ಹೆಚ್ಚುತ್ತಿದೆ ಮಹಿಳೆಯರಿಗೆ ಅಶ್ಲೀಲ ವಿಡಿಯೋಗಳ ಟಾರ್ಚರ್!; ಮೂರು ವರ್ಷದಲ್ಲಿ 13,587 ಪ್ರಕರಣ ದಾಖಲು; 8,711 ಆರೋಪಿಗಳ ಸೆರೆ

Video Call
Published on

| ಅವಿನಾಶ ಮೂಡಂಬಿಕಾನ ಬೆಂಗಳೂರು

ಸಚಿವ ಎಸ್.ಟಿ. ಸೋಮಶೇಖರ್ ಪುತ್ರ ನಿಶಾಂತ್ ಸೋಮಶೇಖರ್​ಗೆ ಅಶ್ಲೀಲ ಫೋಟೋ ಮತ್ತು ವಿಡಿಯೋ ಕಳಿಸಿ ಹಣಕ್ಕಾಗಿ ಬ್ಲಾ್ಯಕ್​ವೆುೕಲ್ ಮಾಡಿದ ಪ್ರಕರಣ ತಲ್ಲಣ ಮೂಡಿಸಿರುವ ನಡುವೆಯೇ, ದೇಶಾದ್ಯಂತ ಪ್ರತಿನಿತ್ಯ ಸರಾಸರಿ 15 ಇಂಥ ಪ್ರಕರಣಗಳು ಸೈಬರ್ ಪೊಲೀಸ್ ಠಾಣೆಗಳ ಮೆಟ್ಟಿಲೇರುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ಪ್ರಕಾರ ಶೇ. 6 ಪ್ರಕರಣಗಳಷ್ಟೇ ಠಾಣೆ ಮೆಟ್ಟಿಲೇರಿದರೆ, ಉಳಿದವರು ಮಾನಕ್ಕೆ ಅಂಜಿ ದೂರು ಕೊಡಲು ಹಿಂದೇಟು ಹಾಕುತ್ತಾರೆ. ಸೈಬರ್ ಕ್ರೖೆಂನಲ್ಲಿ ಆರ್ಥಿಕ ಅಪರಾಧಗಳು ಮೊದಲ ಸ್ಥಾನದಲ್ಲಿದ್ದರೆ, ಅಶ್ಲೀಲತೆ ಟಾರ್ಚರ್ 2ನೇ ಸ್ಥಾನದಲ್ಲಿದೆ. ಹಣಕ್ಕಾಗಿ ಬ್ಲ್ಯಾಕ್​ವೆುೕಲ್, ಪ್ರೀತಿ-ಪ್ರೇಮ, ಅಕ್ರಮ ಸಂಬಂಧ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಇಂತಹ ಅಶ್ಲೀಲ ಅಪರಾಧಗಳು ದಾಖಲಾಗುತ್ತಿವೆ. ಕಳೆದ 3 ವರ್ಷಗಳಲ್ಲಿ ದೇಶದ ವಿವಿಧ ಸೈಬರ್ ಠಾಣೆಗಳಲ್ಲಿ 13,587 ಕೇಸ್ ದಾಖಲಾಗಿದ್ದು, 8,711 ಆರೋಪಿಗಳನ್ನು ಜೈಲಿಗಟ್ಟಲಾಗಿದೆ.

ಶೇ.50 ಪ್ರಕರಣಗಳು ಹಣಕಾಸು ವಂಚನೆಗಳಿಗೆ ಸಂಬಂಧಿಸಿದ್ದಾದರೆ, ಮಹಿಳೆಯರಿಗೆ ಅಶ್ಲೀಲ ಫೋಟೊಗಳನ್ನು ಕಳಿಸಿ ಕಿರುಕುಳ ನೀಡುವ ಕೇಸ್​ಗಳು ಶೇ.45 ಇದೆ. ಸರಸ ಸಲ್ಲಾಪದಲ್ಲಿ ತೊಡಗುವ ದೃಶ್ಯವನ್ನು ಮೊಬೈಲ್​ನಲ್ಲಿ ಗೌಪ್ಯವಾಗಿ ಸೆರೆಹಿಡಿಯುವ ದುಷ್ಕರ್ವಿುಗಳು, ನಂತರ ವಾಟ್ಸ್​ಆಪ್ ಮೂಲಕ ವೀಡಿಯೊ ಕಳುಹಿಸಿ ಬ್ಲಾ್ಯಕ್​ವೆುೕಲ್ ಮಾಡುತ್ತಾರೆ. ಸಂತ್ರಸ್ತ ಮಹಿಳೆಯರು ಬೇಡಿಕೆ ಈಡೇರಿಸದಿದ್ದರೆ ಆ ವಿಡಿಯೋಗಳನ್ನು ಇನ್​ಸ್ಟಾಗ್ರಾಂ, ಫೇಸ್​ಬುಕ್, ಟೆಲಿಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡಲಾಗುತ್ತದೆ. ರಾಜ್ಯದಲ್ಲಿ ಅಂದಾಜು ಎರಡೂವರೆ ಸಾವಿರಕ್ಕೂ ಹೆಚ್ಚಿನ ಮಹಿಳೆಯರು ಇದೇ ಮಾದರಿಯ ಬ್ಲಾ್ಯಕ್​ವೆುೕಲ್​ಗೆ ಒಳಗಾಗಿದ್ದಾರೆ.

