ವಾಘಾ ಗಡಿಯಲ್ಲಿ ದೀಪಾವಳಿ ವಿಶೇಷ; ಭಾರತದ ಯೋಧರಿಗೆ ಸಿಹಿ ಹಂಚಿದ ಪಾಕ್​ ಸೇನೆ!

wagha border
Published on

ಅಮೃತ್​ಸರ್​: ಅಟ್ಟಾರಿ-ವಾಘಾ ಗಡಿಯಲ್ಲಿ (ಭಾರತದ ಗಡಿ ಭದ್ರತಾ ಪಡೆ) ಬಿಎಸ್​ಎಫ್​ ಯೋಧರು ಮತ್ತು ಪಾಕಿಸ್ತಾನ್​ ರೇಂಜರ್ಸ್​ ಯೋಧರು ಇಂದು (ಅ.24) ಸಿಹಿ ಹಂಚಿಕೊಂಡಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ಸಮಸ್ಯೆಗಳನ್ನು ಮರೆತು ಎರಡು ಬದಿಯ ಸೈನಿಕರು ಪರಸ್ಪರ ಸಿಹಿ ಹಂಚಿಕೊಂಡು ದೀಪಾವಳಿಯನ್ನು ಆಚರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿ ಸ್ವಾತಂತ್ರ್ಯ ದಿನಾಚರಣೆ, ಈದ್ ಮುಂತಾದ ದಿನಗಳಲ್ಲಿ ಎರಡೂ ಬದಿಯ ಸೈನಿಕರು ಸಿಹಿಯನ್ನು ಹಂಚಿಕೊಂಡು ಸಂಭ್ರಮಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net