ಸಿನಿಮಾ ಕ್ಷೇತ್ರಕ್ಕೂ ವಿಆರ್​ಎಲ್​ ಸಂಸ್ಥೆ ಎಂಟ್ರಿ!

vijaya sankeshwara ananda sankeshwara
Published on

ಹುಬ್ಬಳ್ಳಿ: ಸಾರಿಗೆ, ಪತ್ರಿಕೋದ್ಯಮ ಸೇರಿ ಅನೇಕ ಯಶಸ್ವಿ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ದೇಶದ ಉದ್ಯಮಶೀಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿಆರ್​ಎಲ್​ ಸಂಸ್ಥೆ ಸಿನಿಮಾ ಕ್ಷೇತ್ರಕ್ಕೂ ಎಂಟ್ರಿ ಕೊಡಲು ಸಜ್ಜಾಗಿದೆ.

ವಿಆರ್​ಎಲ್ (ಲಿ.) ದೇಶದ ಅತ್ಯಂತ ದೊಡ್ದ ಟ್ರಾನ್ಸ್​ಪೋರ್ಟೆಷನ್ ಸಂಸ್ಥೆಯಾಗಿದೆ. ವಿಆರ್​ಎಲ್​ ಮೀಡಿಯಾ ಗ್ರೂಪ್​ನ 'ವಿಜಯವಾಣಿ' ಕರ್ನಾಟಕದ ನಂ.1 ಪತ್ರಿಕೆ. 'ದಿಗ್ವಿಜಯ ನ್ಯೂಸ್'​ ರಾಜ್ಯದ ಪ್ರಮುಖ ಸುದ್ದಿವಾಹಿನಿ. ಹಲವು ರಂಗಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ವಿಆರ್​ಎಲ್​ ಸಮೂಹ ಸಂಸ್ಥೆ ಇದೀಗ ಸಿನಿಮಾ ರಂಗದಲ್ಲೂ ತನ್ನ ಛಾಪು ಮೂಡಿಸಲು ಅಣಿಯಾಗುತ್ತಿದೆ. ಈ ಬಗ್ಗೆ ವಿಆರ್​ಎಲ್ ಸಮೂಹ ಸಂಸ್ಥೆಗಳ‌ ಎಂಡಿ ಆನಂದ ಸಂಕೇಶ್ವರ ಅವರೇ ಮಾಹಿತಿ ನೀಡಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸೋಮವಾರ ಹುಬ್ಬಳ್ಳಿಯಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ ಹಮ್ಮಿಕೊಂಡಿದ್ದ ವಾಕಥಾನ್​ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ವಿಆರ್​ಎಲ್ ಸಮೂಹ ಸಂಸ್ಥೆಗಳ‌ ಎಂಡಿ ಆನಂದ ಸಂಕೇಶ್ವರ ಅವರು, ನಮ್ಮ‌ ತಂದೆ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್ ಸಿನಿಮಾ ನಿರ್ಮಾಣವಾಗುತ್ತಿದೆ. ಏಳೆಂಟು ತಿಂಗಳಲ್ಲಿ ಸಿನಿಮಾ ತಯಾರಾಗಲಿದೆ. ವಿಆರ್​ಎಲ್ ಸಂಸ್ಥೆಯೇ ಸಿನಿಮಾ ನಿರ್ಮಾಣ ಮಾಡುವ ಚಿಂತನೆ‌ ಇದೆ‌ ಎಂದು ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net