟ್ಯಾನ್‌ಫೋರ್ಡ್ ಸಂಶೋಧಕರು ತಿಳಿಸಿದ್ದಾರೆ.
ಟ್ವಿಟರ್ ಈ ರೀತಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. 2019 ರಲ್ಲಿ ಟ್ವಿಟರ್ "ಹಾಂಗ್ ಕಾಂಗ್ನಲ್ಲಿ ರಾಜಕೀಯ ಭಿನ್ನಾಭಿಪ್ರಾಯವನ್ನು ಬಿತ್ತಲು ಪ್ರಯತ್ನಿಸಿ ಚೀನಾದ ಪರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನಂಬಲಾದ ಸುಮಾರು 1,000 ಖಾತೆಗಳನ್ನು ತೆಗೆದುಹಾಕಿತ್ತು.
ಇದನ್ನೂ ಓದಿ : ಗಡಿ ವಿವಾದ: ಭಾರತದೊಂದಿಗೆ ಸಂಘರ್ಷಕ್ಕೆ ಸಿದ್ಧವಾದ ನೇಪಾಳ
ರಷ್ಯಾ ಮತ್ತು ಟರ್ಕಿಗೆ ಸಂಬಂಧಿಸಿರುವ ಖಾತೆಗಳನ್ನು ಕೂಡ ಸ್ಥಗಿತಗೊಳಿಸಿದ್ದಾಗಿ ಕಂಪನಿ ಗುರುವಾರ ಪ್ರಕಟಿಸಿದೆ.
ಆಡಳಿತಾರೂಢ ಯುನೈಟೆಡ್ ರಷ್ಯಾ ಪಕ್ಷವನ್ನು ಬೆಂಬಲಿರುವ 1,000 ಕ್ಕೂ ಹೆಚ್ಚು ಖಾತೆಗಳನ್ನು ಟ್ವಿಟರ್ ಗಮನಿಸಿದೆ.
ಟರ್ಕಿಯಲ್ಲಿ, 7,340 ಖಾತೆಗಳ ಜಾಲವು ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರ ಪಕ್ಷದ ಪರ ಪೋಸ್ಟ್ ಮಾಡಿದೆ.