ಎಷ್ಟು ವರ್ಷ ಶಿಕ್ಷೆ?: ಇನ್​ಫಮೇಷನ್ ಟೆಕ್ನಾಲಜಿ ಕಾಯ್ದೆ (ಐಟಿ ಆಕ್ಟ್) 67ಬಿ ಪ್ರಕಾರ-3 ವರ್ಷ ಜೈಲು ಶಿಕ್ಷೆ, 67-ಎ ಪ್ರಕಾರ 5 ವರ್ಷ ಶಿಕ್ಷೆ, 66-ಇ ಪ್ರಕಾರ 3 ವರ್ಷ ಜೈಲು ಶಿಕ್ಷೆ.

ಆಂಡ್ರಾಯ್್ಡ ಫೋನ್ ಕಾರಣ: ರಾಜ್ಯದಲ್ಲಿ ಅಶ್ಲೀಲ/ಅಸಭ್ಯ ವಿಡಿಯೋ ಪ್ರಕಟಣೆ ಅಥವಾ ಪ್ರಸರಣ ಕಾಯ್ದೆಯಡಿ 2018ರಲ್ಲಿ 3076 ಕೇಸ್ ದಾಖಲಾಗಿ 46 ಮಂದಿಗೆ ಶಿಕ್ಷೆಯಾಗಿತ್ತು. 2019 ರಲ್ಲಿ ಇದರ ಪ್ರಮಾಣ 4,203ಕ್ಕೆ ಏರಿಕೆಯಾಗಿದ್ದು, 106 ಅಪರಾಧಿಗಳು ಜೈಲು ಸೇರಿದ್ದಾರೆ. 2020ರಲ್ಲಿ 6,308 ಪ್ರಕರಣ ದಾಖಲಾಗಿದ್ದು, 82 ಮಂದಿಗೆ ಶಿಕ್ಷೆಯಾಗಿದೆ. ಹದಿಹರೆಯದ ಹೆಣ್ಣು ಮಕ್ಕಳೇ ಹೆಚ್ಚಾಗಿ ಇಂಥ ವಂಚನೆಗೆ ಬಲಿಯಾ ಗುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ.

ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್: ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬೆಳಗಾವಿಯ ಒಂದೇ ಕಾಲೇಜಿನ ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಇಂಜಿನಿಯರಿಂಗ್ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದಿದ್ದರೆ, ಬೆಳಗಾವಿಯಲ್ಲೇ ಡಿಗ್ರಿ ವ್ಯಾಸಂಗ ಮಾಡುತ್ತಿದ್ದ ಯುವಕ, ಆಗಾಗ ಪ್ರೇಯಸಿ ಭೇಟಿಗೆ ಬರುತ್ತಿದ್ದ. ಆ ವೇಳೆ ಇಬ್ಬರೂ ನಗರದ ಲಾಡ್ಜ್​ನಲ್ಲಿ ತಂಗುತ್ತಿದ್ದರು. ಈ ವೇಳೆ ಸರಸ ಸಲ್ಲಾಪದ ದೃಶ್ಯವನ್ನು ಯುವಕ ಮೊಬೈಲ್​ನಲ್ಲಿ ಸೆರೆಹಿಡಿದಿದ್ದ. 3 ವರ್ಷದಿಂದ ಇಬ್ಬರೂ ಹಲವು ಬಾರಿ ಬೆಂಗಳೂರಿನ ಲಾಡ್ಜ್​ಗಳಲ್ಲಿ ಸೇರಿದ್ದು, ಪ್ರೇಯಸಿ ಜತೆಗೆ ದೈಹಿಕ ಸಂಪರ್ಕದ ನೂರಾರು ವಿಡಿಯೋ ಯುವಕ ತನ್ನ ಲ್ಯಾಪ್​ಟಾಪ್​ನಲ್ಲಿ ಸಂಗ್ರಹಿಸಿಟ್ಟಿದ್ದ. ಇತ್ತೀಚೆಗೆ ಪ್ರೇಯಸಿ ಜತೆ ಮನಸ್ತಾಪದಿಂದ ರೊಚ್ಚಿಗೆದ್ದ ಯುವಕ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದ. ಆತಂಕಗೊಂಡ ಯುವತಿ ಸೈಬರ್ ಠಾಣೆ ಮೆಟ್ಟಿಲೇರಿದ್ದಳು. ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಕಾರಣಗಳೇನು?: ಜಾಲತಾಣಗಳಲ್ಲಿ ಪರಿಚಯ ಆಗುವ ಅಪರಿಚಿತರೊಂದಿಗೆ ಸ್ನೇಹ ಬೆಳೆಸಿ ಮೋಸ ಹೋಗುವವರ ಸಂಖ್ಯೆ ದೊಡ್ಡದಿದೆ. ಹಣದ ಆಸೆ, ಪ್ರೀತಿಸಿದ ಯುವತಿ ಬೇರೆ ವ್ಯಕ್ತಿಯ ಜತೆಗೆ ವಿವಾಹವಾಗುವುದು, ಬೇರೆ ಸ್ನೇಹಿತನ ಜತೆಗೆ ಓಡಾಡುವುದು, ಪ್ರೀತಿಸಿ ಕೈ ಕೊಡುವುದು, ವೈಯಕ್ತಿಕ ದ್ವೇಷ ಕಾರಣಕ್ಕೆ ಕಿಡಿಗೇಡಿಗಳು ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net