ಬ್ರಿಟನ್​ನಲ್ಲಿ ಸಾಂಕ್ರಾಮಿಕ ಕೆಮ್ಮು ಪ್ರಸರಣ ತೀವ್ರ!

Health
Published on

ಲಂಡನ್​: '100 ದಿನಗಳ ಕೆಮ್ಮು' ಎಂದು ಕರೆಯಲ್ಪಡುವ ಸಾಂಕ್ರಾಮಿಕ ರೋಗ ಬ್ರಿಟನ್​ನಲ್ಲಿ ಈಗ ವೇಗವಾಗಿ ಹರಡುತ್ತಿದ್ದು, ಆರೋಗ್ಯ ತರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇದು ಬ್ಯಾಕ್ಟೀರಿಯಾ ಸೋಂಕು ಆಗಿದ್ದು, ಪ್ರಕರಣಗಳಲ್ಲಿ ಶೇ. 250 ಏರಿಕೆ ಕಂಡುಬಂದಿದೆ. ಶೀತವನ್ನು ಹೋಲುವ ರೋಗ ಲಕ್ಷಣಗಳೊಂದಿಗೆ ಇದು ಪ್ರಾರಂಭವಾಗುತ್ತದೆ. ಆದರೆ ಮೂರು ತಿಂಗಳವರೆಗೆ ಅಥವಾ ದೀರ್ಕಾಲ ತೀವ್ರವಾದ ಕೆಮ್ಮು ಮುಂದುವರಿಯಬಹುದು ಎಂದು ಫಾಕ್ಸ್​ ನ್ಯೂಸ್​ ವರದಿ ಮಾಡಿದೆ.

ಜುಲೈ ಮತ್ತು ನವೆಂಬರ್​ ನಡುವೆ ಶ್ವಾಸಕೋಶದ ಬ್ಯಾಕ್ಟೀರಿಯಾದ ಸೋಂಕು ಪೆರ್ಟುಸಿಸ್​ ಹೆಸರಿನ ಈ ರೋಗದ 716 ಪ್ರಕರಣಗಳು ವರದಿಯಾಗಿವೆ. ಇದು 2022ರ ಇದೇ ಅವಧಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಕರೊನಾ ಸಮಯದಲ್ಲಿ ಸಾಮಾಜಿಕ ಅಂತರ ಮತ್ತು ಲಾಕ್​ಡೌನ್​ ನೀತಿಗಳಿಂದಾಗಿ ಈ ರೋಗ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಹೆಚ್ಚುತ್ತಿದೆ ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ಹೇಳಿದೆ.

ವೂಪಿಂಗ್​ ಕೆಮ್ಮು

ವೂಪಿಂಗ್​ ಕೆಮ್ಮು (ಪೆರ್ಟುಸಿಸ್​) ಎಂದು ಇದನ್ನು ಕರೆಯಲಾಗುತ್ತದೆ. ಬೊರ್ಡೆಟೆಲ್ಲಾ ಪೆರ್ಟುಸಿಸ್​ ಬ್ಯಾಕ್ಟೀರಿಯಾದಿಂದ ಉಂಟಾಗುವ ಶ್ವಾಸಕೋಶ ಮತ್ತು ಶ್ವಾಸನಾಳದ ಸೋಂಕು ಇದಾಗಿದೆ. 1950ರ ದಶಕದ ಇದಕ್ಕೆ ಲಸಿಕೆ ಕಂಡುಹಿಡಿದ ಪರಿಣಾಮ ರೋಗ ನಿಯಂತ್ರಣಕ್ಕೆ ಬಂದಿತ್ತು. ವೂಪಿಂಗ್​ ಕೆಮ್ಮು ಬಂದವರಿಗೆ ಉಸಿರಾಡಲು ಕಷ್ಟವಾಗಬಹುದು. ತೀವ್ರವಾದ ಕೆಮ್ಮು ವಾಂತಿ ಮತ್ತು ಪಕ್ಕೆಲುಬು ನೋವು ಕಾಣಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net