

ಭುವನೇಶ್ವರ: ಒಡಿಶಾ ಕರಾವಳಿಯ ವೀಲರ್ ದ್ವೀಪದಲ್ಲಿ ಜನವರಿಯಿಂದ ಮಾರ್ಚ್ವರೆಗೆ ಡಿಆರ್ಡಿಒ ಕ್ಷಿಪಣಿ ಪರೀಕ್ಷೆಯನ್ನು ನಡೆಸದಿರಲು ನಿರ್ಧರಿಸಿದೆ.
ಸಣ್ಣ ಆಮೆಗಳ ಜೀವ ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪಿ.ಕೆ. ಜೆನಾ ನೇತೃತ್ವದ ಸಮಿತಿ ಹೇಳಿದೆ. ಜನವರಿಯಿಂದ ಮಾರ್ಚ್ವರೆಗಿನ ಅವಧಿಯನ್ನು 'ಗೂಡುಕಟ್ಟುವ ಕಾಲ' ಎಂದು ಕರೆಯುತ್ತಾರೆ. ಆಮೆ ಗೂಡುಕಟ್ಟುವ ಸ್ಥಳವು ವೀಲರ್ ದ್ವೀಪಕ್ಕೆ ಸಮೀಪದಲ್ಲಿದೆ.
ಕ್ಷಿಪಣಿ ಪರೀಕ್ಷೆಯು ಪ್ರಕಾಶಮಾನವಾದ ಬೆಳಕು ಮತ್ತು ಶಬ್ದಗಳನ್ನು ಒಳಗೊಂಡಿರುವುದರಿಂದ ಅದು ಆಮೆಗಳನ್ನು ದಿಗ್ಭ್ರಮೆಗೊಳಿಸುತ್ತದೆ. ಆದ್ದರಿಂದ ವೀಲರ್ ದ್ವೀಪದಲ್ಲಿ ಜನವರಿಯಿಂದ ಮಾರ್ಚ್ವರೆಗೆ ಪಣಿ ಪರೀಕ್ಷೆಯನ್ನು ನಿಷೇಧಿಸಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಣಾಧಿಕಾರಿ (ವನ್ಯಜಿವಿ) ಸುಸಂತ ನಂದಾ ಹೇಳಿದ್ದಾರೆ.