ಮಹಿಳೆಯರ ನಗ್ನ ಫೋಟೋ ಆ್ಯಪ್​ ಹೆಚ್ಚಳ!

AI
Published on

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ಬಳಸಿ ಫೋಟೋಗಳಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸುವ ಆ್ಯಪ್​ ಮತ್ತು ವೆಬ್​ಸೈಟ್​ಗಳ ಜನಪ್ರಿಯತೆ ಹೆಚ್ಚಾಗುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.

ನಗ್ನಗೊಳಿಸುವ ವೆಬ್​ಸೈಟ್​ಗಳಿಗೆ ಸೆಪ್ಟೆಂಬರ್​ ತಿಂಗಳೊಂದರಲ್ಲೇ 24 ದಶಲಕ್ಷ ಜನರು ಭೇಟಿ ನೀಡಿರುವುದನ್ನು ಸಾಮಾಜಿಕ ಮಾಧ್ಯಮ ಜಾಲ ವಿಶ್ಲೇಷಣಾ ಕಂಪನಿ ಗ್ರಾಫಿಕಾ ಕಂಡುಕೊಂಡಿದೆ. ಬಹುತೇಕ ವಿವಸ್ತ್ರ ಅಥವಾ 'ನಗ್ನತೆ' ಸೇವೆಗಳ ಮಾರುಕಟ್ಟೆಗಾಗಿ ಜನಪ್ರಿಯ ಸಾಮಾಜಿಕ ಜಾಲಗಳನ್ನು ಬಳಸಲಾಗುತ್ತಿದೆ ಎಂದು ಗ್ರಾಫಿಕಾ ಹೇಳಿದೆ.

ಉದಾಹರಣೆಗೆ, ಈ ವರ್ಷದ ಆರಂಭದಿಂದ ನಗ್ನತೆ ಆ್ಯಪ್​ಗಳ ಜಾಹೀರಾತಿನ ಲಿಂಕ್​ಗಳ ಸಂಖ್ಯೆ ಎಕ್ಸ್​ ಮತ್ತು ರೆಡ್ಡಿಟ್​ ಸಹಿತ ಸಾಮಾಜಿಕ ಮಾಧ್ಯಮದಲ್ಲಿ ಶೇಕಡ 2,400ಕ್ಕಿಂತ ಅಧಿಕವಾಗಿ ಹೆಚ್ಚಾಗಿದೆ ಎಂದು ಗ್ರಾಫಿಕಾ ಸಂಶೋಧಕರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net